ಮನದಂಗಳದ ಮಲ್ಲಿಗೆ ಬಳ್ಳಿ

Hoo Preethi
ಬದುಕೆಂಬ ಭಾವ ಲೋಕದ ಮಹಾನ್ ಅಚ್ಚರಿಯಿವನು. ಇಂಥವ ಇನ್ನೊಬ್ಬನಿರಲು ಸಾಧ್ಯವೇ ಇಲ್ಲ ಎಂಬ ನಂಬಿಕೆ ಹುಟ್ಟಿಸಿದವನು. ವರ್ಷಗಳಿಂದ ಕಾಡುತ್ತಿದ್ದ ಒಗಟುಗಳಿಗೆ ಉತ್ತರವೆನಿಸುತ್ತಲೇ ಎಂಥ ಒರಟು ಒಗಟಿವನೆಂಬ ಪ್ರಶ್ನೆ ಹುಟ್ಟಿಸಬಲ್ಲ ತಾಕತ್ತಿನವನು. ಉತ್ತರ ಸಿಗದೇ ತಡಕಾಡುತ್ತಿದ್ದರೆ ಮೀಸೆಯಂಚಿನಲಿ ನಗುತ್ತ ಮಡಿಲಿಗೇ ಬಂದು ಪ್ರಶ್ನೆ ಮರೆಸುವ. ಘಟ್ಟದ ಮೇಲಿಂದ ಇಳಿದು ಬಂದು ಅದಾವ ಮಾಯೆಯಲ್ಲೋ ಬಯಲಿನ ಹುಡುಗಿಯನ್ನು ಹೊತ್ತೊಯ್ದ ಹುಡುಗ. ಉತ್ತರದಲ್ಲೇ ಪ್ರಶ್ನೆ ಹುಟ್ಟಿಸಿ ಕಣ್ಣು ಮಿಟುಕಿಸಬಲ್ಲ ಹುಡುಗಿಯನ್ನು ಮರುಳಾಗಿಸಿ ಸುಮ್ಮನೇ ಮೌನದ ಜೋಕಾಲಿಯಲ್ಲಿಟ್ಟು ತೂಗಿದ ಮಾಧವ.

ಲೋಕ ವಿನಾಶವಾದೀತೆಂಬುದು ಸ್ಪಷ್ಟವಿದ್ದರೂ ಗಂಗೆಯ ಬಿಟ್ಟ ಮಹದೇವನೋ, ವಿನಾಶ ತಡೆಯಲು ಆಪೋಶನಗೈದ ಭಗೀರಥನೋ ಎಂಬ ಭ್ರಮೆ ಹುಟ್ಟಿಸಬಲ್ಲ ಧೀರ. ತನ್ನ ಹರಿವಿನುದ್ದಕ್ಕೂ ಹಸಿರ ಸೆರಗು ಮೂಡಿಸಿದ ಗಂಗೆಯೂ ಇವನೇನಾ ? ಇವನ ಮೌನ ಸಹಿಸಿಕೊಳ್ಳುವ ಶಕ್ತಿಯಿಲ್ಲ; ಮೌನದ ಕೋಟೆ ಕೆಡಹುವ ಯುಕ್ತಿಯಿಲ್ಲ. ಪ್ರಿಯನಾ, ಗಂಡನಾ, ಒಲಿದು ಬಂದ ದೇವನಾ, ಎಲ್ಲವೂ ಮೇಳೈಸಿದ ಗೆಳೆಯನಾ… ಉಹುಂ.. ಅರ್ಥಗಳ ಸೂತ್ರಕ್ಕೆ ನಿಲುಕದವನಿವನು. ಹಿಂದೆ ಮುಂದಿನವುಗಳಲಿ ನಂಬಿಕೆಯಿಲ್ಲದಾಗಲೂ ಜನ್ಮಾಂತರದ ಸಾಥಿ ಎನಿಸುತ್ತ ಒಮ್ಮೊಮ್ಮೆ ಮಗುವಿನಂತೆ, ಇನ್ನೊಮ್ಮೆ ನಗುವಿನಂತೆ ಆವರಿಸುವ.. ಸಿಟ್ಟು, ಸೆಡವು, ಮುನಿಸು, ಕೊರಗು, ಬೆರಗು ಎಲ್ಲ ಮುಖದ ಮೇಲಿನ ಮೊಡವೆಯಷ್ಟು ಸಹಜ. ಅಷ್ಟೇ ಹತ್ತಿರಿರುವ ಎಂದು ಕೈ ಚಾಚಿದರೆ ಎಲ್ಲೋ ಬಾನೆತ್ತರದ ನಕ್ಷತ್ರ.

ಬೇಕಾದ್ದನ್ನು ಪಡೆದೇ ತೀರುವ ಛಲದ ಬಳ್ಳಿ ಹುಟ್ಟಿದ್ದು ಇವನೆದೆಯಲ್ಲೇ; ಬೇಡಾದ್ದನ್ನು ನಿರಾಕರಿಸುವ ಜಾಣ್ಮೆ ಕೂಡ. ಜೀವವಿತ್ತ ತನ್ನ ಹಳ್ಳಿಯ ಅಷ್ಟೂ ವಿಸ್ಮಯಗಳು, ನಿರಾಡಂಬರತೆಯನ್ನು ತನ್ನಲ್ಲಿಟ್ಟುಕೊಂಡೇ ಜೀವನವಿತ್ತ ನಗರದ ನಾವೀನ್ಯತೆಯನ್ನು, ಸಾವಿರ ಝಲಕ್ ಗಳನ್ನು ದಿವ್ಯ ನಿರಾಳತೆಯ ಜತೆಗೇ ಮುಟಿಗೆಯಲ್ಲಿಟ್ಟುಕೊಂಡವ.

ಸದ್ದಿಲ್ಲದೇ ಸುಗ್ಗಿಯಲ್ಲರಳುವ ಮೊಗ್ಗಿನಂತೆ ನನ್ನಂಗಳಕೆ ಬಂದು ಪೂರ ಕಲರವದ ಚಪ್ಪರ ಬೆಳೆದವನು. ನಕ್ಷತ್ರಗಳ ತೋರಣ ಕಟ್ಟಿ ಚಂದಿರನ ದೀಪವಾಗಿಸಿದವನು. ಮಿಂಚಂತೆ ಬಂದು ನಕ್ಷತ್ರದ ಐಸಿರಿಯ ಮಡಿಲಲಿಟ್ಟವನು. ನಾ ಕಾಣದೇ ಇದ್ದ ಬದುಕಿನೆಳೆಗಳ ನಿರ್ಭಿಡೆಯಿಂದ ನನ್ನೆದುರು ಹರಡಿ ಜುಮ್ಮೆನಿಸಿದವನು. ನನಗೆ ನೀನೇ ದಿಕ್ಕು, ನೀನೇ ಗಮ್ಯವೆಂದಿದ್ದು ಕೇಳಿಸಲೇ ಇಲ್ಲವೇನೋ ಎಂಬಂತೆ ತನ್ನ ಪಾಡಿಗೆ ತಾನು ನಡೆವ ಮುಸಾಫಿರ್ ಇವನು. ಕಾದು ಕಾದು ಸಾಕಾಗಿ ಇನ್ನು ಈತ ಬರಲೊಲ್ಲವೆಂದು ನಿದ್ರಿಸಿದರೆ ಮಧ್ಯರಾತ್ರಿ ಕನಸಿನಂತೆ ಬಂದು ಎದೆಯ ಕದ ತಟ್ಟುವವನು. ವಿರಹದೆಲ್ಲ ಮುನಿಸನ್ನು ಕ್ಷಣ ಮಾತ್ರದಲ್ಲಿ ತುಟಿಕಚ್ಚಿ ಕರಗಿಸಿ ಬಿಡುವವನು. ನಿನ್ನೆ ರಾತ್ರಿ ನೋಯಿಸಿದ್ದು ನೆನಪೇ ಇಲ್ಲವೆಂಬ ತೆರದಲಿ ಮತ್ತೆ ಆವರಿಸಿ ಒಡಲಲ್ಲಿ ಒಲುಮೆಯ ಅಮೃತಬಳ್ಳಿ ಹಬ್ಬಿಸುವವನು. ಭಾರ ಬದುಕಿನ ದೂರ ದಾರಿಯ ಹಗುರಾಗಿಸಿ ನಮ್ಮ ಪ್ರೀತಿ ಪೊರೆಯುವವನು…

14 ಟಿಪ್ಪಣಿಗಳು (+add yours?)

 1. manasu
  ಆಗಸ್ಟ್ 31, 2009 @ 07:13:55

  ತುಂಬಾ ಚೆನ್ನಾಗಿದೆ, ನಿಮ್ಮ ಪ್ರೇಮ ಸಿಂಚನ ಅಧ್ಭುತವಾಗಿ ಮೂಡಿದೆ, ಮನಸೂರೆಗೊಂಡಿದೆ

 2. minchulli
  ಆಗಸ್ಟ್ 31, 2009 @ 07:23:47

  ಮನಸು, ಧನ್ಯವಾದ ನಿಮಗೆ.. ಬರಹ ಅಷ್ಟು ಭಾವ ಕಟ್ಟಿಕೊಟ್ಟರೆ ಸಾಕು ಖುಷಿ..

 3. ಸುಶ್ರುತ
  ಆಗಸ್ಟ್ 31, 2009 @ 07:51:45

  ಲಾಸ್ಟಿಗೆ ’ಅವನು ಯಾರು?’ ಅಂತ ಒಂದು ಹಾಕಿದಿದ್ರೆ ಇದು ಒಗಟಿನ ಹಾಗೆ ಆಗಿರೋದು.. 😉

  ನೈಸ್.

 4. minchulli
  ಆಗಸ್ಟ್ 31, 2009 @ 08:09:49

  ಸುಶ್ರುತ, ನನ್ನ ಮದುವೆಗೆ ಮೊದಲೇ ಇದನ್ನು ಬರೆದಿದ್ದರೆ ಬಹುಶಃ ಹಾಗೆ ಕೇಳುವ ಅವಕಾಶವಿತ್ತು… ಈಗ ಹಾಗೆ ಪ್ರಶ್ನೆ ಹಾಕಿದ್ರೆ ……
  ಮೆಚ್ಚಿದ್ದಕ್ಕೆ ವಂದೇ..

 5. Vikas
  ಆಗಸ್ಟ್ 31, 2009 @ 08:15:17

  idannu ava odidare eshtu khushiyagtano eno.. punyavantha ! 🙂

 6. minchulli
  ಆಗಸ್ಟ್ 31, 2009 @ 08:23:48

  ಮನಸನ್ನೇ ಓದಿದ ಧೀರ ಇದನ್ನು ಓದುವ… ಅವನು ಓದಿದರೆ ಅವನಿಗಿಂತ ಹೆಚ್ಚಿನ ಖುಷಿ ನನಗೆ.. ಧನ್ಯವಾದ ವಿಕಾಸ್..

 7. shivu.k
  ಆಗಸ್ಟ್ 31, 2009 @ 13:03:30

  ಶಮ,

  ಒಂದು ಸುಂದರ ಪ್ರೇಮ ಪ್ರಲಾಪ, ಭಾವನೆಗಳ ಝರಿ ಹರಿದಂತೆ. ಎಲ್ಲಾ ಸರಿ ಯಾರಾತ ಅಂತ ಹೇಳಲೇ ಇಲ್ಲವಲ್ಲ..

 8. Sibanthi Padmanabha
  ಆಗಸ್ಟ್ 31, 2009 @ 15:51:46

  Photo kooda tumba chennagide. nimma poorthi barahada bhaava adaralle eddu kuneetide kanri.

 9. ಮಲ್ಲಿಕಾರ್ಜುನ.ಡಿ.ಜಿ.
  ಆಗಸ್ಟ್ 31, 2009 @ 16:10:05

  ನಿಮ್ಮ ಬರಹ ಮಲ್ಲಿಗೆಯ ಚಿತ್ರದಂತೆ ಫ್ರೆಶ್ಶೊ ಫ್ರೆಶ್ಶು. ಅಂತಹ ಪತಿಯನ್ನು ಪಡೆದ ಅದೃಷ್ಟವಂತರು ನೀವಾದರೆ ಓದುವ ಅದೃಷ್ಟವಂತರು ನಾವು.
  ಹೊಟ್ಟೆ ಉರಿಸಲಿಕ್ಕೆ ಎಲ್ಲಿಗೋ ಪ್ರವಾಸ ಹೊರಟಿದ್ದೀರಿ. ಒಳ್ಳೊಳ್ಳೆ ಚಿತ್ರಗಳನ್ನು ತನ್ನಿ. Happy Journey.

 10. arthapoorna
  ಸೆಪ್ಟೆಂ 02, 2009 @ 13:10:35

  aksharalokada achhariya kinnari ……………..bhavalokada adbootha vismagallannu leelajaalavaagi….sputavagi…..spasta nirupaneyalli….moodisuva nimma jaannme,thanmeyathey….chaitanya………………..outstanding…..re

  Malligegey………. kampisuva and araluva….shakti maathra …ede ………………………….Nimagey…nimma ….baravanigegey…nooraru samskara managalannu aralisuva adammya chetanavide………………………nimma bhavalokada krishi saagali……nirantharawaagi…..mathastu acharigalondige.

 11. minchulli
  ಸೆಪ್ಟೆಂ 04, 2009 @ 04:30:22

  shivu, ನನ್ನ ಮನಸು ಕದ್ದ ಹುಡುಗ…. ಗೆದ್ದ ಹುಡುಗ…

 12. minchulli
  ಸೆಪ್ಟೆಂ 04, 2009 @ 04:33:33

  ಧನ್ಯವಾದ ಸಿಬಂತಿ, ಅದು ನಮ್ಮ ಮನೆಯ ಅಂಗಳದಲ್ಲಿ ಅರಳಿದ ಹೂವು …

 13. minchulli
  ಸೆಪ್ಟೆಂ 04, 2009 @ 04:44:51

  ಥ್ಯಾಂಕ್ಸ್ ಮಲ್ಲಿಕ್, ಪ್ರವಾಸ ಮುಗಿದರೂ ಜೋಶ್ ಇನ್ನೂ ಹಾಗೆ ಇದೆ. ನಿಮ್ಮ ಹೊಟ್ಟೆ ಉರಿ ಕಂಡು ಸಂತೋಷವಾಯ್ತು. ನೀವು ಹೇಳಿದ್ದು ನಿಜ . ನಾನು ಅದೃಷ್ಟವಂತೆ.

 14. minchulli
  ಸೆಪ್ಟೆಂ 04, 2009 @ 04:59:09

  ಅರ್ಥಪೂರ್ಣ, ನಿಮ್ಮ ವಿಶ್ವಾಸಕ್ಕೆ ಕೋಟಿ ನಮನ. ನಿಮ್ಮ ಮಾತಿಗೆ ಏನು ಹೇಳಲಿ ತಿಳಿಯದಾಗಿದೆ. ನಿಮ್ಮ ಅಭಿಮಾನಕ್ಕೆ ಮಾತುಗಳು ಬಾರದೆ ಮೂಕ ವಿಸ್ಮಿತೆ ನಾನು … ನನ್ನ ಬರಹ ಒಂದಷ್ಟು ಮನಗಳಿಗೆ ಖುಷಿ ಕೊಟ್ಟರೆ ಅಷ್ಟೇ ಸಾಕು ನಂಗೆ ಸಂತೋಷ…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: