ಆಸೆ

ಅವು ಪಿಯುಸಿಯ ದಿನಗಳು. ರೂಲ್ಸು ರೆಗ್ಯುಲೇಷನ್ ತುಂಬಿದ್ದ ಹೈಸ್ಕೂಲು ಮುಗಿಯಿತೆಂದರೆ ಅದೇನೋ ಸಂಭ್ರಮ. ಸ್ವತಂತ್ರವಾಗುವ ಭಾವ. ಅಡಾಲಸೆನ್ಸ್ ದಿನಗಳೇ ಹಾಗೆ.. ಮನದಂಗಳದಲ್ಲಿ ಬಣ್ಣ ಬಣ್ಣದ ರಂಗೋಲಿ.. ಆಸೆ, ಗುರಿ, ಕನಸು ಯಾವುದೂ ನನಗಾವಾಗ ಸ್ಪಷ್ಟವಿರಲಿಲ್ಲ. ಅಸಲಿಗೆ ಅವುಗಳ ನಡುವಿನ ವ್ಯತ್ಯಾಸ ಕೂಡ ಗೊತ್ತಿರಲಿಲ್ಲ. ಅಂಥ ದಿನಗಳಲ್ಲಿ ಕವನಗಳನ್ನು ಬರೆಯದವರು ಬಹುಶಃ ಯಾರೂ ಇರಲಿಕ್ಕಿಲ್ಲ. ನಾನೂ ಮನ ಬಂದಂತೆ ಗೀಚಿದ್ದು ಆವಾಗಲೇ. ನಮ್ಮ ಎಸ್.ಡಿ.ಎಂ ಕಾಲೇಜು ಪಠ್ಯೇತರ ಚಟುವಟಿಕೆಗಳಿಗೆಲ್ಲ ತುಂಬ ಪ್ರೋತ್ಸಾಹ ಕೊಡುತ್ತಿದ್ದ ಕಾರಣ ನಮ್ಮ ಬರಹಗಳು ಕಾಲೇಜಿನ ಪ್ರಾಯೋಗಿಕ ಪತ್ರಿಕೆಗಳಲ್ಲಿ, “ಚಿಗುರು” ಮುಂತಾದವುಗಳಲ್ಲಿ ಪ್ರಕಟವಾಗುತ್ತಿತ್ತು. ನನಗಂತೂ ಹಿಮಾಲಯ ಗೆದ್ದಂಥ ಖುಷಿ ಕೊಡುವ ಸಂಗತಿಯದು. ಪಿಯುಸಿಯಲ್ಲಿ ನನ್ನ ಬೆಂಚಿನಲ್ಲಿ ಕೂಡುತ್ತಿದ್ದ ಒಂದಿಬ್ಬರು “ತುಳು ಭಾಷೇಲಿ ಬರಿ ನೋಡೋಣ” ಅಂತ ಚಾಲೆಂಜ್ ಥರಾ (?) ಹೇಳಿದ್ದರ ಫಲ ಈ ಕವನ. ತುಳು ನನ್ನ ಮಾತೃ ಭಾಷೆ ಅಲ್ಲದಿದ್ದರೂ ಅಷ್ಟೇ ಅತ್ಮೀಯವಾದ ಹೃದಯದ ಭಾಷೆ; ತುಳು ಮಾತು ಕೇಳಿದರೆ ಸಾಕು ಕಿವಿ ನೆಟ್ಟಗಾಗುತ್ತದೆ. ನಮ್ಮೂರ ಮಂದಿಗೆ ಯುನೀಕ್ ಆದ ಐಡೆಂಟಿಟಿ ಕೊಡುವುದು ಇದೇ ಭಾಷೆ. ಅಂದು ಬರೆದ (ಬಹುಶಃ 1994ರಲ್ಲಿರಬೇಕು) ಈ ಪುಟ್ಟ ಕವನದಂಥದ್ದು (?) ಇಲ್ಲಿದೆ ಓದಿಕೊಳ್ಳಿ.

ಆಸೆ

ಪೊರ್ಲುದ ಪ್ರಕೃತಿಡ್ ತೆಲಿಪುನ
ಪಜಿ ಇರೆತ ಮಿತ್ತ್…
ಕಮ್ಮೆನ ಕೊರ್ದು ನಲಿಪುನ
ಪೂತ ರಾಸಿದ ಮಿತ್ತ್…
ಪುಣ್ಣಮೆದ ಚಂದ್ರನ ಮಿತ್ತ್…
ಬಾಲೆ ಕಂಜಿದ ಬಿಮ್ಮದ ಮಿತ್ತ್…
ಸಮುದ್ರದ ನೀರ್ದ ಮಿತ್ತ್…
ನೀಲಿ ಬಾನದ ಮಿತ್ತ್…
ಮಾಲೆ ಕಟ್ಟಿನ ಮೋಡದ ಮಿತ್ತ್…
ಎನ್ನ ಮನಸ್ದ ಗೋಡೆದ ಮಿತ್ತ್…
ಕಣ್ಣ ಬೊಂಬೆದ ಮಿತ್ತ್…
ಮನಸ್ ದಿಂಜಿದ್ ಬರೆಪುನ ಆಸೆ
ನಿನ್ನ ಮೋಕೆದ ಪುದರ್ನ್ …

%%%%%%%%%%

ತುಳು ಬರದವರು ಜಗಳಕ್ಕೆ ಬೀಳುವುದು ಬೇಡವೆಂಬ ಭಯಕ್ಕೆ ಅದರ ಕನ್ನಡ ರೂಪವೂ ಇದೆ ನೋಡಿ.
(ಇದು ಅಕ್ಷರಕ್ಷರ ಅನುವಾದವಲ್ಲ; ಭಾವಾನುವಾದ)

ಆಸೆ

ಸೃಷ್ಟಿಯ ಮಡಿಲಲ್ಲರಳಿದ
ಚಿಗುರೆಲೆಗಳ ಮೇಲೆ…
ಘಮಘಮಿಸಿ ನಗುವ
ಸುಮ ರಾಶಿಯ ಮೇಲೆ…
ಹುಣ್ಣಿಮೆ ಚಂದ್ರನ ಮೇಲೆ…
ಎಳೆಗರುವಿನ ತುಟಿಗಳ ಮೇಲೆ…
ಸಪ್ತ ಸಾಗರದ ನೀಲ ನೀರಿನ ಮೇಲೆ…
ಬಾನ ವಿಸ್ತಾರದ ಮೇಲೆ…
ಮೇಘ ಮಾಲೆಗಳ ಮೇಲೆ…
ಮಿನುಗುವ ಚಿಕ್ಕಿಗಳಿಂದಲೇ ಬರೆವಾಸೆ
ನಿನ್ನ ಮೋಹಕ ಹೆಸರನು…

%%%%%%%%%

18 ಟಿಪ್ಪಣಿಗಳು (+add yours?)

 1. mounesh
  ಆಕ್ಟೋ 01, 2009 @ 16:30:21

  soku undu… masth kushi aand.. nanala barele..

 2. ಮಲ್ಲಿಕಾರ್ಜುನ.ಡಿ.ಜಿ.
  ಆಕ್ಟೋ 02, 2009 @ 01:14:46

  ನನ್ನ ಸ್ನೇಹಿತರೊಬ್ಬರು ಟೀಚರ್. ಅವರೊವ್ವೆ ಹೇಳಿದ್ದರು ಈ ಅಡೋಲಸೆಂಟ್ ವಯಸ್ಸಿನಲ್ಲಿ ಏನಾದರೂ ಕಥೆ ಕವನ ಇತ್ಯಾದಿ ಏನಾದರೂ ಚಟುವಟಿಕೆಯಲ್ಲಿ ತೊಡಗಿಕೊಂಡರೆ ನಾರ್ಮಲ್. ಯಾವುದರಲ್ಲೂ ಆಸಕ್ತಿಯಿರದಿದ್ದರೆ ಅಬ್ನಾರ್ಮಲ್ ಅಂತ!!!
  ಕವನ ಹಳೇ ವೈನಿನಂತೆ ವೈನಾಗಿದೆ. ಇನ್ನೂ ಹೆಸರು ಬರೆದಿಲ್ವಾ?!!!

 3. minchulli
  ಆಕ್ಟೋ 02, 2009 @ 07:02:42

  ಥ್ಯಾಂಕ್ಸ್ ಮೌನೇಶ್.. ಬರೆಯರೆ ಟ್ರೈ ಮಲ್ಪುವೆ…

 4. minchulli
  ಆಕ್ಟೋ 02, 2009 @ 07:03:29

  ಮಲ್ಲಿಕ್ ಥ್ಯಾಂಕ್ಸ್… ಹೆಸರು ಬರೀಬೇಕು ನಕ್ಷತ್ರದಂಥ ಪೆನ್ ಹುಡುಕ್ತಾ ಇದ್ದೀನಿ…

 5. ಸುಪ್ತದೀಪ್ತಿ
  ಆಕ್ಟೋ 02, 2009 @ 18:10:02

  ಭಾರೀ ಸೋಕು ಉಂಡುಯೆ ಈರೆನ ಆಸೆ. ಇಂಚಿನ ಆಸೆ ನನಲಾ ಬರಡ್, ಬೇಗ ಬೇಗ ಅವು ಮನಸ್’ಡ್ ದಿಂಜಡ್ ಪಂಡ್’ದ್ ಪರಕೆ ಎನ್ನವು.

 6. paraanjape
  ಆಕ್ಟೋ 04, 2009 @ 06:27:46

  ಕವನ ಲಾಯ್ಕು೦ಡು, ನನಲಾ ಬರೇಲೆ ತುಳು ಕವನ

 7. shivu.k
  ಆಕ್ಟೋ 04, 2009 @ 11:23:06

  ಶಮ,

  ಕವನವನ್ನು ಕನ್ನಡದಲ್ಲಿ ಓದಿದೆ. ಚೆನ್ನಾಗಿದೆ. ತುಳು ಬರುವುದಿಲ್ಲವಲ್ಲ ಏನು ಮಾಡಲಿ? ಆದ್ರೂ ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು.

 8. ಮಾಲಾ
  ಆಕ್ಟೋ 05, 2009 @ 09:28:14

  ಎಡ್ಡೆ ಉಂಡು ಕವನ.
  ಮಾಲಾ

 9. Dileep Hegde
  ಆಕ್ಟೋ 05, 2009 @ 18:01:40

  ಕವನ ಸುಂದರವಾಗಿದೆ..
  ನನಗೆ ತುಳು ಬರೋದಿಲ್ಲ…
  ಕನ್ನಡದಲ್ಲಿ ಕೊಟ್ಟಿದ್ದಕ್ಕೆ ತುಂಬಾ ಥ್ಯಾಂಕ್ಸ್…. 🙂

 10. goutam hegde
  ಆಕ್ಟೋ 10, 2009 @ 16:28:48

  nimma blog baraha chendagide:)

 11. svatimuttu
  ಆಕ್ಟೋ 17, 2009 @ 08:14:46

  tumbaa chennagide…. kannadallirodu.. tulu nijavagalu arta aglilla akka..:)
  -Inchara(svatimuttu)

 12. Jayalaxmi Patil
  ಆಕ್ಟೋ 20, 2009 @ 18:52:56

  🙂 ಚೆನ್ನಾಗಿದೆ.

 13. Sibanthi
  ನವೆಂ 23, 2009 @ 16:28:08

  ಎಲ್ಲಿ ಹೋದಳು ಶಮಾ?

 14. chandr
  ನವೆಂ 27, 2009 @ 14:53:48

  ma.. maa…

 15. minchulli
  ಡಿಸೆ 22, 2009 @ 10:39:39

  ಧನ್ಯವಾದಗಳು. ಆಸೆ ಕವನಕ್ಕೆ ಸ್ಪಂದನವಿತ್ತ ಎಲ್ಲರಿಗೆ.

 16. minchulli
  ಡಿಸೆ 22, 2009 @ 10:42:24

  ಮತ್ತೆ ಬಂದಳು ಶಮಾ…

 17. Vanitha
  ಏಪ್ರಿಲ್ 10, 2010 @ 14:54:00

  ಮಸ್ತ್ ಲಾಯಿಕ್ಕುಂಡು ತುಳು ಕವನ..:)
  ಹೀಗೆ ಬ್ಲಾಗ್ ಗಳ ಮೂಲಕ ನಿಮ್ಮ ಬ್ಲಾಗ್ ಗೆ ಬಂದೆ..ತುಂಬಾ ಚೆನ್ನಾಗಿದೆ ಬ್ಲಾಗ್ ಬರಹಗಳು:)

 18. minchulli
  ಏಪ್ರಿಲ್ 11, 2011 @ 12:32:01

  thumbaa thanks .. magu aada kaarana thumba dina e kade baralilla. adakke nimage uttarisodu thadavaythu. bejar malthonodchi

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: