ಹಲಸಿನ ಬೀಜ… ಸುಕ್ರುಂಡೆ ತಿನ್ನುವ ಮಜ..

“ಹಸಿದು ಹಲಸು; ಉಂಡು ಮಾವು” ಅಂತ ಗಾದೆಯಿದ್ದರೂ ನಂಗೆ ಈ ಎರಡು ಹಣ್ಣುಗಳು ಹಸಿದಾಗ, ಹಸಿವಿಲ್ಲದಾಗ, ಉಂಡಾಗುವ ಮೊದಲು, ನಂತರ, ಊಟದ ನಡುವೆ ಯಾವಾಗ ಸಿಕ್ಕರೂ ಸರಿ ಗುಳುಂ ಗುಳುಂ. ಈ ಹಲಸಿನ ವಿಶೇಷವೆಂದರೆ ಬಹುಪಯೋಗ. ತುಂಬ ಎಳೆಯದಾದರೆ ಇಡಿಡೀ ಹಾಕಿ ಪಲ್ಯ, ಸ್ವಲ್ಪ ಬಲಿತ ಮೇಲೆ ಸಾಂಬಾರು, ಮಜ್ಜಿಗೆ ಹುಳಿ, ಬೇಳೆಯಾದ ನಂತರ ತೊಳೆ ತೆಗೆದು ಮತ್ತೆ ಅಡಿಗೆ. ಬೇಳೆಯದು ಮತ್ತಷ್ಟು ವಿಧದ ಐಟಮ್ಸ್. ಹಸಿ ಬೇಳೆ ಸಾಂಬಾರಿಗೆ, ಕೆಲವು ಪಲ್ಯಗಳಿಗೆ, ಒಣಗಿದ ಬೇಳೆ ಸಾಂತಾಣಿಗೆ ಬಹೂಪಯೋಗಿ ಮತ್ತು ಬಹು ರುಚಿ..

ಬೇಕಾಗುವ ಸಾಮಗ್ರಿ : ನನ್ನ ಇಂಥ ಅಡುಗೆ ಎಲ್ಲವೂ ಕಣ್ಣಳತೆ ಆದ ಕಾರಣ ಪಕ್ಕಾ ಅಳತೆ ಹೇಳುವುದು ಕಷ್ಟ.

 1. ಹಲಸಿನ ಬೀಜಗಳು (ಬಿಸಿಲಿನಲ್ಲಿಟ್ಟು ಒಣಗಿಸದೆ ಇರುವಂಥವು) – 20 ರಿಂದ 25
 2. ಬೆಲ್ಲ – ಸಿಹಿಗೆ ಬೇಕಾದಷ್ಟು
 3. ಮೈದಾ – ಸುಮಾರು ಕಾಲು ಕಿಲೋದಷ್ಟು.
 4. ತೆಂಗಿನಕಾಯಿ – ಅರ್ಧ
 5. ಉಪ್ಪು
 6. ಕರಿಯಲು ಎಣ್ಣೆ

ಮೊದಲು ಬೀಜದ ಸಿಪ್ಪೆಯನ್ನು ಪೂರ್ತಿಯಾಗಿ ತೆಗೆಯಬೇಕು. ಅಂದರೆ ಹೊರ ಕವಚದಂಥದ್ದನ್ನು ಮಾತ್ರವಲ್ಲ, ಒಳಗೆ ಕಂದು ಬಣ್ಣದಂಥದ್ದಿರುತ್ತದಲ್ಲ  ಸಿಪ್ಪೆಯನ್ನು ಕುಡಾ ಚಾಕುವಿನಲ್ಲಿ ಕೆರೆದು ತೆಗೆದುಕೊಳ್ಳಬೇಕು. ಪೂರ್ತಿ ಸಿಪ್ಪೆ ಹೋಗಿ ಬೆಳ್ಳಗಾದರೆ ಬಲು ರುಚಿ. ಇಲ್ಲದೇ ಹೋದರೆ ಎಷ್ಟಾಗುತ್ತದೋ ಅಷ್ಟು ತೆಗೆಯಬೇಕು. (ಚಿತ್ರ 1) ನಂತರ ಉಪ್ಪು ಹಾಕಿ ಚೆನ್ನಾಗಿ ಬೇಯಿಸಬೇಕು. ಕುಕ್ಕರಿನಲ್ಲಾದರೆ 5-6 ವಿಷಲ್ ಆದರೂ ಸರಿಯೇ. ನೀರು ಬಸಿದ ನಂತರ ಬೇಳೆ, ತೆಂಗಿ ತುರಿ ಮತ್ತು ಬೆಲ್ಲ ಸೇರಿಸಿ. ಬೆಲ್ಲ ಮತ್ತು ತೆಂಗಿನ ತುರಿ ಸೇರಿಸಿದಾಗ ಬೆಲ್ಲ ಕರಗಿ ನೀರಾಗುತ್ತದೆ. (ಚಿತ್ರ 2). ನೀರು ಆರುವವವರೆಗೂ ಸಣ್ಣ ಉರಿಯಲ್ಲಿ ಬೇಯಿಸಬೇಕು. (ಹೀಗೆ ತೆಂಗಿನಕಾಯಿ ಸೇರಿಸಿದ ನಂತರ ಬೇಯಿಸಿದರೆ ತಿಂಡಿ ಒಂದೆರಡು ದಿನ ಹಾಳಾಗದೆ ಉಳಿಯುತ್ತದೆ.) ಆಮೇಲೆ ಈ ಮಿಶ್ರಣವನ್ನು ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಇದನ್ನು ರುಬ್ಬಬೇಕು. ರುಬ್ಬಿದಾಗ ಅದು ಗಟ್ಟಿಯಾಗಿ ಉಂಡೆ ಮಾಡಲು ಬರುತ್ತದೆ. (ಚಿತ್ರ 3). ನಂತರ ಉಂಡೆ ಮಾಡಬೇಕು (ಚಿತ್ರ 4). ಉಂಡೆ ಸಣ್ಣದಿದ್ದರೆ ಚೆನ್ನಾಗಿ ಬೇಯಲು ಅನುಕೂಲ. ಮೈದಾ ಹಿಟ್ಟನ್ನು ಸ್ವಲ್ಪೇ ಸ್ವಲ್ಪ ಪ್ಪು ಹಾಕಿ ಬೊಂಡಾ ಹಿಟ್ಟಿನ ಹದದಲ್ಲಿ ನೀರಿನಲ್ಲಿ ಕಲಸಿಕೊಳ್ಳಬೇಕು. ಕೊನೆಗೆ ಎಣ್ಣೆ ಇಟ್ಟು ಕೊಂಡು ಉಂಡೆಗಳನ್ನು ಹಿಟ್ಟಿನಲ್ಲಿ ಅದ್ದಿ (ಮುಳಕಾ ಥರ) ಎಣ್ಣೆಗೆ ಬಿಡಬೇಕು. ರುಚಿಯಾದ ಸುಕ್ರುಂಡೆ ರೆಡಿ (ಚಿತ್ರ 5).

ಹಲವಾರು Nuetrients ಹೊಂದಿರುವ ಹಲಸಿನ ಬೀಜ ಆರೋಗ್ಯಕ್ಕೂ ಒಳ್ಳೆಯದಾದ ಕಾರಣ ಅದನ್ನು ಶುಚಿಯಾಗಿ ತೊಳೆದು ಆರಿಸಿ ಹಾಳಾಗದಂತೆ ತೆಗೆದಿಡಲು ಸಾದ್ಯವಾದರೆ ವರ್ಷದ ಯಾವ ಸೀಸನ್ ನಲ್ಲಿ ಕೂಡ ದನ್ನು ತಯಾರಿಸಿ ಹಲಸಿನ ರುಚಿ ಮತ್ತೆ ಮೆಲುಕು ಹಾಕಿಕೊಳ್ಳಬಹುದು.

%%%%%%%%%%%%%%%%

3 ಟಿಪ್ಪಣಿಗಳು (+add yours?)

 1. Anuradha.rao
  ಜುಲೈ 21, 2012 @ 12:04:04

  ಮಾಡಿನೋಡಿ ಹೇಳುತ್ತೇನೆ …ಬರೆದಿರುವ ರೀತಿ ಮಾಡೇ ಬಿಡೋಣ ಅನ್ನಿಸುವ ಹಾಗಿದೆ !!

 2. minchulli
  ಜುಲೈ 21, 2012 @ 12:07:42

  Anu ಮಾ… ನಿಮ್ಮ ಪ್ರೀತಿಗೆ Ummmmmmmmmm….

 3. Badarinath Palavalli
  ಸೆಪ್ಟೆಂ 11, 2012 @ 01:49:45

  ಒಳ್ಳೆಯ ಆರೋಗ್ಯಕರವಾದ ತಿನಿಸಿದು. ಖ್ಂಡಿತ ಮನೆಯಲ್ಲಿ ಪ್ರಯತ್ನಿಸುತ್ತೇವೆ.

  ನಿಮ್ಮ ಬ್ಲಾಗ್ ಮಾಹಿತಿ ಪೂರ್ಣವಾಗಿದೆ. ಇನ್ನು ಮೇಲೆ ನಾನು ಇಲ್ಲಿಗೂ ಬರುತ್ತೇನೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: