ಮಣಿಕಾಂತ್ (ಪುಸ್ತಕ) ಬಿಡುಗಡೆಯ ಬಗ್ಗೆ…

ಪುಸ್ತಕ ಬಿಡುಗಡೆಯ ಕಾರ್ಯಕ್ರಮವೊಂದಕ್ಕೆ ಅಷ್ಟು ಮಂದಿ ಸೇರಬಹುದೆಂದು ಮತ್ತು ಪುಸ್ತಕಕ್ಕಾಗಿ ಕ್ಯೂ ನಿಂತವರು sorry, ಖಾಲಿ ಆಯ್ತು ಎಂಬೊಂದು ಮಾತು ಕೇಳಿ ಮುಖ ಸಣ್ಣ ಮಾಡಿಕೊಳ್ಳಬಹುದೆಂದು ಕಲಾಕ್ಷೇತ್ರದಾಣೆಗೂ ನಾನು ನಿರೀಕ್ಷೆ ಮಾಡಿರಲಿಲ್ಲ. ಅಲ್ಲಿನ ಎರಡೂ ಅಂತಸ್ತು ಪೂತರ್ಿ ಭತರ್ಿಯಾಗಿ ಕೊನೆಗೆ ಸುತ್ತೆಲ್ಲ ನಿಂತು ನೋಡುವ ಅನಿವಾರ್ಯತೆ. ಅಮ್ಮನನ್ನು ಪ್ರೀತಿಸುವ ಮಕ್ಕಳು, ಪ್ರಕಾಶ್ ರೈ ಎಂಬ ಮಹಾನ್ ಕಲಾವಿದನ ಅಭಿಮಾನಿಗಳು, ಮಣಿಕಾಂತ್ ಬರಹದ ಫ್ಯಾನ್ಗಳು, ಭಟ್ರನ್ನೊಮ್ಮೆ ನೋಡಿ ಹೋಗಲು, ಕೃಷ್ಣೇಗೌಡ್ರ ಗದ್ದಲ ಕೇಳಲು, ಬೆಳಗೆರೆಯ ಅಟೋಗ್ರಾಫ್ ಪಡೆಯಲು ಬಂದವರು… ಹೀಗೆ ಜನಸಾಗರ.. ಎಲ್ಲರಿಗೂ ಅಮ್ಮ ಹೇಳಿದ ಸುಳ್ಳುಗಳನ್ನು ಕೇಳುವ ಕಾತರ.. ಆದರೆ ಮೊದಲು ಮಾತಾಡಿದ ಕೃಷ್ಣೇಗೌಡರಿಂದ ಕೊನೆಯಲ್ಲಿ ಮಾತಾಡಿದ ವಿಶ್ವೇಶ್ವರ ಭಟ್ ತನಕ ಯಾರೂ ಸುಳ್ಳು ಹೇಳಲಿಲ್ಲ.

ಇಂಪಾದ ಕಲರವದೊಡನೆ ಇಳೆಗಿಳಿವ ತಂಪಾದ ಮಳೆಯ ಕೋಟಿಗಟ್ಟಲೇ ಹನಿಗಳು ಎಲ್ಲೋ ಹರಿದು ಕೊನೆಗೆ ತನ್ನ ಯಾವ ಗುರುತನ್ನೂ ಉಳಿಸದೆ ಸಾಗರ ಗರ್ಭವನ್ನು ಸೇರುತ್ತದೆ. ಆದರೆ ಸ್ವಾತಿ ನಕ್ಷತ್ರದಲ್ಲಿ ಹೃದಯ ತೆರೆದು ನಿಂತ ಚಿಪ್ಪಿಗೆ ಬಿದ್ದ ಒಂದೇ ಒಂದು ಹನಿ ಮಾತ್ರ ಮುತ್ತಾಗುತ್ತದೆ. ಹಾಗೆಯೇ ವಿಶ್ವದ ಜೀವಕೋಟಿಗಳಲ್ಲಿ ಅಮ್ಮ ಮಾತ್ರ ಸಾಟಿಯಿಲ್ಲದ ಸ್ವಾತಿ ಮುತ್ತಾಗಿ ಉಳಿಯುತ್ತಾಳೆ. ಬದುಕಿನ ಸಾಮಾನ್ಯ ಚಿತ್ರಕ್ಕೆ ಅಮ್ಮ ಚಿನ್ನದ ಚೌಕಟ್ಟು. ಅಂಥ ಅಮ್ಮನನ್ನು ಮೊದಲು ವೇದಿಕೆಗೆ ತಂದಿದ್ದು ಉಪಾಸನಾ ಮೋಹನ್ ತಂಡ. ಅವರ ತಂಡದ ಎಲ್ಲ ಹಾಡುಗಳೂ ಅವರಷ್ಟೇ ಚಂದ ಅನ್ನೋದು ನನ್ನ ಕಮೆಂಟು ಮತ್ತು ಕಾಂಪ್ಲಿಮೆಂಟು.. ಅದಕ್ಕೂ ಮೊದಲು ಕಾಫಿ ತಿಂಡಿ ಸಮಾರಾಧನೆ ಇತ್ತಾದರೂ ನಾನು ಮನೆಯಲ್ಲೇ ಮುಗಿಸಿ ಬಂದಿದ್ದರಿಂದ ಅನಿವಾರ್ಯವಾಗಿ ಅವಕಾಶ ವಂಚಿತಳಾದೆ ಎಂಬ ಬೇಸರವೂ ಮುಂದಿನ ಸಲಕ್ಕೊಂದು ಪಾಠವಾಯ್ತು ಎಂಬ ಸಂತೋಷವೂ ಜತೆಗೇ ಇದೆ.

ಸೀಟ್ ಸಿಗಲಿಕ್ಕಿಲ್ಲ ಅನ್ನೋ ಕಾರಣಕ್ಕೋ ಏನೋ ಗೊತ್ತಾಗಲಿಲ್ಲ; ಪ್ರಕಾಶ್ ರೈ ಕೂಡ ನಮ್ಮ ಹಾಗೇ ಬೇಗ ಬಂದಿದ್ದರು. ಹತ್ತು ಘಂಟೆಗೇ ಬಂದ ರೈಗಳು ಪುಟ್ಟ ಹುಡುಗನಂತೆ ಕಲಾಕ್ಷೇತ್ರದ ಆವರಣದ ತುಂಬೆಲ್ಲ ಅಡ್ಡಾಡಿದರು. ಹಳೆಯ ಮಧುರ ನೆನಪುಗಳೆಲ್ಲ ತೇಲಿ ಬಂದಿರಬೇಕು. ಚಿತ್ರ ಜಗತ್ತಿನಲ್ಲಿ ಮೇರು ಪ್ರತಿಭೆಯಾದ ನಂತರವೂ ಸರಳತೆ, ಸೌಜನ್ಯ ಉಳಿಸಿಕೊಂಡ ಪರಿ ನಿಜಕ್ಕೂ ಅನನ್ಯವೆನಿಸಿತು ನಂಗೆ. ಅಷ್ಟು ದೂರದಿಂದ ಬಂದ ಸುಸ್ತಾಗಲೀ, ಅನವಶ್ಯಕ ಶಿಸ್ತಾಗಲೀ ಇಲ್ಲದೆ ನಗುವನ್ನಷ್ಟೇ ಧರಿಸಿದ್ದ ರೈ ಅಪ್ಪಟ ನಮ್ಮವರೆ ಅನಿಸಿದ್ದು ನಿಜ. ಮೋಹನ್ ಮತ್ತು ಪಂಚಮ್ ಹಾಡುತ್ತಿದ್ದರೆ ಎಷ್ಟು ದಿನ ಆಯ್ತು ಈ ಥರ ಕನ್ನಡ ಭಾವಗೀತೆಗಳನ್ನು ಲೈವ್ ಆಗಿ ಕೇಳದೆ.. ಏನ್ ಚನಾಗ್ ಹಾಡ್ತಾರಲ್ರೀ ಅಂದು ಸಂಭ್ರಮಿಸುತ್ತಿದ್ದ ಕ್ಷಣವಿತ್ತಲ್ಲ ಅದು ಬರಹಕ್ಕೆ ನಿಲುಕದ್ದು. ಮಾತುಗಳೂ ಅಷ್ಟೆ ಸರಳ, ಸುಂದರ, ಸುಲಲಿತ. ಕನ್ನಡದ ನೆಲದಲ್ಲಿ ವಾಸ ಮಾಡುತ್ತಿಲ್ಲ ಅನ್ನೋದು ಚೂರೂ ಗೊತ್ತಾಗದಷ್ಟು ಸ್ಪಷ್ಟವಾಗಿತ್ತು ಭಾಷೆ. ನಮ್ಮ ನಡುವೆಯೇ ಇದ್ದು ಮಾತಿಗೊಮ್ಮ ಐ ಮೀನ್, ಯು ನೋ ಅನ್ನುವವರೆಲ್ಲ ನನ್ನ ಕಣ್ಣ ಮುಂದೆ ಸುಳಿದಾಡಿದರು. ತೆರೆಯಾಚೆಗೆ ನಟನೆ ಬಾರದ ಕಾರಣ ಕೆಲವೇ ಮಾತುಗಳಲ್ಲಿ ಇಡೀ ಪುಸ್ತಕದ ಭಾವವನ್ನು ಸೆರೆಹಿಡಿದಿಟ್ಟರು.

ಯಾವತ್ತೂ ಬರೀ ಹರಟೆ ಹಾಸ್ಯಗಳಲ್ಲೇ ಮಾತು ಮುಗಿಸಿ ನಗಿಸುವ ಗೌಡರು ತುಂಬಾ ಜವಾಬ್ದಾರಿಯುತವಾಗಿ ಅದೆಷ್ಟು ಸೂಕ್ಷ್ಮವಾಗಿ ಗಮನಿಸಿ ಪುಸ್ತಕದ ಬಗ್ಗೆ ಮಾತಾಡಿದರು ! ಜಾಸ್ತಿಯೇ ಹೊತ್ತು ಮಾತಾಡಿದರೂ ಹಾಗನ್ನಿಸಲಿಲ್ಲ. ಹಾಸ್ಯವನ್ನಷ್ಟೇ ಅವರ ಬಾಯಿಂದ ಕೇಳಿದ್ದ ನಂಗೆ ಅವರ ಒಳನೋಟ, ಪುಸ್ತಕದ ಜತೆ ಜತೆಗೇ ಲೇಖಕನ, ಅದರ ಹಿಂದಿರಬಹುದಾದ ತಲ್ಲಣಗಳ, ಖುಷಿ, ನೋವುಗಳ ಬಗ್ಗೆ ವಿಶ್ಲೇಸಿಸಿದ ರೀತಿಯಿತ್ತಲ್ಲ ಅಚ್ಚರಿ ತರಿಸಿತು.

ಮಾತಿಗೆ ಗೌಡರು ಹಾಕಿ ಕೊಟ್ಟ ಬುನಾದಿ ಸಖತ್ ಭದ್ರವಾಗೇ ಇತ್ತು. ನಂತರ ಮಾತಿಗಿಳಿದವರು ದೈತ್ಯ (ಬರಹದಲ್ಲೂ, ದೇಹದಲ್ಲೂ) ರವಿ ಬೆಳಗೆರೆ. ಮಣಿಕಾಂತ್ ಎಂಬ ಭಾವಜೀವಿಯ ಬದುಕಿನ ತಲ್ಲಣಗಳನ್ನೂ ಅದರ ಅನನ್ಯತೆಯನ್ನೂ ಬಿಚ್ಚಿಡುತ್ತಾ ಬೆನ್ನು ತಟ್ಟಿದರು. ಜತೆಗೇ ಅವರ ಪ್ರೇಮ್ ಕಹಾನಿಯ ಹನಿಗಳನ್ನೂ… ಇನ್ನು ಅಮ್ಮನ ಬಗ್ಗೆ ರವಿ ಮಾತಾಡಿದರೆ ಅದು ನವಿರು ಸಂವೇದನೆ (someವೇದನೆ?) ಗಳಿಂದ ಹೆಣೆದ ಭಾವ ಬುಟ್ಟಿ. ಟಿಪಿಕಲ್ ಪತ್ರಕರ್ತನಂತೆ ಮಣ್ಣಿನ ಮಕ್ಕಳ ಬಗ್ಗೆ ಪ್ರಸ್ತಾಪ ಮಾಡುತ್ತಲೇ ಅಪ್ಪನ ಸುಳ್ಳು ಹೇಳಿದರೆ ಎಂಟಕ್ಕೆ ನಿಲ್ಲದು ನೂರೆಂಟಾಗುವುದು ಎಂಬ ಸತ್ಯವನ್ನು ಬಯಲಿಗಿಟ್ಟರು. ಮಣಿ ಮದುವೆಯ ಸಮಯದಲ್ಲಿ ತನ್ನ ಬಳಿ ದುಡ್ಡಿರಲಿಲ್ಲ ಎಂಬ ಸತ್ಯದ ಜತೆಗೇ ಈಗಲೂ ಇಲ್ಲ ಅನ್ನೋ ಸುಳ್ಳನ್ನೂ ಲೀಲಾಜಾಲವಾಗಿ ಹೇಳಿದರು. ಅಮ್ಮನನ್ನು ದತ್ತು ತೆಗೆದುಕೊಳ್ಳುವ, ಆಕೆಗೊಂದು ರೂಮ್ ಕಟ್ಟಿಸಿಕೊಡುವ ಮಿನಿಮಮ್ ಅವಶ್ಯಕತೆಯಿದೆ ಎಂದಿದ್ದು ಹೊಸ ವಿಚಾರವೊಂದನ್ನು ನಾ ಯೋಚಿಸುವಂತೆ ಮಾಡಿದ್ದಂತೂ ಹೌದು.

ಇವೆಲ್ಲದರ ನಡುವೆ ತನಗೆ ಕನ್ನಡ ಕಲಿಸಿದ ಪ್ರಮೀಳಾ ಟೀಚರನ್ನು ವೇದಿಕೆಗೆ ಕರೆದು ಸನ್ಮಾನ ಮಾಡಿಸಿದರಲ್ಲ ಇದೊಂದು ಕೃತಜ್ಞತೆ ಸೂಚಿಸಿದ ವಿಚಾರಕ್ಕೇ ಪ್ರತ್ಯೇಕವಾಗಿ ಮಣಿಕಾಂತ್ಗೆ ವಂದೇ. ಆಕೆಗೆ ತನ್ನ ಶಿಷ್ಯ ಈ ಮಟ್ಟಕ್ಕೆ ಬೆಳೆದ ಹೆಮ್ಮೆಯೊಂದು ಕಡೆ; ಪ್ರಕಾಶ್ ರೈ, ಬೆಳಗೆರೆಯಂಥ ದಿಗ್ಗಜರ ನಡುವೆ ನಿಂತು ಸನ್ಮಾನ ಪಡೆದ ಖುಷಿಯೊಂದು ಕಡೆ. ಜತೆಗೇ ಮುಖಪುಟ ಚಿತ್ರ ಕಲಾವಿದ ಮಲ್ಲಿಕಾಜರ್ುನ, ರೂಪದಶರ್ಿಗಳು, ಉಪಾಸನಾ ತಂಡದವರು ಹೀಗೆ ಹಲವರಿಗೆ ಮಾಡಿದ ಸನ್ಮಾನ ಕಮಷರ್ಿಯಲ್ ಬ್ರೇಕ್ ಥರ ಬಂದು ಹೋಯ್ತು. ಉಪಾಸನಾ ಮೋಹನ್ ಎಂದಿಗಿಂತ ಸ್ವಲ್ಪ ಹೆಚ್ಚೇ ಮಿಂಚಿದರು. ನಮ್ಮ ಸಿಮ್ಮ ಮಾತ್ರ ಸ್ಟೇಜ್ ಪಕ್ಕದಲ್ಲೇ ಕೂತು ಕಾರ್ಯಕ್ರಮ ಆಸ್ವಾದಿಸಿದರು.

ಬಾಯಿಗಿಂತ ಬರಹದ ಮೂಲಕವೇ ಹೆಚ್ಚು ಮಾತಾಡುವ ಮಣಿಕಾಂತ್ ಯಾಕೋ ಮಾತಾಡುವ ಮೂಡಿನಲ್ಲಿದ್ದರು. ಆದರೆ ಹೆಚ್ಚು ಮಾತಾಡಲಾಗದೇ ಕಣ್ಣ ಹನಿಗಳ ಕಾಣಿಕೆ ಕೊಟ್ಟು ನಿಮಿಷದಲ್ಲಿ ಮಾತು ಮುಗಿಸಿದರು. ಈ ಭಾವುಕತೆಯೇ ಅವರ ಸ್ಟ್ರೆಂತ್ ಮತ್ತು ವೀಕ್ನೆಸ್ ಕೂಡ ಇರಬಹುದು ಅಂತ ಆ ಕ್ಷಣದಲ್ಲನಿಸಿತು. ಕೊನೆಯಲ್ಲಿ ಮಾತಿಗಿಳಿದ ವಿಶ್ವೇಶ್ವರ ಭಟ್ ಕೂಡ ಸರಿಯಾಗಿಯೇ ಕಾಂಪಿಟಿಷನ್ ಕೊಟ್ಟರು. ಈರುಳ್ಳಿ, ಮೆಣಸಿನಕಾಯಿ, ಕೊತ್ತಂಬರಿ ಬೆಲೆ ಬರೆಯುತ್ತಿದ್ದ ಮಣಿಕಾಂತ್ ಬರಹದ ಬೆಲೆ ಅರಿತ ಸಂದರ್ಭವನ್ನು ನೆನಪಿಸಿಕೊಂಡರು. ಈ ವರೆಗೂ ತಾವು ಬರೆಯಲು ಚೆಂದದೊಂದು ಟೇಬಲ್ ಕೊಡದೇ ಹೋದ ಸತ್ಯವನ್ನೂ ಹೇಳಿ ಅದೊಂದು ವ್ಯವಸ್ಥೆಯ ಭರವಸೆ ನೀಡಿದರು. ಬರಹವನ್ನೂ ಮಿಮಿಕ್ರಿ (imitation) ಮಾಡಬಲ್ಲ ಮಣಿಕಾಂತರ ವಿಶೇಷ ಚಾತುರ್ಯದ ಬಗ್ಗೆ ಮಾತಾಡಿದರು. ಮಾತು ಒಂದಷ್ಟು ಕಾಂಪ್ಲಿಮೆಟಿನಂತೆಯೂ ಒಂಚೂರು ಕಂಪ್ಲೇಂಟಿನಂತೆಯೂ ಇದ್ದಿದ್ದೇ ಇವರ ಮಾತಿನ ವಿಶೇಷ.

ಒಂದಷ್ಟು ನಗು, ಒಂದಷ್ಟು ಹರಟೆ, ತಿಳಿ ಹಾಸ್ಯ, ಚೂರು ಸೀರಿಯಸ್ನೆಸ್, ಎಲ್ಲಕ್ಕಿಂತ ಹೆಚ್ಚು ಭಾವನೆಗಳು, ಹನ್ನಿ ಕಣ್ಣಿರುಗಳ ಸಮ್ಮಿಲನವಾದ ಇಡೀ ಕಾರ್ಯಕ್ರಮ ಥೇಟ್ ಮಣಿಕಾಂತ್ ಥರವೇ ಇತ್ತು. ಪುಸ್ತಕ ಮಣಿಕಾಂತ್ಗಿಂತ ನೂರು ಪಟ್ಟು ಚೆಂದ. ಅಮ್ಮನ ಕಡೆ ನೊಡದೆ ತಮ್ಮ ಬದುಕು ಭಾವಗಳನ್ನು ಮಾತ್ರ ಜೀವಿಸುವ ಮಂದಿ ಈ ಸುಳ್ಳುಗಳನ್ನೋದಿದ ನಂತರವಾದರೂ ಒಂಚೂರು ಬದಲಾದರೆ, ಅಮ್ಮಂದಿರಿಗೆ ಹನಿ ಪ್ರೀತಿಯನ್ನೂ, ಬೊಗಸೆ ಸಂತೋಷವನ್ನೂ, ಒಂದಷ್ಟು ನೆಮ್ಮದಿಯನ್ನೂ ಕೊಡಮಾಡಿದರೆ ಮಣಿಕಾಂತ್ ಬರೆದ ಸುಳ್ಳುಗಳು ಸಾರ್ಥಕ. ಹಾಗಾಗಲೆಂಬುದು ಅಲ್ಲಿ ಬಂದಿದ್ದ ಪ್ರತಿಯೊಬ್ಬರ ಆಶಯ ಕೂಡ.

ಇಲ್ಲಿರುವುದು ನನ್ನ (ಕ್ಯಾಮರಾ ಎಂಬ) ಸಂಗಾತಿಯ ಕಣ್ಣಿಗೆ ಬಿದ್ದ ಚಿತ್ರಗಳು

ಎಲ್ಲರ ಚಿತ್ತ ಮಣಿಕಾಂತ್ ನತ್ತ..

ಎಲ್ಲರ ಚಿತ್ತ ಮಣಿಕಾಂತ್ ನತ್ತ..

 ಪ್ರಕಾಶ್ ರೈ ಜತೆ ಐಶ್ವರ್ಯ ಮತ್ತು ನೀಲಿ

ಪ್ರಕಾಶ್ ರೈ ಜತೆ ಐಶ್ವರ್ಯ ಮತ್ತು ನೀಲಿ

ಹೆಚ್ಚು ಮಿಂಚಿದವರು - ನನ್ನ ಪುಟ್ಟಿ ಮತ್ತು ಮೋಹನ್

ಹೆಚ್ಚು ಮಿಂಚಿದವರು - ನನ್ನ ಪುಟ್ಟಿ ಮತ್ತು ಮೋಹನ್

ಆಟೋಗ್ರಾಪ್ ಪ್ಲೀಸ್..

ಆಟೋಗ್ರಾಪ್ ಪ್ಲೀಸ್..

ಅಮ್ಮನ ಸುಳ್ಳು ಬಯಲಾಯ್ತು..

ಅಮ್ಮನ ಸುಳ್ಳು ಬಯಲಾಯ್ತು..

"ಸಿಂಹ" ಜತೆ ಉಭಯ ಕುಶಲೋಪರಿ ಸಾಂಪ್ರತ..

"ಸಿಂಹ" ಜತೆ ಉಭಯ ಕುಶಲೋಪರಿ ಸಾಂಪ್ರತ..

39 ಟಿಪ್ಪಣಿಗಳು (+add yours?)

 1. Sandeep Kamath
  ಮೇ 01, 2009 @ 14:16:09

  Thank you!

 2. ಮಲ್ಲಿಕಾರ್ಜುನ.ಡಿ.ಜಿ
  ಮೇ 01, 2009 @ 17:18:18

  ಶಮ ಅವರೆ,
  ತುಂಬ ಚೆನ್ನಾಗಿ ಕಾರ್ಯಕ್ರಮದ ಬಗ್ಗೆ ಬರೆದಿರುವಿರಿ. ಇನ್ನು ನಾನು ಕಮೆಂಟಿಸುವುದೇನಿದೆ?
  ಆ ದಿನ ನನಗೆ ತುಂಬಾ ಇಷ್ಟವಾದದ್ದು ಮತ್ತು ಮನತಟ್ಟಿದ್ದು ಎರಡು ಸಂಗತಿಗಳು. ಮಣಿಕಾಂತ್ ತಮಗೆ ಕನ್ನಡ ಕಲಿಸಿದ ಟೀಚರ್ ಅನ್ನು ಸನ್ಮಾನಿಸಿದ್ದು ಮತ್ತು ಮುಖಪುಟದಲ್ಲಿನ ರೂಪದರ್ಶಿಗಳನ್ನು ಕರೆದು ಗೌರವಿಸಿದ್ದು. ಇವೆರಡನ್ನು ಅವರು ಮಾಡದಿದ್ದರೂ ಯಾರೂ ಅವರನ್ನು ಪ್ರಶ್ನಿಸುತ್ತಿರಲಿಲ್ಲ, ಆದರೂ ಮಾಡಿದರಲ್ಲ – ಅದು ನನಗೆ ತಟ್ಟಿದ್ದು. “ನಿಮಗೂ ಮತ್ತು ರೂಪದರ್ಶಿಗಳಿಗೂ ತಲಾ ರೂ 500 ಕಳಿಸಿದ್ದೇನೆ. ತಲುಪಿದ ಮೇಲೆ ಮೆಸೇಜ್ ಮಾಡಿ” ಎಂದು SMS ಕಳಿಸಿದ್ದಾರೆ. ಇದಕ್ಕೇನು ಹೇಳುವುದು. ಆ ಕಾರ್ಯಕ್ರಮವಾದ ಮೇಲೆ ಹೊರಡುವ ಹಂತದಲ್ಲಿದ್ದಾಗ ಒಬ್ಬ ಹಿರಿಯರು ಬಂದು ಆಟೋಗ್ರಾಫ್ ಹಾಕಿಕೊಡಿ ಅಂದರು.”ಏ ನನ್ನದ್ಯಾಕೆ ಬಿಡಿ ಸರ್” ಅಂದೆ. ಬಲವಂತ ಮಾಡಿದರು. ಕೊನೆಗೆ ಪುಸ್ತಕ ತೆಗೆದರೆ- ಆ ಕಾರ್ಯಕ್ರಮದ ಗಣ್ಯರೆಲ್ಲರ ಹಸ್ತಾಕ್ಷರವಿದೆ. ಅಷ್ಟೇ ಅಲ್ಲ. ಆ ಫೋಟೋದಲ್ಲಿರುವ ಅಮ್ಮ ಮಗುವಿನ ಹಸ್ತಾಕ್ಷರವೂ ಇದೆ!
  ನನಗೆ ಸಿಗದ ಸಿಂಹರನ್ನು ನಿವು ಗುಹೆಯಲ್ಲೇ ಇದ್ದು ಸೆರೆಹಿಡಿದದ್ದು ನನಗೆ ಹೊಟ್ಟೆ ಉರಿಸಿದೆ!

 3. Naveen
  ಮೇ 02, 2009 @ 03:25:04

  ನಮಸ್ತೆ ಅಕ್ಕ.. ನಿಮ್ಮಷ್ಟೇ ಬರೆವಣಿಗೆ ಕೂಡ ಬಹಳ ಸೊಗಸಾಗಿದೆ… ಇ-ಮೇಲ್ ವಿಳಾಸ ಕೊಟ್ಟಲ್ಲಿ ನನ್ನ ಬಳಿ ಇರುವ ಫೋಟೋಗಳ್ಳನ್ನು ಕಳಿಸಿಕೊಡುವೆ..
  ಹೀಗೆ ಬರೆಯುತಿರಿ… ಸದಾ ನಗುತಿರಿ…

 4. paraanjape
  ಮೇ 02, 2009 @ 04:23:33

  ಶಮಾ ಅವರೇ
  ಚೆನ್ನಾಗಿದೆ. ಇಡೀ ಕಾರ್ಯಕ್ರಮದ ಸಾರಸರ್ವಸ್ವವನ್ನು ಈ ಬರಹದಲ್ಲಿ ಕಟ್ಟಿಕೊಟ್ಟಿದ್ದೀರಿ. ನಾನು ಕೂಡ ಬ೦ದಿದ್ದೆ. ನಿಮ್ಮ ಭೆಟ್ಟಿಯಾಗಿದ್ದರೆ ಖುಷಿಯಾಗುತ್ತಿತ್ತು.

 5. malathi S
  ಮೇ 02, 2009 @ 06:22:41

  ಒಂದು ಒಳ್ಳೆಯ ಬರಹ, ಚಂದದ ಚಿತ್ರಗಳು.

  Your daughter is so cute, dear Shama

  take Care

  🙂

  ಮಾಲತಿ ಎಸ್.

 6. minchulli
  ಮೇ 02, 2009 @ 12:47:09

  thanks sandeep

 7. minchulli
  ಮೇ 02, 2009 @ 13:01:00

  ಮಲ್ಲಿಕ್, ನೀವು ಹೇಳಿದ್ದು ನಿಜ. ಚಿಕ್ಕ ಚಿಕ್ಕ ವಿಚಾರಗಳಲ್ಲೇ ಬದುಕಿನ ಎಷ್ಟೋ ದೊಡ್ಡ ದೊಡ್ಡ ಖುಷಿಗಳು ಅಡಗಿರುತ್ತವೆ. ನಾವದನ್ನು ಹುಡುಕಿಕೊಳ್ಳಬೇಕು ಅಷ್ಟೇ. ನಂಗೂ ತುಂಬಾ ಖುಷಿಯಾಯ್ತು ಅವರು ವೇದಿಕೆಗೆ ಬಂದಿದ್ದು. ಇನ್ನು ನೀವು ಮೊದ್ಲೇ ಸಿಂಹವನ್ನು ಸೆರೆ ಹಿಡಿದಿರಬಹುದು ಎಂದುಕೊಂಡೆ. ಏನಾದರೂ ಆಗ್ಲಿ.. ನಿಮ್ಮ ಹೊಟ್ಟೆ ಉರಿಸಿದ ಸಂತೋಷವಂತೂ ಇದೆ.. ಹೀಗೆ ಬರುತ್ತಿರಿ.. ಇನ್ನೊಮ್ಮೆ ಯಾರದ್ರೂ ಸಿಕ್ಕಿದ್ರೆ ಖಂಡಿತ ಹಿಡ್ಕೊಡ್ತೀನಿ.. ಬೇಜಾರ್ ಮಾಡ್ಕೋಬೇಡಿ… ನೀವು ಕಳಿಸಿದ ಚಿತ್ರಗಳು ಚೆಂದಗಿವೆ. (ನಂದೊಂದು ಬಿಟ್ಟು) ಅಂದ ಹಾಗೆ ನಂದು ಚಂದದ ಫೋಟೋ ಯಾವ್ದೂ ತೆಗ್ದೇ ಇಲ್ಲ ಅಂದ್ರೆ ಅನ್ಯಾಯ…

 8. ಸೋಮು
  ಮೇ 03, 2009 @ 05:55:45

  ಪ್ರೋಗ್ರಾಮಿಗೆ ನಾವು ಬಂದಿದ್ವಿ..ನೀವೆಲ್ಲ ಎಲ್ಲಿ ಅಡಗಿ ಕೂತಿದ್ರಿ ಶಮ ಮೇಡಮ್? ಕೊನೆ ಪಕ್ಷ ನಿಮ್ಗೆ ಹಾಯ್ ಹೇಳೋಣ ಅಂತ ಆದ್ರೂ ತುಂಬ ಹುಡುಕಿದ್ವಿ ನಮ್ ಕೆಲ್ವು ಬ್ಲಾಗರ್ಸ್..:(

 9. armanikanth
  ಮೇ 03, 2009 @ 09:08:38

  mallik,ni,age gottilla…
  ee shama ondu kaaladalli simha avarige line hodeyoke(?) try maadidru kanri…simha avaga kaige sigade tappisikondru.
  nanna book release programme ge simha avarige invuitation card kottidde hindina dina raatri 10 gante yalli.
  simha belagge adu hego time maadkondu function ge late aagi bandru.avaga kalakshetra full aagittu.so stage ge bandru…
  simha du olle photogenic face…nimage yaavaaga beku tilisi.hididu kodtene…
  Manikanth.

 10. Kallare
  ಮೇ 04, 2009 @ 08:54:09

  Nice…

 11. dharithri
  ಮೇ 04, 2009 @ 09:44:49

  ಅವತ್ತು ನಾನು ಪ್ರೋಗ್ರಾಂ ಮಿಸ್ ಮಾಡ್ಕೊಂಡಿದ್ದೆ.
  -ಧರಿತ್ರಿ

 12. ರಂಜಿತ್
  ಮೇ 04, 2009 @ 10:14:07

  ಕಾರ್ಯಕ್ರಮಕ್ಕೆ ಬಾರದ ನನಗೆ,ಅಲ್ಲಿ ನಡೆದದ್ದರ ವಿವರ ಚೆನ್ನಾಗಿ ಬರೆದಿದ್ದೀರಿ.

  ಥ್ಯಾಂಕ್ಸ್

 13. minchulli
  ಮೇ 04, 2009 @ 10:41:09

  ಥ್ಯಾಂಕ್ಸ್ ರಂಜಿತ್.. ಹೀಗೆ ಬರುತ್ತಿರಿ..

 14. minchulli
  ಮೇ 04, 2009 @ 10:42:30

  ಧರಿತ್ರಿ…. ಮುಂದೆ ಯಾವತ್ತೂ ಮಿಸ್ ಮಾಡಿಕೋಬೇಡ.. ಕಾಫಿ ಚನ್ನಾಗಿತ್ತು.. ಪಾಪ ನಿಂಗೆ ಅದೂ ಮಿಸ್ ಆಯ್ತು..

 15. minchulli
  ಮೇ 04, 2009 @ 10:42:49

  thank u mahesh…

 16. minchulli
  ಮೇ 04, 2009 @ 10:47:33

  ಮಲ್ಲಿಕ್, ಮಣಿಕಾಂತ್ ಹೇಳಿದ್ದೇನೂ ನಂಬಬೇಡಿ… ಹೇಳಿ ಕೇಳಿ ಸುಳ್ಳು ಬರೆಯುವವರು ತಾನೇ.. ಅವರಿಗೂ ಹೇಳಿದ್ದೇನೆ.. ನನ್ ಪ್ರೇಮ ಸಮಾಚಾರಗಳನ್ನು ಹೀಗೆ ಖುಲ್ಲಂ ಮಾಡಬೇಡಿ ಅಂತ..
  ನೀವು ಸಿಂಹದ ಗುಹೆಗೆ ಹೋಗುವಾಗ ಹೇಳಿ ನಾನೂ ಬರುವೆ..

 17. minchulli
  ಮೇ 04, 2009 @ 11:37:05

  ತಮ್ಮ ನನ್ನ ನೋಡಿದ್ದರೆ ಮಾತಾಡಿಸಬಹುದಿತ್ತಲ್ಲಾ ನವೀನ .. ನಂಗೆ ನಿನ್ನ ಪರಿಚಯವಿಲ್ಲ.. ನನ್ನ ಮೇಲ್ ಅಡ್ರಸ್ ಕಳಿಸಿರುವೆ.

 18. minchulli
  ಮೇ 04, 2009 @ 11:40:30

  ಥ್ಯಾಂಕ್ಸ್ ಸೋಮು ಅವ್ರೆ.. ನಾನು ಅಡಗಿರಲಿಲ್ಲ.. ಅಷ್ಟು ಚೆಂದ(?) ಓಡಾಡ್ತಾ ಇದ್ದೆನಲ್ಲಾ… ಒಂದು ಕ್ಯಾಮರಾ ಹೆಗಲಿಗೇರಿಸಿಕೊಂಡು ಅವತ್ತು ಅಲ್ಲಿ ಕೂತಲ್ಲಿ ಕೂರದೆ ಮಕ್ಕಳ ಸೈನ್ಯ ಕಟ್ಟಿಕೊಂಡು ಓಡಾಡುತ್ತಿದ್ದ ಪ್ರಾಣಿ ನಾನೇ… ಇಲ್ಲಲ್ಲ ಎಲ್ಲಾದ್ರೂ ಅಷ್ಟೇ.. ಕೈಯಲ್ಲೊಂದು ಕ್ಯಾಮ್ .. ಸುತ್ತ ಮಕ್ಕಳು ಇದಾರೆ ಅಂದ್ರೆ ಅದು ನಾನೇ… ಅದೇ ನನ್ ಐಡಿ ಕಾರ್ಡು.. ನಿಮ್ಮನ್ನು ಮಾತಾಡಿಸೋ ಅವಕಾಶದಿಂದ ನಾನೂ ವಂಚಿತಲಾದೆ.. ಇರಲಿ ಮುಂದಿನ ಬಾರಿ ಖಂಡಿತಾ..

 19. minchulli
  ಮೇ 04, 2009 @ 14:11:06

  ಪರಾಂಜಪೆಯವರೇ, ನಿಜಕ್ಕೂ ನಾನು ನಿಮ್ಮನ್ನು ಮಿಸ್ ಮಾಡಿಕೊಂಡೆ. ನಿಮ್ಮ ಮುಖ ಪರಿಚಯ ಇಲ್ಲದ್ದೆ ಕಾರಣ.. ಸೋಮು ರವರಿಗೆ ಹೇಳಿದಂತೆ ಕ್ಯಾಮರಾ + ಮಕ್ಕಳ ಜತೆಗೆ ನಾನು ಕಾಣಸಿಗುವೆ.. ಮರೆಯದೆ ನಿಮ್ಮನ್ನು ನಂಗೆ ಪರಿಚಯ ಮಾಡಿಸಿಕೊಳ್ಳಿ.. !!!

 20. minchulli
  ಮೇ 04, 2009 @ 14:13:08

  ಥ್ಯಾಂಕ್ಸ್ ಮಾಲತೀಜೀ… ಅವಳು ನಾ ಹೆತ್ತ ಮಗಳಲ್ಲ.. ಆದ್ರೆ ನಮಗಿಬ್ಬರಿಗೂ ಹಾಗನಿಸುವುದಿಲ್ಲ. ಮಕ್ಕಳೆಂದರೆ ನನಗಿಷ್ಟ.. ನಿಮ್ಮ ಕಾಮಪ್ಲಿಮೆಂಟನ್ನು ಅವಳಿಗೆ ತಿಳಿಸುವೆ..

 21. vinayaka kodsara
  ಮೇ 04, 2009 @ 15:40:37

  varadi samgravagi, sogasaagi mudi bandide…
  kodsara

 22. minchulli
  ಮೇ 05, 2009 @ 04:40:25

  thanks vinayak.. keep visiting

 23. Laxmikanth
  ಮೇ 07, 2009 @ 04:25:29

  Namasthe…
  Hegiddira. Nanu Laxmikanth! Parichaya ide antandukondiddene. Blog chennagide. Nanu sadya Graphic designer agiddini.
  Thank u. rgds. – Laxmi

 24. manasu
  ಮೇ 07, 2009 @ 05:11:46

  shama, neevu kotta vivarane namge tumba kushi kottide naavu doora deshadalliddaru alli enu nediyitendu tiLiyuvantayitu… naanu ee pusktavannu odalebeku endkondiruve…

  dhanyavadagaLu
  manasu
  kuwait

 25. raviraj
  ಮೇ 08, 2009 @ 12:25:10

  hmm e barahavu chennagide amma…

 26. minchulli
  ಮೇ 08, 2009 @ 13:38:01

  ನೆನಪಿಲ್ಲದೆ ಏನು ಲಕ್ಷ್ಮಿಕಾಂತ್ ? ಒಂದೆರಡು ಬಾರಿ ನಿನ್ನ ಬ್ಲಾಗಿಗೆ ಭೇಟಿ ನೀಡಿದ್ದೆ ಮತ್ತು ಕಾಮೆಂಟ್ ಮಾಡಿದ್ದು ಕೂಡ ನೆನಪು. ಮತ್ತೆ ಆವಾಗ ನಾನು ಬ್ಲಾಗಿಗೆ ಪೂರ್ತಿ ಹೊಸಬಳಾಗಿದ್ದೆ. ಹಾಕಿದ ಕಾಮೆಂಟ್ ತಲುಪಿದೆಯಾ ಗೊತ್ತಿಲ್ಲ.. ನಿನ್ನ ಬ್ಲಾಗು ಚಂದ ಇದೆ. ನಮ್ಮ ಜತೆಗೆ ಇದ್ದವರು ಬೆಳೆಯುವಾಗಿನ ಸಂತೋಷ ಇದೆಯಲ್ಲ ಅದು ಹೆಮ್ಮೆಯನ್ನೂ ಕೊಡುತ್ತದೆ. ಹೀಗೆ ಬೆಳೆಯಬೇಕು ನಿನ್ನೊಳಗಿನ ಕಲೆ ಕಲಾವಿದ. .. ನನ್ನ ಬ್ಲಾಗಿಗೆ ಹೀಗೆ ಬರುತ್ತಿರು..

 27. minchulli
  ಮೇ 08, 2009 @ 13:49:42

  ಕರುನಾಡಿನಿಂದ ಮರಳುಗಾಡಿಗೆ ಸಾಗಿದ ಮನಸನ್ನು ಈಗ ನೋಡಿದೆ.. ಎಷ್ಟು ಚಂದ ಇದೆ.. ನಿಮಗೆ ನನ್ನ ಬ್ಲಾಗು ಇಷ್ಟವಾದ್ದಕ್ಕೆ ಥ್ಯಾಂಕ್ಸ್. ನಿಮಗೆ ಆ ಪುಸ್ತಕ ಇಷ್ಟ ಆದಲ್ಲಿ ಕಳಿಸಿ ಕೊಡಬಲ್ಲೆ.. ಆದ್ರೆ ಹೇಗೆ ಅನ್ನೂದು ನೀವೇ ಹೇಳಬೇಕು. ಹಾಗೊಮ್ಮೆ ನೀವು ಇಲ್ಲಿಗೆ ಬಂದಾಗ ನಿಮಗೆ ಪುಸ್ತಕ ಸಿಗದಿದ್ದಲ್ಲಿ ನನ್ನನ್ನು ಸಂಪರ್ಕಿಸಿ. ಖಂಡಿತಾ ಸಿಗುತ್ತದೆ. ನನ್ನ ಬ್ಲಾಗಿಗೆ ಹೀಗೆ ಬರುತ್ತಿರಿ ..

 28. minchulli
  ಮೇ 08, 2009 @ 13:50:21

  ಥ್ಯಾಂಕ್ಸ್ ಕಂದಾ…

 29. manasu
  ಮೇ 09, 2009 @ 05:13:56

  thnx shama….ee month endnali barutaliddene sigadiddalli kandita samparkisuttene..

 30. minchulli
  ಮೇ 09, 2009 @ 14:01:41

  ಪುಸ್ತಕ ಸಿಕ್ಕಿದರೂ ಸಿಗದಿದ್ದರೂ ಸಂಪರ್ಕಿಸಿ… ವೆಲ್ಕಂ ಟು ಯು..

 31. ವಿಜಯರಾಜ್ ಕನ್ನಂತ
  ಮೇ 11, 2009 @ 07:37:19

  kaaryakramakke naanoo bandidde… kaaryakramadashte neat aagide nimm ee vivaranatmaka baraha… photos are nice

 32. minchulli
  ಮೇ 13, 2009 @ 12:44:10

  ಥ್ಯಾಂಕ್ಸ್ ವಿಜಯ್.. ಅಂದ ಹಾಗೆ ನಾನು ತೆಗೆದ ಫೋಟೋ ಒಂದರಲ್ಲಿ ನೀವು ಬಿದ್ದಿದ್ದೀರಿ ಅನ್ಸುತ್ತೆ.. ತುಂಬಾ ಕ್ಲಿಯರ್ ಇಲ್ಲ.. ಕಳಿಸುವೆ ನಿಮಗೆ .. ನೀವಾ ನೋಡಿ ಹೇಳಿ…

 33. shivu.k
  ಮೇ 15, 2009 @ 04:27:52

  ಶಮ ಮೇಡಮ್,

  ಕಾರ್ಯಕ್ರಮದ ವಿವರವನ್ನು ಚೆನ್ನಾಗಿ ಬರೆದಿದ್ದೀರಿ…ಓದಿದ ಮೇಲೆ ಮತ್ತು ಮಲ್ಲಿಕಾರ್ಜುನ್ ಹೇಳಿದ ಮೇಲೆ ನನ್ನ ಮೇಲೆ ನನಗೆ ಕೋಪ ಬಂತು ನಾನು ಹೋಗಲಾಗದಿದ್ದುದ್ದಕ್ಕೆ…ಅಂದು ನನಗೆ ಬೇರೆ ಕೆಲಸವಿದ್ದುದರಿಂದ ಇಂಥ ಸಂಭ್ರಮದಲ್ಲಿ ಭಾಗಿಯಾಗುವುದನ್ನು ತಪ್ಪಿಸಿಕೊಂಡೆ..ಮತ್ತೆ ನೀವು ತೆಗೆದ ಫೋಟೊಗಳು ತುಂಬಾ ಚೆನ್ನಾಗಿವೆ..ನೀವು ಒಳ್ಳೆಯ, ಸಮಯಪ್ರಜ್ಞೆಯುಳ್ಳ ಛಾಯಾಗ್ರಾಹಕಿ ಅನ್ನಿಸುತ್ತೆ..ಹೀಗೆ ಕ್ಲಿಕ್ಕಿಸುತ್ತಿರಿ…ನಿಮ್ಮ ಲೇಖನ ಮತ್ತು ಫೋಟೋ ನೋಡಲು ಬರುತ್ತಿರುತ್ತೀನಿ…
  ಧನ್ಯವಾದಗಳು.

  ಧನ್ಯವಾದಗಳು.

 34. ವಿಜಯರಾಜ್ ಕನ್ನಂತ
  ಮೇ 15, 2009 @ 04:51:05

  ok.. kalisi

 35. minchulli
  ಮೇ 16, 2009 @ 07:25:41

  vijay, i have sent it…

 36. minchulli
  ಮೇ 18, 2009 @ 13:04:49

  ಶಿವೂ, ನಿಮ್ಮ ಕಾಮೆಂಟ್ ಓದಿ ಅಚ್ಚರಿ.. ನೀವು ನನ್ನ ಬ್ಲಾಗಿಗೆ ಬಂದಿದ್ದೀರಿ ಮತ್ತು ಕಾಮೆಂಟ್ ಹಾಕಿದ್ದೀರಿ ಕೂಡ.. ಮಹಿಳೆಯರ ದಿನಕ್ಕೆ ಶುಭಾಶಯವೂ ಬಂದಿತ್ತು. ಇರಲಿ ..ನಿಮ್ಮ ನಲ್ಮೆಗೆ ವಂದನೆ.. ನಿಮ್ಮಮನೆಯಲ್ಲಿ ಮಾವಿನ ಅಡಿಗೆ ಮಾಡಿದಾಗ ಹೇಳದಿದ್ದರೆ ಮುಂದಿನ ಪರಿಣಾಮ ದೇವರೇ ಬಲ್ಲ… ಮುಂದೆ ಯಾವತ್ತೂ ಭೂಪಟಗಳು ಸಿಗದಿರಲಿ ಅಂತ ನಾ ಹೇಳಲೂ ಬಹುದು…

 37. minchulli
  ಮೇ 18, 2009 @ 13:09:00

  ಶಿವೂ, ನಿಮ್ಮ ಕಾಮೆಂಟ್ ಓದಿ ಖುಷಿಯಾಯ್ತು.. ನಾನು ಪ್ರೊಫೆಶನಲ್ ಛಾಯಾಗ್ರಾಹಕಿ ಅಲ್ಲ.. ಅದು ನನ್ನ ಬಿಡುವಿನ ವೇಳೆಯ ಸಂಗಾತಿ.. ನನಗೊಬ್ಬ ಸಂಗಾತಿ ಬಂದ ಮೇಲೆ ಅದೂ ಕಮ್ಮಿಯಾಗಿದೆ.. ನಿಮ್ಮನ್ನು ನಾನೂ ಅವತ್ತು ನಿರೀಕ್ಷೆ ಮಾಡಿದ್ದೆ.. ಅಂದ ಹಾಗೆ ನನ್ನನ್ನು ದಯವಿಟ್ಟು ಮೇಡಂ ಅನ್ನಬೇಡಿ. ಶಮ ಅನ್ನೋದು ನಾನು ತುಂಬಾ ಇಷ್ಟಪಟ್ಟು ಆರಿಸಿಕೊಂಡ ಹೆಸರು . ಅದೇ ಇರಲಿ ಸಾಕು..

 38. Sibanthi Padmanabha
  ಮೇ 22, 2009 @ 05:56:01

  ಅಪರೂಪಕ್ಕೊಂದಾರಿ ನೀನೂ ಲಾಯಿಕ ಬರೆತ್ತೆ ಕೂಸೆ!

 39. minchulli
  ಮೇ 22, 2009 @ 09:33:00

  ಕ…ಕೋ..ಮಂ..ಕ.. ಎಲ್ಲಾ ನೀನೆ ಅಪ್ಪಚ್ಚಿ..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: