ಒಲವೆ ನಮ್ಮ ಬದುಕು ಮತ್ತು ಕನಸಿನ ಹೆಣ

Withered
ನಿನ್ನನ್ನ ಶ್ರೀಮಂತಿಕೆಯಲ್ಲಿ ನೋಡಿಕೊಳ್ಳಲು ನನ್ನಿಂದಾಗದೇನೋ.. ಅವನಂದ. ದುಡ್ಡೊಂದೇ ಬದುಕಲ್ಲ ಕಣೋ. ಮನ ತುಂಬ ಒಲವಿದೆಯಲ್ಲ ಸಾಕು. ನೀ ಹೇಗಿದೀಯೋ ಹಾಗೇ ಇಷ್ಟ ಅವಳಂದಳು. ಮನೆ ಮಂದಿ ಎಲ್ಲ ಒಪ್ಪಿಯೇ ಆದ ಸಂಭ್ರಮದ ಮದುವೆ. ಇವನಿಗೆ ಪೂತರ್ಿ ಜಗತ್ತೇ ತನ್ನದಾದ ಸಂಭ್ರಮ. ಅವಳಿಗೆ ಸ್ವರ್ಗವೇ ತನ್ನ ಬಳಿ ಬಂದಂತೆ ಭಾಸ. ಜೋಡಿ ಅಂದ್ರೆ ಹೀಗಿರಬೇಕು. ಎಲ್ಲರ ಬಾಯಲ್ಲೂ ಇವರದೇ ಮಾತು. ಹೊಸ ಮನೆ ಹುಡುಕುವುದರಲ್ಲಿ, ಹನಿಮೂನಿನಲ್ಲಿ ಅರ್ಧ ವರ್ಷ ಸಂದು ಹೋಯ್ತು. ನಿನಗೇನೂ ಕೊಡಿಸಲಿಲ್ಲ ಅವನಂದಾಗ ನಂಗೆ ನಿನ್ನ ಹೊರತೇನೂ ಬೇಕಿಲ್ಲ ಅನ್ನುವುದೇ ಅವಳಿಗೂ ಖುಷಿ. ಮತ್ತೆ ಅವಳನ್ನು ಅವನು, ಅವನನ್ನು ಅವಳು ಮೆಚ್ಚಿಸುವ ಭರದಲ್ಲಿ ಮೊದಲೊಂದು ವರ್ಷ ಉರುಳಿದ್ದು ಗೊತ್ತಾಗಲಿಲ್ಲ. ಪ್ರೀತಿಯ ಜತೆ ಇನ್ನೊಂದಷ್ಟು ಸಂಪಾದನೆಯೂ ಬೇಕು ಬದುಕಿಗೆ ಅನ್ನೋದು ಇಬ್ಬರಿಗೂ ಹೊಳೆಯಲಿಲ್ಲ. ಹೊಸ ದಾರಿ ಹುಡುಕಲಿಲ್ಲ. ತುಂಬು ಒಲುಮೆಯಿದೆಯಲ್ಲ ಎಂಬ ಗಟ್ಟಿ ನಂಬಿಕೆ. ಅಷ್ಟರಲ್ಲಿ ಮನೆಯಂಗಳದಲ್ಲಿ ರಿಸೆಷನ್ ಎಂಬ ಅತಿಥಿ ಬಂದು ನಿಂತಿತ್ತು. ಎಲ್ಲೂ ದುಡ್ಡಿಲ್ಲ. ಅವನ ಉದ್ಯಮ ಬೆಳೆಯಲಿಲ್ಲ. ಇವಳ ಸಂಬಳ ಸಿಗಲಿಲ್ಲ. ನಿನಗೇನಾದರೂ ಬೇಕಾ ಕೇಳುವುದು ಅವನಿಗೂ ಕ್ರಮೇಣ ಮರೆವಾಯ್ತು. ಇವಳಿಗೆ ಅವನ ಹೊರತೂ ಇನ್ನೇನಾದರೂ ಬೇಕೆನಿಸಲು ಶುರುವಾಯ್ತು. ವಸ್ತು ಒಡವೆ ಬೇಕೆನಿಸಿದಾಗ ದುಡ್ಡಿಲ್ಲವೆಂತಲೇ ಇಬ್ಬರೂ ಸುಮ್ಮನಿರುತ್ತಿದ್ದರು. ಎಷ್ಟರ ಮಟ್ಟಿಗೆ ಆಸೆ ನುಂಗಿ ಸುಮ್ಮನಿರಬಹುದು ? ಇಬ್ಬರಲ್ಲೂ ಸಣ್ಣಗೆ ಅಸಹನೆ. ಅಷ್ಟರಲ್ಲಿ ಮಗುವೊಂದಾದರೆ ಚೆನ್ನಿತ್ತೇನೋ.. ರಿಸೆಷನ್ ಆ ಕನಸನ್ನೂ ನುಂಗಿತು. ಅವನು ಸಣ್ಣ ವಿಚಾರಕ್ಕೂ ರೇಗುವುದು ಮಾಮೂಲಾಯ್ತು; ಮತ್ತು ಇವಳು ಅಳುವುದೂ. ಗಂಡ ಹೆಂಡಿರ ಜಗಳ ಉಂಡು ಮಲಗಿದರೂ ಮುಗಿಯಲಿಲ್ಲ. (ಹಾಗೆ ಮುಗಿಯಲು ಇವರು ಹಳೆಯ ಕಾಲದ “ಅವಿದ್ಯಾವಂತರಲ”್ಲ) ಈಗ ದುಡ್ಡು ಕನಸುಗಳನ್ನು ನುಂಗಿದ ನಂತರ ಇಬ್ಬರಿಗೂ ಅರ್ಥವಾಗಿದೆ ದುಡ್ಡು ಬದುಕಲ್ಲ ಮತ್ತು ದುಡ್ಡಿಲ್ಲದೆ ಬರಿಯ ಒಲುಮೆಯಿಂದ ಬದುಕು ಸಾಗದು. ಆದರೆ ಹೊಸ ಸಂಪಾದನೆಗಿಂದು ದಾರಿಯಿಲ್ಲ. ಕೆಲಸ ಕೊಡಬಹುದಾದವರ ಬಳಿಯೂ ಸಂಬಳಕ್ಕೆ ದುಡ್ಡಿಲ್ಲ.. ಮೊನ್ನೆಯಷ್ಟೇ ಹೊಳೆಯುತ್ತಿದ್ದ ಜೋಡಿ ಕಂಗಳ ತುಂಬ ಇಂದು ನೀರು.. ಅದರಲ್ಲಿ ತೇಲುತ್ತಿರುವ ಕನಸುಗಳ ಹೆಣಗಳು.

41 ಟಿಪ್ಪಣಿಗಳು (+add yours?)

  1. Bala
    ಜೂನ್ 01, 2009 @ 14:04:29

    ಶಮ,
    ಚಿಕ್ಕ ಚೊಕ್ಕ ಬರಹ ಜೀವಂತವಾಗಿದೆ. ಜೀವನದಲ್ಲಿ ಸೋತ ಕ್ಷಣಗಳಲ್ಲಿ ಹೀಗೆ ಅನ್ನಿಸುವುದು ನಿಜ, ಆದರೆ ಕಷ್ಟಗಳು ದೂರವಾಗಿ ಸುಖ ಮತ್ತೆ ಬರುತ್ತದೆ, ಮೇಲೆ ಹೋಗಿದ್ದು ಕೆಳಗೆ ಬರಲೇಬೇಕು, ಕೆಳಗೆ ಇಳಿದದ್ದು ಮತ್ತೆ ಮೇಲೆರಲೇಬೇಕು, ಇಲ್ಲಿ ‘ಮೇಲೆ’, ‘ಕೆಳಗೆ’ ಮುಖ್ಯವಲ್ಲ ಒಲವೊಂದೆ ಮುಖ್ಯ, ಕಷ್ಟಕ್ಕೂ ಒಲವಿಗೂ ಸಂಬಂಧವಿಲ್ಲ ಎಂದು ನನ್ನ ಅನಿಸಿಕೆ.

  2. PRAKASH HEGDE
    ಜೂನ್ 01, 2009 @ 15:00:33

    ಹಣವೇ ಜೀವನ…
    ಲೆಕ್ಕಾಚಾರವೇ ಬದುಕು….

    ಆಧುನಿಕ ಜಗತ್ತಿನಲ್ಲಿ ನಾವು ಹಣಕ್ಕೆ ಜಾಸ್ತಿ ಮಹತ್ವ ಕೊಡುತ್ತಿದ್ದೇವೆ ಅನಿಸುತ್ತದೆ…

    ನಮ್ಮ ಹಿರಿಯರನ್ನು ಗಮನಿಸಿ…
    ಆಗ ನಮ್ಮಲ್ಲಿ ಬೇಕಾದಷ್ಟು ಬಡತನವಿತ್ತು…
    ಸಾಮಾಜಿಕ ಸಮಸ್ಯೆ ಇತ್ತು…

    ಆದರೆ ಬದುಕಲ್ಲಿ ಭರವಸೆ ಇಟ್ಟುಕೊಂಡಿದ್ದರು…
    ಬದುಕಿನ ಆಸಕ್ತಿಗೇನೂ ಕೊರತೆ ಇರಲಿಲ್ಲ…

    ಹಿರಿಯರಿಂದ ನಾವು ಕಲಿಯುವದು ಬಹಳ ಇದೆ…

    ಚಿಂತನೆಗೆ ಹಚ್ಚುವ ನಿಮ್ಮ ಬರಹ ಇಷ್ಟವಾಯಿತು….
    ಆರ್ಥಿಕ ಹಿಂಜರಿತದ ಸಮಯದಲ್ಲಿ..
    ಸಮಯೋಚಿತ ಲೇಖನ…
    ಅಭಿನಂದನೆಗಳು…

    ಇಟ್ಟಿಗೆ ಸಿಮೆಂಟು.

  3. shivu.k
    ಜೂನ್ 01, 2009 @ 16:47:56

    ಶಮಾ,
    ಒಂದು ಪುಟ್ಟದಾದ ಲೇಖನದಲ್ಲಿ ಏನೆಲ್ಲಾ ಆಡಗಿದೆಯಲ್ಲ…

    ಅವರಿಬ್ಬರ ಮೊದಲ ಮಾತಿನಿಂದ ಅವರಿಬ್ಬರಿಗೂ ಮಾತು ಬೇಕಾಗದವರೆಗೆ ಎಲ್ಲಾ ವಾಸ್ತವದ ತಳಹದಿಯ ಮೇಲೆ ಸೊಗಸಾಗಿ ಬರೆದಿದ್ದೀರಲ್ಲ…

    ನನಗೆ ತುಂಬಾ ಇಷ್ಟವಾಯಿತು…

    ಧನ್ಯವಾದಗಳು.

  4. ಮಲ್ಲಿಕಾರ್ಜುನ.ಡಿ.ಜಿ
    ಜೂನ್ 01, 2009 @ 17:27:09

    ಶಮ ಅವರೆ,
    ಪುಟ್ಟ ಲೇಖನ ಅಂತ ನೀವಂದರೂ ಕಟುವಾಸ್ತವ ಕನಸನ್ನು ನುಂಗುವ ರಕ್ಕಸನಂತೆ ಕಾಣುವುದನ್ನು ಚೆನ್ನಾಗಿ ಬರೆದಿರುವಿರಿ. ಚೆನ್ನಾಗಿ ಅರ್ಥಮಾಡಿಕೊಂಡವರು “ಅರ್ಥ” ವಿಲ್ಲದಿದ್ದಾಗಲೇ ಕಷ್ಟಪಟ್ಟು ಗೆದ್ದು ನಿಲ್ಲಬೇಕು. ಆಮೇಲೆ ಹಿಂದಿರುಗಿ ನೋಡಿದಾಗ ಇದನ್ನು ನಾವೇನಾ ದಾಟಿದ್ದು ಎಂದು ಅಚ್ಚರಿಗೊಳ್ಳುತ್ತೇವೆ. ಇದು ನನ್ನ ಅನುಭವ.

  5. Naveen
    ಜೂನ್ 02, 2009 @ 01:43:03

    Akka.. Lekana Arthapoorna…
    Keep Writing…

  6. malathi S
    ಜೂನ್ 02, 2009 @ 04:35:40

    Dear Shama!

    Reality Bites

    🙂

    malathi S

  7. srujanart
    ಜೂನ್ 02, 2009 @ 06:55:40

    olave namma..
    odutta odutta hodanthe yello naanu,eeke ibbaru identify aagoke shuru aaythu..Bechhi belisithu.

    nammadu yanthrada otada baduku.
    yello realise aaythu.
    akshara sumanjali.

    srujan

  8. ಶೆಟ್ಟರು (Shettaru)
    ಜೂನ್ 02, 2009 @ 07:07:40

    “ರಿಸೆಷನ್” ಇವತ್ತು ಹಲವು ಬಗೆಗಳಲ್ಲಿ ನಮ್ಮ ಸುಖ, ಸಂತೋಷಕ್ಕೆ ಅಡ್ಡಿಪಡಸುತ್ತಿದ್ದರೂ, ಬದುಕಿನಲ್ಲಿ ಮೌಲ್ಯ ಮತ್ತು ಪ್ರೀತಿ, ವಿಶ್ವಾಸಗಳು ದುಡ್ಡಿಗಿಂತ ಬಲು ಜರೂರಿ ಎಂಬುದನ್ನು ನಮಗೆ ತಿಳಿಸಿದೆ.

    ಹಾಗೆಯೇ ಕೇವಲ ಹಳೆಯಕಾಲದ ಅವಿದ್ಯಾವಂತರಷ್ಟೆ ಅಲ್ಲ ನಮ್ಮ ನವ ಆಧುನಿಕ ಕಾಲದ ಸೋ ಕಾಲ್ಡ ವಿದ್ಯಾವಂತರಿಗೂ “ಗಂಡ ಹೆಂಡತಿ ಜಗಳ ಉಂಡು ಮಲಗುವರೆಗಷ್ಟೆ, ಕೋರ್ಟ ಆವರಣದವರೆಗಲ್ಲ” ಎಂಬುದಾನ್ನು ತಿಳಿಸಿದೆ, ಇದಕ್ಕೆ ರಿಸೆಷನ್ ಕಾಲದಲ್ಲಿ ಕಡಿಮೆಯಾಗುತ್ತಿರುವ ಡೈವರ್ಸ ಕೇಸುಗಳ ಸಂಖ್ಯೆ ಇಳಿಮುಖವಾಗಿರುವುದೆ ಉದಾಹರಣೆ, ಬೆಂಗಳೂರಲ್ಲಿ (?)

    -ಶೆಟ್ಟರು

  9. ರಂಜಿತ್
    ಜೂನ್ 02, 2009 @ 08:19:24

    ಒಲವು ಮತ್ತು ಹಣವು ಎರಡೂ ಬದುಕಿಗೆ ಪ್ರಾಮುಖ್ಯ ಅಂತ ಸಾರುವ ಸರಳ ಕತೆಯೆನ್ನಿಸಿತು.

  10. Aharnishi
    ಜೂನ್ 02, 2009 @ 09:10:43

    ಶಮ,
    ಚೆ೦ದದ ಬರಹ.ಹೊ೦ದುವ ಚಿತ್ರ.ಸ೦ಪಾದನೆಯೇ ಮುಖ್ಯ,ಪ್ರೀತಿ ಪ್ರೇಮ ತಾವಾಗಿಯೇ ಹಿ೦ಬಾಲಿಸುತ್ತವೆ.ಅಸಹನೆಯನ್ನು ನು೦ಗಿ ಬದುಕಲೆತ್ನಿಸುವ್ವರು ಈ ಪ್ರಸ್ತುತ ಸಮಾಜದಲ್ಲಿ ಅತಿ ವಿರಳ ಅ೦ತ ನನ್ನ ಭಾವನೆ.ಬರೀ ಕನಸುಗಳು ಹೆಣವಾದ್ರೆ ಪರ್ವಾಗಿಲ್ಲ ಮತ್ತೆ ಹೊಸ ಕನಸ ಕಾಣಬಹುದು.ಆದರೇ ಅವರೇ ಹೆಣವಾದರೆ!!!!!!!!!…ಕಷ್ಟ…ಕಷ್ಟ.

  11. minchulli
    ಜೂನ್ 03, 2009 @ 13:33:47

    ಅಹರ್ನಿಶಿ, ನಿಮ್ಮ ಅಭಿಪ್ರಾಯಕ್ಕೆ ಮೆಚ್ಚುಗೆಗೆ ವಂದೇ..

  12. minchulli
    ಜೂನ್ 03, 2009 @ 13:34:31

    ಹೌದು ರಂಜಿತ್, ನಾ ಹೇಳಬಯಸಿದ್ದು ಅಷ್ಟೇ..

  13. minchulli
    ಜೂನ್ 03, 2009 @ 13:37:26

    ನೀವು ಹೇಳಿದ್ದು ಒಂದಷ್ಟು ಮಟ್ಟಿಗೆ ನಿಜ ಶೆಟ್ರೆ.. ನಾನು ದುಡ್ಡಿಲ್ಲದ ಪರಿಸ್ಥಿತಿ ಅನ್ನುವುದನ್ನ ಹೇಳಲು ರಿಸೆಶನ್ ಎಂಬ ಪದ ಬಳಕೆ ಮಾಡಿದೆ ಅಷ್ಟೇ … ದುಡ್ಡು ಮತ್ತು ಪ್ರೀತಿ ಎರಡರ ನಡುವೆಯೇ ಬದುಕಲ್ಲವೇ..

  14. minchulli
    ಜೂನ್ 03, 2009 @ 13:48:20

    ಸೃಜನ್, ನನ್ನ ಬ್ಲಾಗಿಗೆ ನಿಮಗ ಸ್ವಾಗತ.. ನಿಮ್ಮ ಮೆಚ್ಚಿಕೆಯ ನುಡಿಗೆ ಖುಷಿ.. ನೀವು ಹೇಳಿದ್ದೆ ನನ್ನ ಅಭಿಪ್ರಾಯವೂ ಕೂಡ.. ಹೀಗೆ ಬರುತ್ತಿರಿ.. ಅಂದ ಹಾಗೆ ನೀವು ಬಳಸಿದ “ಅಕ್ಷರ ಸುಮಾಂಜಲಿ” ತುಂಬಾ ಹಿಡಿಸಿತು…

  15. minchulli
    ಜೂನ್ 03, 2009 @ 13:48:49

    ಥ್ಯಾಂಕ್ಸ್ ಮಾಲತೀ.. ಬರುತ್ತಿರಿ..

  16. minchulli
    ಜೂನ್ 03, 2009 @ 13:49:33

    ಥ್ಯಾಂಕ್ಸ್ ನವೀನ .. ಬರುತ್ತಿರು..

  17. minchulli
    ಜೂನ್ 03, 2009 @ 13:51:39

    ನಿಮ್ಮ ವಿಶ್ವಾಸಕ್ಕೆ ಖುಷಿ ಮಲ್ಲಿಕ್, ಸೋತಾಗ ಕಷ್ಟಪಟ್ಟು ನಿಂದವನೇ ಶೂರ ಅಂದಿರಲ್ಲ.. ಅದು ನನ್ನ ಅನುಭವವೂ ಹೌದು.. ಸತ್ಯ.. ಬರುತ್ತಿರಿ..

  18. minchulli
    ಜೂನ್ 03, 2009 @ 13:52:30

    ನಿಮ್ಮ ಮೆಚ್ಚುಗೆಗೆ ಥ್ಯಾಂಕ್ಸ್ ಶಿವೂ …

  19. minchulli
    ಜೂನ್ 03, 2009 @ 13:55:13

    ಇಟ್ಟಿಗೆ ಸಿಮೆಂಟುಗಳೇ ಬದುಕಾಗಿರುವ ನಮ್ಮಂಥವರಿಗೆ ಆರ್ಥಿಕ ಹಿಂಜರಿತ ಸ್ವಲ್ಪ ಹೆಚ್ಚೇ ಹೊಡೆತ ನೀಡಿದೆಯಲ್ಲ ಪ್ರಕಾಶ್.. ಆವಾಗ ಇಂಥದ್ದೆಲ್ಲದರ ಸೃಷ್ಟಿ.. ಥ್ಯಾಂಕ್ಸ್ ..

  20. minchulli
    ಜೂನ್ 03, 2009 @ 13:58:12

    ಕಷ್ಟಕ್ಕೂ ಒಲವಿಗೂ ಸಂಬಂಧವಿದೆ ಅಂತಲೋ ಅಥವಾ ಕಷ್ಟ ಬಂದಾಗ ಒಲವು ಮಾಸುತ್ತದೆ ಅಂತಲೋ ಅಲ್ಲ ನನ್ನ ಭಾವ… ಒಲುಮೆಯ ಜತೆಗೆ ದುಡ್ಡೂ ಇದ್ದಾಗಷ್ಟೇ ಬದುಕು ಸುಗಮ ಎಂದುಕೊಂಡಿದ್ದೇನೆ.. ಎರಡರಲ್ಲಿ ಯಾವುದರ ಕೊರತೆಯಾದರೂ ಕಷ್ಟ ಕಷ್ಟ… ಪ್ರೀತಿಯ ಕೊರತೆ ಆದ್ರೆ ಜಾಸ್ತಿ ಕಷ್ಟ..

  21. dharithri
    ಜೂನ್ 04, 2009 @ 07:08:52

    ಶಮಾಕ್ಕ…ಸುಂದರ ಬರಹ.
    ಒಲವೇ ಜೀವನ ಲೆಕ್ಕಾಚಾರ ಅಂದೋರಿಗೆ ಹಣವೇ ಜೀವನ ಲೆಕ್ಕಾಚಾರ ಆಯಿತು! ಬದುಕಂದ್ರೆ ಹಿಂಗೇ ಬಿಡಿ..ದುಡ್ಡಿನ ಕೊರತೆ ಜೊತೆಗೆ ಒಲವು, ಪರಸ್ಪರ ಅರಿವಿನ ಕೊರತೆಯು ‘ಗಂಡ-ಹೆಂಡಿರ ಜಗಳವನ್ನು ಉಂಡು ಮಲಗಿದರೂ ಮುಗಿಸುವುದಿಲ್ಲ’ ಅಂತ ಅನಿಸುತ್ತೆ ಅಲ್ವಾ?
    ಒಲವೇ ಜೀವನ ಬದುಕು…ಬಹಳಷ್ಟು ಸಂದರ್ಭದಲ್ಲಿ ಬರೇ ಕವಿವಾಕ್ಯದಂತೆ ಭಾಸವಾದಾಗ ಯಾಕೋ ಮನಸ್ಸು ಮುದುಡಿಬಿಡುತ್ತೆ ಅಲ್ವಾ?
    -ಧರಿತ್ರಿ

  22. ranjitha veena
    ಜೂನ್ 05, 2009 @ 07:08:07

    Namaskara,

    baraha chikadagi chokavagide ….
    “ದುಡ್ಡು ಕನಸುಗಳನ್ನು ನುಂಗಿದ ನಂತರ….. ”
    ee salu manasige hidisitu
    keep writing 🙂

  23. minchulli
    ಜೂನ್ 05, 2009 @ 12:33:06

    ಥ್ಯಾಂಕ್ಸ್ ರಂಜಿತಾ… ಬರುತ್ತಿರಿ..

  24. minchulli
    ಜೂನ್ 05, 2009 @ 12:36:53

    ಹೌದು ಧರಿತ್ರಿ ನೀ ಹೇಳಿದ್ದು ನಿಜ.. ಬದುಕಿಗೆ ಒಲುಮೆಯೊಂದೆ ಸಾಕು ಎನುವಂತಿದ್ದರೆ ದುಡಿಮೆಯೇ ಬೇಕಿರಲಿಲ್ಲ.. ಈ ಯಾಂತ್ರಿಕ ವೇಗವೂ ಅಗತ್ಯ ಇರಲಿಲ್ಲ. ದುಡ್ಡು ಒಲುಮೆಯ ಜತೆ ತಾಲೂಕು ಹಾಕಿಕೊಂಡಿದೆ ಆಲ್ವಾ ? ಇಷ್ಟು ವರುಷ ಬದುಕಿದ ಮೇಲೆ ನನಗನಿಸಿದ್ದು ಹೀಗೆ..

  25. ಜಯಲಕ್ಷ್ಮೀ ಪಾಟೀಲ್
    ಜೂನ್ 05, 2009 @ 18:17:58

    ಸೃಜನ್ ಹೇಳಿದಂತೆ ನನಗೂ ಸಹ ನನ್ನ ಕತೆಯಲ್ಲವಾ ಇದು..?!ಅನಿಸಿದ್ದು ಸುಳ್ಳಲ್ಲ ಶಮಾ,ನನ್ನೊಬ್ಬಳದೇನು ಪ್ರಾಯಶಃಯ ಬಹುತೇಕರ ಕತೆಯೂ ಹೌದು.ಬದುಕ ಹರಿವಿನಲ್ಲಿ ಕನಸಿನ ಹೆಣಗಳು ತೇಲುತ್ತಿರುವಾಗಲೇ ದಂಡೆಯುದ್ದಕ್ಕೂ ಕುಡಿಯೊಡೆಯುವ ಇನ್ನೆಷ್ಟೋ ಕನಸುಗಳು….

  26. minchulli
    ಜೂನ್ 06, 2009 @ 05:14:22

    ಹೌದು ಜಯಕ್ಕಾ, ಇದು ನಮ್ಮದೇ ಕಥೆ (ವ್ಯಥೆ) ಎನಿಸಿದಾಗಲ್ಲವೇ ಬರಹವೊಂದು ನಮ್ಮನ್ನು ತಟ್ಟುವುದು/ಮುಟ್ಟುವುದು ? ಮತ್ತೆ “ಬದುಕ ಹರಿವಿನಲ್ಲಿ ಕನಸಿನ ಹೆಣಗಳು ತೇಲುತ್ತಿರುವಾಗಲೇ ದಂಡೆಯುದ್ದಕ್ಕೂ ಕುಡಿಯೊಡೆಯುವ ಇನ್ನೆಷ್ಟೋ ಕನಸುಗಳು” ಅಂದಿರಲ್ಲಾ ಅದಂತೂ ಪೂರ್ತಿ ಸತ್ಯ ಮತ್ತು ಹಾಗಾಗಿಯೇ ಬದುಕು ಮುಂದುವರಿಯುತ್ತೆ ಅಲ್ವಾ ?

  27. Avinash
    ಜೂನ್ 06, 2009 @ 10:35:46

    ಶಮ,
    ಕಟು ವಾಸ್ತವ. ಪುಟ್ಟ ಬರಹದಲ್ಲಿ ಅಗಾಧ ಅರ್ಥ.
    ಗಂಡ ಹೆಂಡಿರ ಜಗಳ ಉಂಡು ಮಲಗಿದಾಗ ಮುಗಿಯಲು ಇವರು ಅವಿದ್ಯಾವಂತರಲ್ಲ! 😉 ಖಂಡಿತ ನಿಜ.
    ಬದುಕು ಯಾಂತ್ರೀಕೃತವಾಗುತ್ತಿದೆ. ಹಣದ ಎದುರು ಒಲವು, ಮಮತೆಗಳು ಮೋಡ ತುಂಬಿದ ಆಗಸದಲ್ಲಿ ಆಗಲೋ ಈಗಲೋ ಹೊಳೆದು ಮರೆಯಾಗುವ ನಕ್ಷತ್ರಗಳಂತೆ!

    ತುಂಬಾ ಹಿಡಿಸ್ತು ಲೇಖನ, ಮನಸ್ಸಿಗೆ ತಟ್ಟಿತು.

  28. minchulli
    ಜೂನ್ 06, 2009 @ 11:25:10

    ಅವೀ, ನೀವಂದಂತೆ ಅವೆಲ್ಲ ಅಪರೂಪದ ನಕ್ಷತ್ರಗಳಾಗುತ್ತವಲ್ಲ ಅದೇ ನನಗೂ ಬೇಸರದ ವಿಚಾರ.. ಆದ್ರೆ ಅದು ಬದುಕಿನ ರೀತಿಯಾಗಿದೆ ಪ್ರಶ್ನೆ ಹಾಕುವುದು ಯಾರಿಗೆ ? (ನಾವೇ ನಮ್ಮ ಮನಸಿಗೆ )

  29. ಪ್ರದೀಪ್
    ಜೂನ್ 08, 2009 @ 09:39:22

    ಶಮಾ ಅವರೇ,
    ಕನಸುಗಳ ಸಾಕಾರಗೊಳಿಸಲು ಹಣವಲ್ಲ, ಛಲ ಬೇಕು.

  30. minchulli
    ಜೂನ್ 08, 2009 @ 09:48:22

    ಪ್ರದೀಪ್ ನಿಮ್ಮ ಮಾತನ್ನು ಒಪ್ಪುವೆ ಮತ್ತು ನಾನು ಹಣವಿಲ್ಲದೆ ಛಲದ ಮೆಟ್ಟಲೇರಿ ಕನಸನ್ನು ಸಾಕಾರಗೊಳಿಸಿ ಇಲ್ಲೀವರೆಗೆ ಬಂದಿರುವೆ. ಆದ್ರೆ ನಾನಿಲ್ಲಿ ಹೇಳಬಯಸಿದ್ದು ಒಲುಮೆ ಮತ್ತು ಹಣದ ಸಂಬಂಧಗಳ ಬಗ್ಗೆ . ಹೀಗೆ ಬರುತ್ತಿರಿ…

  31. Sibanthi Padmanabha
    ಜೂನ್ 18, 2009 @ 07:47:13

    ಬೇಜಾರುಗಳಿಗೆ ರಿಸೆಶನ್ ರೋಗ ಬಡಿಯಾ…

  32. minchulli
    ಜೂನ್ 18, 2009 @ 10:07:18

    true.. even am waiting for that kind of recessn…

  33. arthapoorna
    ಜೂನ್ 20, 2009 @ 16:09:10

    arthapoorna…nimma barahakkagi mundina sanchike …waiting.

  34. B.Rajesh
    ಜೂನ್ 23, 2009 @ 13:20:46

    Shamaravare,
    Nimma lekhana chennagide. Adre koneya salu nanage oppigeyagalilla.
    “ಮೊನ್ನೆಯಷ್ಟೇ ಹೊಳೆಯುತ್ತಿದ್ದ ಜೋಡಿ ಕಂಗಳ ತುಂಬ ಇಂದು ನೀರು.. ಅದರಲ್ಲಿ ತೇಲುತ್ತಿರುವ ಕನಸುಗಳ ಹೆಣಗಳು”.
    Yakendre edondu phase aste edannu datida mele matte kanasugalu, nirase, novu santasa ……heege.
    Nanna takararu enu andre “kanasugalu endu sayuvudilla” kanasu kanuvavaru sayuttare. nanna abhipraya nimage estavadiddare….nannanu kshamisi.
    rajesh

  35. arthapoorna
    ಜೂನ್ 24, 2009 @ 11:54:23

    arthapoorna….only half story….pl complete…with hosa kanasina jeevana awaradhagali…

  36. Agnihothri
    ಜೂನ್ 26, 2009 @ 20:00:05

    fine…

  37. minchulli
    ಜುಲೈ 08, 2009 @ 11:58:51

    thank you arthapoorna..

  38. minchulli
    ಜುಲೈ 08, 2009 @ 11:59:31

    sure arthapoorna. i shall do that with new dreams

  39. minchulli
    ಜುಲೈ 08, 2009 @ 11:59:52

    Agnihothri ji, thanks..

  40. raviraj
    ಜುಲೈ 12, 2009 @ 12:06:38

    chendada lekhana putti !

  41. minchulli
    ಜುಲೈ 17, 2009 @ 06:23:23

    thanks ravi..keep coming da..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: