ಹನಿಗಳು

ಎಚ್ಚರಿಕೆ

ನಿನ್ನ ಮನವನ್ನು
ಚಿಂತೆಯ ಅಗ್ನಿಕುಂಡಕ್ಕೆ
ಅಪರ್ಿಸುವಾಗ
ಅದರೊಳಗಿನ ನಾನೂ
ಕರಕಾಗುವೆ
ಎಂಬ ನೆನಪು
ನಿನಗಿರಲಿ..

%%%%%

ಅಕಟಕಟಾ

ಮನಸು ಚುಕ್ಕಿಯಿಟ್ಟಿತು
ಹೃದಯ ಚಿತ್ರ ಬಿಡಿಸಿತು
ಕನಸು ಬಣ್ಣ ತುಂಬಿತು
ವಿಧಿ ಅಳಿಸಿ ಹಾಕಿತು

%%%%%

ಪರಿಣಾಮ

ನಿನ್ನ ನಿಟ್ಟುಸಿರ ಬಿಸಿಗೆ
ನನ್ನ ಕನಸಿನ ಹೂಗಳು
ಒಣಗಿ ಹೋದವು..

ನಿನ್ನ ಕಣ್ಣೀರ ಹನಿಗೆ
ಮನದ ರಂಗೋಲಿಗಳು
ಕದಡಿ ರಾಡಿಯಾದವು..

ನಿನ್ನ ನಡಿಗೆಯ ಭಾರಕ್ಕೆ
ನನ್ನ ಉತ್ಸಾಹದ ಬುಗ್ಗೆಗಳು
ಒಡೆದು ಮರೆಯಾದವು..

ನಿನ್ನ ದುಗುಡದ ಪರಿಗೆ
ನನ್ನ ನಿರೀಕ್ಷೆ ಹಕ್ಕಿಗಳು
ರೆಕ್ಕೆ ಮುರಿದು ನರಳಿದವು..

ನಿನ್ನ ನೋವಿನ ದನಿಗೆ
ನನ್ನ ಮಧುರಾಲಾಪಗಳು
ಕೊರಳಲ್ಲೇ ಇಂಗಿಹೋದವು..

%d bloggers like this: