ಪ್ರಶ್ನೆ

ಏನ ಬರೆಯಲಿ ಹೇಳು
ಬರಿದಾಗಿದೆ ಭಾವ
ಉಲಿಯುವೆನೆಂದರೆ ಸಖಾ
ಬತ್ತಿ ಹೋಗಿದೆ ಜೀವ
ಎದೆಯ ತುಂಬೆಲ್ಲ
ಶಿಥಿಲ ಅವಶೇಷ
ಹುಡುಕಿ ಹುಡುಕಿ ಸೋತೆ
ಬೆಳಕು ಲವಲೇಶ
ಒಡೆದ ಹಡಗಿನ ತುಂಬ
ಕಣ್ಣೀರ ಸವಾರಿ
ಕಣ್ಣಳತೆಯಲಿದೆ ತೀರ
ಸಿಗುತಿಲ್ಲ ಗುರಿ
ಕೆಳೆಯ ಸುಧೆಯಿಂದ
ಸಾಂತ್ವನದ ಸಿಂಚನ
ಆದರೂ ಕಳೆಯಿಲ್ಲ
ಬಿಳುಪೇರಿದೆ ವದನ
ಮನದ ಹಾಳೆಯ ತುಂಬ
ಪ್ರಶ್ನೆಗಳ ಚಿತ್ತಾರ
ನೀಡುವೆಯಾ ಗೆಳೆಯಾ
ನಿನ್ನೆದೆಯ ಉತ್ತರ ?

12 ಟಿಪ್ಪಣಿಗಳು (+add yours?)

 1. Sushrutha
  ಜುಲೈ 14, 2009 @ 04:27:00

  Nice.. chanda kavana. 🙂

 2. srujan
  ಜುಲೈ 14, 2009 @ 08:35:07

  padyada aardrate ..
  padya ishtavaaythu.

 3. Jayalaxmi Patil
  ಜುಲೈ 14, 2009 @ 18:34:17

  ”ಒಡೆದ ಹಡಗಿನ ತುಂಬ
  ಕಣ್ಣೀರ ಸವಾರಿ
  ಕಣ್ಣಳತೆಯಲಿದೆ ತೀರ
  ಸಿಗುತಿಲ್ಲ ಗುರಿ’
  ಕವನವಾಗಿ ಈ ಸಾಲುಗಳು ಚೆನ್ನಾಗಿವೆ ಶಮಾ, ಆದರೆ ಇದೇನು ಇಷ್ಷ್ಟೊಂದು ನಿರಾಸೆ!?

 4. shivu.k
  ಜುಲೈ 16, 2009 @ 09:35:23

  ಪ್ರತಿಪದದಲ್ಲಿ ಭಾವತುಂಬಿರುವ ಕವನ ಚೆನ್ನಾಗಿದೆ…

 5. minchulli
  ಜುಲೈ 17, 2009 @ 06:24:15

  ಸುಶ್ರುತ ಸ್ವಾಗತ ನನ್ನ ಮನೆಗೆ.. ಹೀಗೇ ಬರುತ್ತಿರಿ… ಥ್ಯಾಂಕ್ಸ್.

 6. minchulli
  ಜುಲೈ 17, 2009 @ 06:24:55

  ಥ್ಯಾಂಕ್ಸ್ ಸೃಜನ್.. ನಿಮ್ಮ ಪ್ರೀತಿ ನಂಗೆ ಖುಷಿ..

 7. minchulli
  ಜುಲೈ 17, 2009 @ 06:36:57

  ಜಯಕ್ಕಾ.. ನೀವೇ ಹೇಳಿದಿರಲ್ಲ ಭಾವುಕತೆ ಅಂತ.. ಬದುಕಿನ ಸಣ್ಣ ಸಣ್ಣ ಸಂಗತಿಗಳು ನನ್ನನ್ನು ತುಂಬಾ ಕಾಡುತ್ತವೆ. ಮಾರನೇ ದಿನ ಆಗೋ ಅಷ್ಟರಲ್ಲಿ ತಂತಾನೇ ಸರಿಯಾಗಿರುತ್ತೇನೆ ಕೂಡ… ನಿಮ್ಮ ಪ್ರೀತಿಗೆ ಋಣಿ..

 8. minchulli
  ಜುಲೈ 17, 2009 @ 06:39:25

  ಥ್ಯಾಂಕ್ಸ್ ಶಿವೂ… ಭಾವ ತುಂಬಿದ ಬದುಕು ಮನಸು ನಂದು..

 9. arthapoorna
  ಜುಲೈ 26, 2009 @ 01:51:12

  niraaseyalli aasey adagidey……………allava ……………..noduva drishtikona swalpa change madikondarey…………….nimma guri….spastawagi kaanise …..aasey galu chiguralu saadya alva shama aware?

 10. arthapoorna
  ಜುಲೈ 26, 2009 @ 16:22:33

  nimma gelaya adeke nimage istu nirase madidarey….nimma kavana awara kallu manasa karagisali yendu hrudaya thumbi haaraisuvu ….

 11. minchulli
  ಜುಲೈ 28, 2009 @ 05:36:14

  ಹೌದು ಅರ್ಥಪೂರ್ಣ.. ನಿರಾಸೆಯೇ ಒಂದು ಆಸೆಗೆ ಆಸರೆ ಆಗಬಲ್ಲುದೇನೋ… ಜೀವನವೇ ಹಾಗಲ್ವಾ… ಕಟ್ಟಲು ಬೆಳಕಿನ ನಿರಂತರ ಚಕ್ರ.. ನಿಮ್ಮ ಕಾಳಜಿಗೆ ವಂದೇ.. ಹೀಗೆ ಬರುತ್ತಿರಿ…

 12. minchulli
  ಜುಲೈ 28, 2009 @ 05:50:40

  ನಿಮ್ಮ ಹಾರೈಕೆಗೆ ಥ್ಯಾಂಕ್ಸ್ ಅರ್ಥಪೂರ್ಣ…
  ಅಂದ ಹಾಗೆ ನಿಮಗೂ ಬರೆಯುವ ಕಲೆ ಸಿಧ್ಧಿಸಿದೆ… ಬರೆಯಿರಿ … ಓದಲು ನಾವಿದ್ದೇವೆ..

  ಮತ್ತೆ ನಿಮಗೊಂದು ಗುಟ್ಟು ಹೇಳುವೆ.. ಯಾರಿಗೂ ಹೇಳಬೇಡಿ.. ನನ್ನವನ ಕರಗಿಸಲು ಕವನ ಬೇಕಿಲ್ಲ… ನನ್ನ ನೆನಪು ಸಾಕು… ಅವನಲ್ಲಿ ಅಚ್ಚಾದ ಒಲವು ಸಾಕು … ಪ್ರೀತಿ ತುಂಬಿ ತುಳುಕುವ ಹುಣ್ಣಿಮೆ ಚಂದಿರ ಅವನು…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: