……..ಗೆ

ಸವಿಯಬೇಕಿದೆ ನಾವು ಜತೆಯಾಗಿ
ಒಂದು ಸುಂದರ ರಾತ್ರಿ
ನನ್ನ ನಿನ್ನ ಹೃದಯ ಸೇರುವ
ಮಾರ್ದವತೆಯ ರಾತ್ರಿ
ಬಾನಂಚಿನ ಬೆಳ್ಳಿ ಮಿಂಚನು
ಭುವಿಗೆ ತರುವ ರಾತ್ರಿ
ನಿನ್ನ ತೆಕ್ಕೆಯಲಿ ನಾನು ಮಗುವಾಗಿ
ಸ್ವರ್ಗ ಕಾಣುವ ರಾತ್ರಿ
ಕನಸಿನೆಳೆಗಳ ಹಿಡಿದು ತಂದು
ನನಸು ನೇಯುವ ರಾತ್ರಿ
ಮುನಿಸು ತಂದ ಕಹಿಗಳೆಲ್ಲವ
ಅಳಿಸಿ ಹಾಕುವ ರಾತ್ರಿ
ಭಾರ ಬದುಕಿನ ದೂರ ದಾರಿಗೆ
ಬೆಳಕು ತೋರುವ ರಾತ್ರಿ
ತಪ್ಪುಗಳ ಲೆಕ್ಕ ಮರೆತು
ಒಪ್ಪ ಮಾಡುವ ರಾತ್ರಿ
ಮೈ ಮನಸಿನ ಹಂಗು ತೊರೆದು
ಆತ್ಮ ಬೆಸೆಯುವ ರಾತ್ರಿ
*****

(ಎಲ್ಲೋ ಓದಿದ್ದ ಕವನದ ಗುಂಗಿನಲ್ಲಿ ಬರೆದಿದ್ದು)

20 ಟಿಪ್ಪಣಿಗಳು (+add yours?)

 1. svatimuttu
  ಏಪ್ರಿಲ್ 20, 2009 @ 12:28:02

  ಅಕ್ಕ ತುಂಬಾ ಮುದ್ದಾಗಿ ಬರೆದಿದ್ದೀರಿ…..

 2. jogi
  ಏಪ್ರಿಲ್ 21, 2009 @ 03:56:58

  liked your poem. the last four lines are very good. i have been reading your blog. i have lost your fone number.

 3. minchulli
  ಏಪ್ರಿಲ್ 21, 2009 @ 06:01:17

  muttigondu savimuttu… thank you ..

 4. ಶೆಟ್ಟರು (Shettaru)
  ಏಪ್ರಿಲ್ 21, 2009 @ 10:34:12

  ……..ಗೆ ಮುಟ್ಟಲಿ ನಿಮ್ಮ ಮನದ ಭಾವವು
  ಗೆಲ್ಲಲಿ ಈ ರಾತ್ರಿ, ತಪ್ಪು ಯಾರದು ಎಂದು ಅರಿಯದೇ..

  -ಶೆಟ್ಟರು

 5. minchulli
  ಏಪ್ರಿಲ್ 22, 2009 @ 09:58:25

  ಶೆಟ್ಟರೆ ಇವು ಸುಮ್ಮನೆ ಹೊಳೆದ ಸಾಲುಗಳು …
  …..ಗೆ ನಿರಂತರ ಮುಟ್ಟುತ್ತಲೇ ಇರುತ್ತದೆ ನನ್ನ ಮನದ ಭಾವಗಳು..
  ಧನ್ಯವಾದಗಳು ನಿಮ್ಮ ಹಾರೈಕೆಗೆ..

 6. minchulli
  ಏಪ್ರಿಲ್ 22, 2009 @ 10:03:15

  ಧನ್ಯವಾದಗಳು ನಿಮ್ಮ ಕಾಮೆಂಟ್ ಗೆ ಜೋಗಿ ಸರ್.. ನನ್ನ ನಂ. ನಿಮಗೆ ಎಸ್.ಎಂ.ಎಸ್. ಮಾಡಿರುವೆ. ನನಗೆ accident ಆಗೋ ಮೊದಲು ನಿಮ್ಮ ಬಳಿ ಮಾತಾಡಿದ್ದು… ಆಮೇಲೆ ನಾನು ಬರಲಾಗಲೇ ಇಲ್ಲ..ನಿಮಗೆ ಹೊಸ ಕಾರಿನ ಸ್ವೀಟ್ ಕೊಡೊ ಮೊದಲೇ ಅದರ ಜೀವ ಹೋಯ್ತು.. ಆದ್ರೆ ಅದು ನನ್ನ ಜೀವ ಉಳಿಸಿತು.. !!!

 7. guru
  ಏಪ್ರಿಲ್ 22, 2009 @ 10:49:36

  ನಿನ್ನ ತೆಕ್ಕೆಯಲಿ ನಾನು ಮಗುವಾಗಿ
  ಸ್ವರ್ಗ ಕಾಣುವ ರಾತ್ರಿ
  neenu maguvadadre, nanu tayiyagi jogula haduve.

 8. minchulli
  ಏಪ್ರಿಲ್ 22, 2009 @ 13:34:59

  ಧನ್ಯವಾದಗಳು “ಗುರು”ಗಳೇ …
  ಬರುತ್ತಾ ಇರಿ.

 9. malathi S
  ಏಪ್ರಿಲ್ 23, 2009 @ 14:34:30

  ತುಂಬ ಹಿತವಾಗಿದೆ ಈ ಪದ್ಯ, Dear Shama

  🙂

  ಮಾಲತಿ ಎಸ್.

 10. ಬಾಲ
  ಏಪ್ರಿಲ್ 23, 2009 @ 17:42:30

  ..ಮುನಿಸು ತಂದ ಕಹಿಗಳೆಲ್ಲವ
  ಅಳಿಸಿ ಹಾಕುವ ರಾತ್ರಿ..

  ಸುಂದರವಾದ ಕವನ

 11. minchulli
  ಏಪ್ರಿಲ್ 25, 2009 @ 12:27:13

  ನಿಮ್ಮ ವಿಶ್ವಾಸವೇ ನಮ್ಮ ಶ್ವಾಸ .. ಮಾಲತಿ ಈ ಕಡೆ ಬರದೆ ತುಂಬಾ ದಿನ ಆಯ್ತೇನೋ…

 12. minchulli
  ಏಪ್ರಿಲ್ 25, 2009 @ 12:27:51

  ಧನ್ಯವಾದಗಳು ಬಾಲ ರವರಿಗೆ.. keep visiting

 13. ವಿಜಯರಾಜ್ ಕನ್ನಂತ
  ಏಪ್ರಿಲ್ 27, 2009 @ 05:44:35

  super…

 14. minchulli
  ಏಪ್ರಿಲ್ 27, 2009 @ 12:05:47

  thanks a lot vijay

 15. ಗಿರಿ
  ಏಪ್ರಿಲ್ 29, 2009 @ 11:09:39

  ಬಾನಂಚಿನ ಬೆಳ್ಳಿ ಮಿಂಚನು
  ಭುವಿಗೆ ತರುವ ರಾತ್ರಿ

  ವಾವ್.. ಚಂದದ ಸಾಲುಗಳು… ರಮ್ಯತೆಯು ತುಂಬಿ ಹರಿಯುವ ಕವನ, ಚೆನಾಗಿದೆ…

  ಧನ್ಯವಾದಗಳು,
  -ಗಿರಿ

 16. minchulli
  ಏಪ್ರಿಲ್ 29, 2009 @ 11:25:23

  ಥಾಂಕ್ಯೂ ಗಿರಿ.. ಬರುತ್ತಾ ಇರಿ..

 17. dharithri
  ಏಪ್ರಿಲ್ 30, 2009 @ 06:20:59

  ಶಮಾಕ್ಕ ಸೂಪರ್ರು..ತುಂಬಾ ಚೆನ್ನಾಗಿದೆ ಕವನ. ಭಾವನೆಗಳ ಮೇಲೋಗದಲ್ಲಿ ಅದ್ದಿ ತೆಗೆದುಬಿಟ್ಟಿದ್ದೀರಿ. ಸ್ವಲ್ಪ ಹೊಟ್ಟೆಗಿಚ್ಚಾಯ್ತು ನಂಗೆ ಬರೆಯಕೆ ಬರಲ್ಲಾಂತ.
  -ಧರಿತ್ರಿ

 18. minchulli
  ಏಪ್ರಿಲ್ 30, 2009 @ 13:34:58

  ಕವನ ಚೆನ್ನಾಗಿದೆ ಅನ್ನೋದು ಸತ್ಯವಿದ್ದರೂ ಇರಬಹುದು.. ನಿನಗೆ ಬರೆಯಲು ಬರೋಲ್ಲ ಅನ್ನೋದು ಸುಳ್ಳು.. ಬ್ಲಾಗಲ್ಲಿ ಸುಳ್ಳು ಬರೆಯಬಾರದು ಪುಟ್ಟಿ …

  ಹೊಟ್ಟೆ ಕಿಚ್ಚನ್ನು ತೆಗೆದುಕೊಂಡೇ ನಮ್ ಮನೆಗೆ ಬಂದ್ರೆ ನಂಗೆ ಒಂದು ದಿನದ ಗ್ಯಾಸ್ ಖರ್ಚು ಉಳಿಯುತ್ತೆ.

 19. shivu.k
  ಮೇ 15, 2009 @ 04:31:20

  ಶಮ ಮೇಡಮ್,

  ಹೀಗೆಲ್ಲಾ ರಾತ್ರಿಗಳಿರಬೇಕೆನ್ನುವ ನಿಮ್ಮ ಕಲ್ಪನೆಗೆ ಹ್ಯಾಟ್ಸಪ್…ಕವನ ತುಂಬಾ ಚೆನ್ನಾಗಿದೆ…

  ಧನ್ಯವಾದಗಳು.

 20. minchulli
  ಮೇ 16, 2009 @ 14:17:49

  kelavondu kalpanegalu nijaviruthave…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: