ಗೊತ್ತೇನು ?

Feel Loved
ಬದುಕಿನ ಹಾದಿಗೆ ಕಾಲಿಡುವ ಮೊದಲೇ
ಅರಳಿವೆ ಕನಸುಗಳು ಆಂಗಳದ ತುಂಬ
ನೀಲಿಯಾಕಾಶದಲ್ಲಿ ಹೊಳೆವ ತಾರೆಗಳಂತೆ
ಕಣ್ಣಲ್ಲಿ ಮೂಡಿಹುದು ನಿನ್ನ ಚಂದ್ರ ಬಿಂಬ

ಆರದೆಯೆ ಹೊಳೆವ ನಿನ್ನ ಕಂಗಳ ಕಾಂತಿ
ಸೂರ್ಯನಂದದಿ ದೇದೀಪ್ಯಮಾನ
ಎದೆಯ ಪ್ರೇಮಾಲಯಕೆ ನಂದಾದೀಪವದು
ಬಾಳನ್ನು ಸಿಂಗರಿಪ ಹೊನ್ನ ಕಿರಣ

ಮನಸೆಲ್ಲ ತುಂಬಿರುವ ನಿನ್ನುಸಿರ ಸೌಗಂಧ
ಹಬ್ಬಿದಂತೆ ಶ್ರೀ ಗಂಧದ ವಲ್ಲರಿ
ಮನೆ ತುಂಬ ಅಚ್ಚಾದ ನಿನ್ನ ಹೆಜ್ಜೆಯ ಗುರುತು
ಅಡಿಗಡಿಗೆ ಭರವಸೆಯ ಐಸಿರಿ

ನಿನ್ನ ಪ್ರೀತಿಯ ನವಿರಿಗೆಲ್ಲಿಯ ಸಾಟಿ
ಮೌನದಲಿ ಮೊಗ್ಗೊಡೆದು ಅರಳುವಂತೆ
ನೋವಿನ ನೆನಪುಗಳು ಹೇಳೆದೆಯೆ ಅಳಿದಿಹವು
ಸೂರ್ಯ ರಶ್ಮಿಗೆ ಕರಗೋ ಮಂಜಿನಂತೆ

ಒಣಗಿ ಬರಡಾಗಿರುವ ಎದೆಹೊಲವ ಉತ್ತು
ಹಸುರಾಗಿಸಲು ಕಾಯುತಿಹೆ ನಾನು
ಪ್ರೀತಿಯ ಮಳೆ ಸುರಿಸಿ ಹಸನು ಮಾಡಲು
ಪ್ರೇಮದ ನೇಗಿಲು ಹಿಡಿದಿರುವೆ ನೀನು

ಒಣಗಿರುವ ಕೊಂಬೆಯಲು ಹಸಿರುಕ್ಕಿಸುವ
ಸಂಜೀವಿನಿ ನಿನ್ನ ಒಲುಮೆಗಾಗಿ
ಹೃದಯದ ಬಾಗಿಲಿಗೆ ಆಸೆತೋರಣ ಕಟ್ಟು
ಕಾದಿರುವೆ ದೊರೆ ನಿನ್ನ ಬರುವಿಗಾಗಿ
***********

12 ಟಿಪ್ಪಣಿಗಳು (+add yours?)

 1. ವಿಜಯರಾಜ್ ಕನ್ನಂತ
  ಜುಲೈ 08, 2009 @ 12:52:36

  aaayurvaydyra blog ge hodre.. alli yenoo illavappa

 2. malathi S
  ಜುಲೈ 09, 2009 @ 13:15:04

  Dear Shama!
  kavana tumbaaaaaaaaaaaaaa muddaagide, mana muTTuvantide.
  heege bareyiri
  🙂
  ms

 3. arthapoorna
  ಜುಲೈ 09, 2009 @ 16:19:22

  nimmavara bagge ……………….great feeling…..nice …….

  Also u have made this blog so colourful….nimma manasina bannagala haage……we wish to see more colourful ….barahagalu….awaiting next kanasugalu.

 4. dharithri
  ಜುಲೈ 11, 2009 @ 03:47:05

  ಶಮಾಕ್ಕ…
  ತುಂಬಾ ದಿನಗಳ ನಂತರ ನಿಮ್ ಬ್ಲಾಗ್ ಕಡೆ ಬಂದಿರುವೆ. ಕವನ ಸರಳ ಹಾಗೂ ಅರ್ಥಪೂರ್ಣ. ಇಷ್ಟವಾತು…
  ಧನ್ಯವಾದಗಳು
  -ಧರಿತ್ರಿ

 5. svatimuttu
  ಜುಲೈ 11, 2009 @ 13:07:12

  ಗೊತ್ತಾಯ್ತು……ಅಕ್ಕ..:)…… ಆದಷ್ಟು ಬೇಗ ನಿಮ್ಮ ದೊರೆ ಬರಲಿ…. ಕವನ ಚೆನ್ನಾಗಿದೆ…
  ಇಂಚರ(ಸ್ವಾತಿಮುತ್ತು)

 6. minchulli
  ಜುಲೈ 17, 2009 @ 06:17:24

  thank u malathi … thanks a lot

 7. minchulli
  ಜುಲೈ 17, 2009 @ 06:20:01

  ಮನಸಿನ ಬಣ್ಣಗಳ ಹಾಗೆ …. ನನ್ನ ಮನಸಿನ ಬಣ್ಣಗಳ ಕಡೆಗೆ ನಿಮ್ಮ ಮನವು ತಿರುಗಿದ್ದು ಇಷ್ಟವಾಯ್ತು… ಮನಸನ್ನು ಹಾಗೆ ಹಸುರಾಗಿಸುವ ಇರಾದೆ ನನ್ನದು ಥ್ಯಾಂಕ್ಸ್.

 8. minchulli
  ಜುಲೈ 17, 2009 @ 06:22:05

  ಧರಿತ್ರಿ ಪುಟ್ಟಿ … ಥ್ಯಾಂಕ್ಸ್. ಬರುತ್ತಿರು.. ಬ್ಲಾಗಿಗೆ.. ಮನಸಿಗೆ.. ಮನೆಗೆ..

 9. minchulli
  ಜುಲೈ 17, 2009 @ 06:23:04

  ನನ್ನ ದೊರೆ ಬಂದಾಯ್ತು ಇಂಚರ .. ಥ್ಯಾಂಕ್ಸ್.

 10. minchulli
  ಜುಲೈ 17, 2009 @ 06:47:49

  ಹೌದು ವಿಜಯ್.. ಕ್ಷಮಿಸಿ. ಅವರು ಬ್ಲಾಗ್ ಅಪ್ ಡೇಟ್ ಮಾಡಲಾಗಿಲ್ಲ.. ನೀವು ಮಾಹಿತಿಗಾಗಿ http://www.sukruthamayurveda.com ಗೆ ಹೋಗಬಹುದಾಗಿದೆ.. ಅದು ನಮ್ಮದೇ ಆಯುರ್ವೇದಾಲಯ…

 11. ElenaLisvato
  ಆಗಸ್ಟ್ 06, 2009 @ 16:31:43

  Hey very nice blog!! Man .. Beautiful .. Amazing .. I will bookmark your blog and take the feeds also…

 12. minchulli
  ಆಗಸ್ಟ್ 11, 2009 @ 10:59:56

  thank u ElenaLisvato.. keep visiting ..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: