ತೊರೆದು ಹೋಗುವ ಮುನ್ನ

ಖಾಲಿ ಕಲ್ಲಿನ ಮಂಟಪ

ಅಳಲಾರದ ಅಸಹಾಯಕತೆಗೆ
ನಾನು ನಗಬೇಕಿದೆ ಗೆಳೆಯಾ

ನೋಯಲಾರದ ವಿಧಿಗಾಗಿ
ನಾನು ನಲಿಯಬೇಕಿದೆ ಕೆಳೆಯಾ

ಎಲ್ಲ ತುಂಬಿದೆ ಇಲ್ಲಿ
ಕೊರತೆಯಿಲ್ಲ ಸ್ಥಾನ ಮಾನಾಭರಣಕೆ
ಸಾಟಿಯಾದೀತೆ ಕೋಟಿಯು
ಹೃದಯ ತುಂಬಿದ ನಿನ್ನ ಸ್ನೇಹಕೆ

ನಿನ್ನ ಅರೆಘಳಿಗೆಯೂ ಬಿಟ್ಟಿರಲಾರೆ
ನಿನ್ನ ಪ್ರೇಮಕೆ ಬೆಲೆಯ ಕಟ್ಟಲಾರೆ
ಹೇಗಿರಲಿ ನೀನಿಲ್ಲದ ಮನೆಯಲಿ
ಉರಿದಿದೆ ಜ್ವಾಲಾಗ್ನಿ ಮನದಲಿ

ಕತ್ತಲಲಿ ಕರಗುತ್ತಿದೆ ಕನಸುಗಳು
ಅರಳದೇ ಬಾಡುತ್ತಿದೆ ಹೂವು
ಕೊರಳಲೇ ಸೊರಗುತ್ತಿದೆ ಹಾಡು
ಕಣ್ಣಲೇ ಇಂಗುತ್ತಿದೆ ಬೆಳಕು

ಆದರೂ…..
   
ನೋವೆಲ್ಲ ನನ್ನಲಿಟ್ಟುಕೊಂಡು

   
ನಿನ್ನ ಕಳುಹುತಿರುವೆ

ನಿಂಗೊತ್ತಾ…..
   
ಇಷ್ಟು ದಿನವೂ ಬೆಳಕು ನೀಡಿ

   
ಈಗ ಗುಡಿಯ ಬರಿದು ಮಾಡಿ
   
ನೀನು ಹೋಗುತ್ತಿರುವೆ….
   
ನಾನು ನಗುತ್ತಿರುವೆ.

 

 

10 ಟಿಪ್ಪಣಿಗಳು (+add yours?)

 1. PRAKASH HEGDE
  ಏಪ್ರಿಲ್ 11, 2009 @ 15:55:36

  ಬಹಳ ಸುಂದರ ಕವನ…

  ಭಾವದ ಹೊಳೆಯಲ್ಲಿ ತೇಲಿಹೋದ ಅನುಭವ…

  ಕನಸು ಹುಟ್ಟುವದು.. ಕತ್ತಲಲ್ಲಿಯೇ ಆದರೂ…
  ಬೆಳಕಿನ ಕನಸು ಕಾಣಬೇಕಿದೆ….
  ನನಸು ಮಾಡುವ ಮನಸು ಮಾಡಬೇಕಿದೆ……

  ಚಂದದ ಕವನ…
  ಅಭಿನಂದನೆಗಳು…

 2. manasu
  ಏಪ್ರಿಲ್ 12, 2009 @ 09:30:02

  kavana tumba tumba chennagide…

 3. svatimuttu
  ಏಪ್ರಿಲ್ 12, 2009 @ 11:27:21

  ಚೆನ್ನಾಗಿದೆ ಶಮಾ ಅಕ್ಕ..
  -ಇಂಚರ(ಸ್ವಾತಿಮುತ್ತು)

 4. minchulli
  ಏಪ್ರಿಲ್ 13, 2009 @ 14:33:24

  ಧನ್ಯವಾದಗಳು ಇಂಚರ.. ಬರುತ್ತಾ ಇರು..

 5. minchulli
  ಏಪ್ರಿಲ್ 13, 2009 @ 14:34:22

  ಧನ್ಯವಾದಗಳು ಮನಸೇ… ಬರುತ್ತಾ ಇರೀ..

 6. minchulli
  ಏಪ್ರಿಲ್ 13, 2009 @ 14:36:57

  ಧನ್ಯವಾದಗಳು ಪ್ರಕಾಶ್.. “ಕತ್ತಲಲ್ಲಿಯೇ ಆದರೂ… ಬೆಳಕಿನ ಕನಸು ಕಾಣಬೇಕಿದೆ…. ನನಸು ಮಾಡುವ ಮನಸು ಮಾಡಬೇಕಿದೆ” ಎಂಬುದು ನಿಜ. ಇಟ್ಟಿಗೆ ಸಿಮೆಂಟುಗಳ ನಡುವೆ ಇದ್ದುಕೊಂಡು ನಿಮ್ಮ ಭಾವ ಗುಚ್ಛವನ್ನು ಜೀವಂತವಾಗಿ ಇರಿಸಿಕೊಂಡಿದ್ದೀರಿ .. ಅದಕಾಗಿ ಖುಷಿ..

 7. dharithri
  ಏಪ್ರಿಲ್ 16, 2009 @ 08:14:29

  ಹಾಯ್ ಶಮಾಕ್ಕ …ತುಂಬಾ ಚೆನ್ನಾಗಿ ಬರೆದಿದ್ದೀರಿ.

 8. minchulli
  ಏಪ್ರಿಲ್ 16, 2009 @ 12:15:13

  thank u dharithri putti

 9. Chandu Naik
  ಏಪ್ರಿಲ್ 27, 2012 @ 08:31:13

  so nice and meaningfull kavana

 10. minchulli
  ಮೇ 23, 2012 @ 07:39:48

  Thank You Chandu

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: