ಕಳ್ಳ ಬೆಕ್ಕುಗಳಿಗೆ ಗಂಟೆ ಕಟ್ಟುವ ಕೆಲಸ

 ಚುನಾವಣೆ ಸಮೀಪಿಸುತ್ತಿದೆ. ಎಲ್ಲ ಕಡೆ ಅದೊಂದೇ ಸುದ್ದಿ. ಬೇರೆ ಸುದ್ದಿಯೇ ಇಲ್ಲವೇನೋ ಎಂಬಂತೆ ಮೀಡಿಯಾಗಳಲ್ಲಿ ಅದೊಂದೇ ಸಮಾಚಾರ. ನೀತಿ ಸಂಹಿತೆಯಂತೆ, ದುಡ್ಡು ಹಂಚುವುದಂತೆ, ಪಕ್ಷಾಂತರವಂತೆ ಹಾಗಂತೆ.. ಹೀಗಂತೆ.. ಎಲ್ಲ ಅಂತೆ ಕಂತೆಗಳ ನಡುವೆ ಎಂದಿನಂತೆ ರಾಜಕೀಯವನ್ನು, ರಾಜಕಾರಣಿಗಳನ್ನು ಅವರ ಚಿಲ್ಲರೆ ವ್ಯವಹಾರಗಳನ್ನು ಬೈಯುತ್ತ ನಮ್ಮ ಪಾಡಿಗೆ ನಾವಿದ್ದೇವೆ. ಲಕ್ಷಾಂತರ ದುಡ್ಡು ಸಿಕ್ಕಿದ ಕೂಡಲೇ ಪಕ್ಷಾಂತರ.. ನಿನ್ನೆ ಎಣ್ಣೆ ಸೀಗೆ ಆಗಿದ್ದವರು ಇಂದು ಬೆಳಗ್ಗೆ ಹೊತ್ತಿಗಾಗಲೇ ಭಾಯಿ ಭಾಯಿ.. ಎಂಥ ಹೀನಾಯ ನಡವಳಿಕೆ. ಬಾಗಿಲ ಬಳಿಗೆ ಮತ ಯಾಚನೆಗೆ ಬಂದವರನ್ನು ಕೇಳಿ ನೋಡಿ ಚುನಾವಣಾ ನೀತಿ ಸಂಹಿತೆ ಅಂತಾರಲ್ಲ ಹಾಗಂದರೇನು ಅಂತ. ಯಾವೊಬ್ಬ ರಾಜಕಾರಣಿಗಾದರೂ ಸ್ಫಷ್ಟ ತಿಳುವಳಿಕೆ ಇದೆಯಾ ? ಆ ಕ್ಷೇತ್ರದ ಬಗ್ಗೆ ಒಂದಷ್ಟು ಮಾಹಿತಿ ಅಂತ ಅವರ ಕ್ಷೇತ್ರದಲ್ಲಿ ಎಷ್ಟು ಶಾಲೆಗಳಿವೆ, ಎಷ್ಟು ಆಸ್ಪತ್ರೆಗಳು ಅಂತಾದರೂ ಗೊತ್ತಾ ಕೇಳಿದರೆ ಬೆಬೆಬ್ಬೆ… ಅಲ್ಲ ಇಂಥವರಿಗೆ ನಾವು ಓಟು ಕೊಟ್ಟು ಗೆಲ್ಲಿಸುತ್ತೇವಲ್ಲಾ ನಿಜಕ್ಕೂ ನಮ್ಮ ಮತದ ಪಾವಿತ್ರ್ಯ ಉಳಿಯುತ್ತಾ ?
 ಇನ್ನು ಇಂಥಾ ಕ್ಷೇತ್ರದಲ್ಲಿ ಇಷ್ಟು ಅಭ್ಯಥರ್ಿಗಳು ನೀತಿ ಸಂಹಿತೆ ಮುರಿದರು ಅಂತ ವರದಿ ಮಾಡ್ತಾರಲ್ಲ ಅನಂತರ ಅವರಿಗೇನಾಯಿತು ? ಯಾವುದಾದರೂ ಶಿಕ್ಷೆಯಿದೆಯಾ ವರದಿ ಮಾಡಿದ್ದಾರಾ ? ಹಂಚಿದ ದುಡ್ಡು, ಹಂಚಲು ಸಾಗಿಸುತ್ತಿರುವ ದುಡ್ಡು ಹಿಡಿದರೆಂಬ ಸುದ್ದಿಗೆ ಮುಗೀತು.. ಆ ದುಡ್ಡನ್ನು ಆಮೇಲೇನು ಮಾಡಿದರು ? ಅದನ್ನು ಯಾರೂ ಹೇಳಲಿಲ್ಲ. ನಾವೂ ಕೇಳಲಿಲ್ಲ. ಅಷ್ಟಕ್ಕೂ ಅವರು ಹಂಚುವುದೆಲ್ಲಾ ನಮ್ಮ ದುಡ್ಡನ್ನೇ ಅಲ್ವಾ ? ತಾವು ಸ್ವತಃ ದುಡಿದು ಗಳಿಸಿದ್ದೇ ಆಗಿದ್ರೆ ಈ ಥರ ಖಚರ್ು ಮಾಡ್ತಾ ಇದ್ರಾ ?
 ಒಂದು ವೇಳೆ ಒಬ್ಬನನ್ನು ಈ ಬಾರಿ ಗೆಲ್ಲಿಸಿದರೆ ಅವನು ಇನ್ನೆರಡು ತಿಂಗಳಿಗೆ ಪಕ್ಷಾಂತರ. ಮತ್ತೆ ಚುನಾವಣೆ. ಅದಕ್ಕೂ ಖಚರ್ಾಗುವುದು ನಮ್ಮದೇ ಹಣ. ಇದನ್ನೆಲ್ಲ ತಡೆಗಟ್ಟುವುದು ಹೇಗೆ ? ಯಾರು ? ನನ್ ಪ್ರಕಾರ ನಮ್ಮಲ್ಲಿ ನಾಯಿಕೊಡೆಗಳಂತೆ ಉದಯಿಸುವ ಪಕ್ಷಗಳ ಹುಟ್ಟಿಗೆ ಅವಕಾಶವೇ ಇರದಂತೆ ಮೊದಲು ತಡೆಗಟ್ಟಬೇಕು. ಇಡೀ ದೇಶದಲ್ಲಿ 2-3 ಪಕ್ಷಗಳು ಮಾತ್ರ ಇರಬೇಕು. ಒಂದು ಪಕ್ಷದಿಂದ ಗೆದ್ದು ಬಂದ ಮೇಲೆ ಆತನ ಅವಧಿ ಪೂರ್ಣಗೊಳ್ಳುವ ವರೆಗೆ ಆತ ಪಕ್ಷ ಬದಲಾಯಿಸುವಂತಿಲ್ಲ; ಪಕ್ಷಾಂತರ ಮಾಡುವುದೇ ಆದಲ್ಲಿ ಮುಂದಿನ 5 ವರ್ಷ ಅವನು ಯಾವ ಪಕ್ಷದಿಂದಲೂ ಚುನಾವಣೆಗೆ ಸ್ಪಧರ್ಿಸಲು ಅವಕಾಶ ಇರದಂತೆ ಕಾನೂನು ಮಾಪರ್ಾಟಾಗಬೇಕು. ಆದರೆ ಇದೆಲ್ಲ ಮಾಡುವವರ್ಯಾರು ಎಂಬುದಲ್ಲವೇ ಪ್ರಶ್ನೆ ?
 ಇವೆಲ್ಲಕ್ಕಿಂತ ಬಹುಮುಖ್ಯವಾಗಿ ನಂಗೆ ಅನಿಸಿದ್ದೆಂದರೆ ಜನರು ಫುಡಾರಿಗಳು ನೀಡುವ ಕಾಸಿಗೆ ಕೈಯೊಡ್ಡುವುದನ್ನು ನಿಲ್ಲಿಸಬೇಕು.(ಹೀಗಾಗಬೇಕಾದಲ್ಲಿ ಪ್ರತಿಯೊಬ್ಬನಿಗೂ ದಿನದ ಅನ್ನಕ್ಕೆ ಕೊರತೆಯಾಗದಂಥ ವ್ಯವಸ್ಥೆ ಬೇಕಾಗಬಹುದೇನೋ). ಚುನಾವಣೆಗಾಗಿ ಕಂತೆ ಕಂತೆ ದುಡ್ಡು ನೀಡುವ ಉದ್ಯಮಿಗಳಾಗಲೀ, ಭೂಗತ ದೊರೆಗಳಾಗಲೀ ಇತರರಾಗಲೀ ದುಡ್ಡು ಸುರಿಯೋದನ್ನು
ನಿಲ್ಲಿಸಬೇಕು. (ರಾಜಕಾರಣಿಗಳಿಂದ ತಮಗೆ ಬೇಕಾದಂಥ ಎಲ್ಲ ಉಪಕಾರಗಳನ್ನು ಮಾಡಿಸಿಕೊಂಡ ನಂತರ ದುಡ್ಡು ಕೊಡದೇ ಇರುವುದಾದರೂ ಹೇಗೆ). ಈ ಫುಡಾರಿಗಳು ಖಚರ್ು ಮಾಡೋದೇ ಆದರೆ ಸ್ವಂತ ದುಡ್ಡಿನಿಂದ ಮಾತ್ರ ಎಂಬಂತಾಗಬೇಕು (ಹಾಗಿದ್ದಲ್ಲಿ ಮತದಾರನಿಗೆ ಯಾವ ಅಭ್ಯಥರ್ಿಯೂ ಏನೂ ಕೊಡಲಿಕ್ಕಿಲ್ಲವೇನೋ).

 ಮತ ಅಮೂಲ್ಯ, ಪವಿತ್ರ; ಪ್ರತಿಯೊಬ್ಬನೂ ಮತ ಚಲಾಯಿಸಲೇ ಬೇಕು. ಅದು ನಮ್ಮ ಹಕ್ಕುಮತ್ತು ಕರ್ತವ್ಯ ಅಂತಾರಲ್ಲ, ನಿಮಗ್ಗೊತ್ತಾ ಎಲ್ಲ ಅಭ್ಯಥರ್ಿಗಳೂ ಅಸಮರ್ಥರೆನಿಸಿದರೆ 49-ಓರಂತೆ ತಟಸ್ಥ ಮತ ಚಲಾವಣೆ ಸಾಧ್ಯ. ನಮಗೆ ಆ ಹಕ್ಕೂ ಇದೆ.

“49-ಓ” ಅಂದರೇನು ?
 ನನಗೆ ಗೊತ್ತಿರುವ ಮಾಹಿತಿಯಂತೆ ನಮ್ಮ ಸಂವಿಧಾನ ನಮಗಿತ್ತ ಅಧಿಕಾರ ಇದು. 1969ರ ಚುನಾವಣೆಯ ಕಾಯ್ದೆ ನಿಯಮಾವಳಿಯ ಸೆಕ್ಷನ್ 49-ಓ ಹೀಗೆ ಹೇಳುತ್ತೆ. ಮತದಾರ ಮತಗಟ್ಟೆಗೆ ಹೋಗಿ ತನ್ನ ಗುರುತು ಹೇಳಿ ತನ್ನ ಬೆರಳಿಗೆ ಗುರುತು ಹಾಕಿಸಿಕೊಂಡು ಮತಗಟ್ಟೆಯ ಅಧಿಕಾರಿಯಲ್ಲಿ ತಾನು ಯಾರಿಗೂ ಮತ ಹಾಕಲು ಬಯಸುತ್ತಿಲ್ಲವೆಂಬುದನ್ನು ತಿಳಿಸಿ ಫಾಮರ್್ 17ರಲ್ಲಿ ತನ್ನ ಸಹಿ ಹಾಕಿ ಬರಬೇಕು. ಅಲ್ಲಿಗೆ, ನಮ್ಮನ್ನಾಳಲು ನಿಮಗೆ ಯೋಗ್ಯತೆಯಿಲ್ಲ ಎಂಬುದನ್ನು ನಾವು ಸಮರ್ಥವಾಗಿ ಹೇಳಿದಂತಾಗುತ್ತದೆ.(ಆದರೆ ದುರಂತ ನೋಡಿ ನಮ್ಮಲ್ಲಿ ಬಹುಪಾಲು ಜನಕ್ಕೆ ಈ ವಿಚಾರ ಗೊತ್ತೇ ಇರುವುದಿಲ್ಲ) ಇಡೀ ದೇಶದಲ್ಲೊಂದು ಬಾರಿ ಹೀಗಾದಲ್ಲಿ ಒಂದಷ್ಟು ಅನಾಚಾರಗಳು ಕಡಿಮೆಯಾದೀತೇನೋ ಎಂಬ ಆಸೆ. ಮರೀಚಿಕೆ ಅಂತೀರಾ ?

(ಸೆಕ್ಷನ್ 49-ಓ ಬಗ್ಗೆ ನಾನು ಎಲ್ಲೋ ಓದಿದ ಮಾಹಿತಿಯನ್ನಷ್ಟೆ ಇಲ್ಲಿ ಹೇಳಿದ್ದೇನೆ. ತಪ್ಪಿದ್ದರೆ ಗೊತ್ತಿರೋರು ತಿಳಿಹೇಳಿ)

12 ಟಿಪ್ಪಣಿಗಳು (+add yours?)

 1. paraanjape
  ಏಪ್ರಿಲ್ 08, 2009 @ 10:49:56

  ಶಮ
  ನಮಸ್ಕಾರ. ನೀವು ನನ್ನ ಬ್ಲಾಗಿಗೆ ಬ೦ದು ಪ್ರತಿಕ್ರಿಯಿಸಿದಾಗ ನೀವು ಕೂಡಾ ಮೂಲತಃ ಬೆಳ್ತ೦ಗಡಿ ತಾಲೂಕಿನವರೆ೦ದು ತಿಳಿದು ಸ೦ತೋಷವಾಯಿತು. ನೀವು ಹೇಳಿದ ವಿಧಿ ಕಾನೂನಿನಲ್ಲಿದೆ.
  “I VOTE NOBODY”??? ಎ೦ದು ದಾಖಲಿಸಿ ಬರುವ ಸ್ವಾತ೦ತ್ರ್ಯ ಮತದಾರನಿಗಿದೆ. ಆದರೆ ಯಾರು ಹಾಗೆ ಮಾಡುತ್ತಾರೆ ಹೇಳಿ. ಬಹುಸ೦ಖ್ಯಾತ ಜನ ಹಾಗೆ ಮಾಡಿದಾಗ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬಹುದೇನೋ ?

 2. ವಿಜಯರಾಜ್ ಕನ್ನಂತ
  ಏಪ್ರಿಲ್ 08, 2009 @ 11:21:21

  hmm… gante katttO kelsa nimmindaane shuru hangaare…:)

 3. Avinash
  ಏಪ್ರಿಲ್ 08, 2009 @ 11:38:46

  ಹೌದು ಶಮ,
  ಕಳ್ಳರ ನಡುವೆ ಒಳ್ಳೆಯ ಕಳ್ಳರನ್ನು ಆರಿಸುವ ಹಣೆಬರಹ ನಮ್ಮದು. ಆದ್ರೆ ಮತ ಹಾಕದೇ ಇದ್ರೂ, ಹಾಕಿದ್ರೂ ಅವ್ರು ಅಧಿಕಾರಕ್ಕೆ ಬರೋದಂತೂ ಖಂಡಿತ. ಹೀಗಾಗಿ ನಮ್ಮ ಹಕ್ಕು ಚಲಾಯಿಸುವುದು (ಸಾಧ್ಯವಾದರೆ) ಸೂಕ್ತ. ಯಾವತ್ತಾದ್ರೂ “ನಿಂಗೆ ಓಟು ಕೊಟ್ಟು ಆರಿಸಿದ್ದೇನೆ” ಅಂತ ಜನ ನಾಯಕರಲ್ಲಿ ವಾದ ಮಾಡುವ ಸಲುವಾಗಿಯಾದರೂ!

  ರಾಜಕಾರಣಕ್ಕೂ ಒಂದು ಕೋರ್ಸ್ ಮಾಡಬೇಕು, ಅದರಲ್ಲಿ ಪಾಸ್ ಆದವರಿಗೆ ಮಾತ್ರವೇ ಚುನಾವಣೆಗೆ ಸ್ಪರ್ಧಿಸುವಂತಾಗಬೇಕು ಎಂಬುದು ನನ್ನ ಸಲಹೆ.

 4. ಅಹರ್ನಿಶಿ
  ಏಪ್ರಿಲ್ 08, 2009 @ 12:07:52

  ಶಮ,
  ಬೇರೆ ಯಾವ ವಿಚಾರವಾದ್ರು ತಟ್ಟನೆ ಎನಾದ್ರು ಪ್ರತಿಕ್ರಿಯೆ ಹೊಳೆಯುತ್ತೆ ಆದರೆ ಈ ರಾಜಕೀಯದ ವಿಷಯದಲ್ಲಿ ಯಾಕೋ ಏನೂ ತೊಚುತ್ತಿಲ್ಲ,ಮರಿಚಿಕೆನೇ ಅನ್ಸುತ್ತೆ.ಬರಿ ಗೋಜಲು,ಗೋಜಲು.ದೇಶಸೇವೆಗಾಗಿಯೆ ರಾಜಕೀಯ ಪ್ರವೇಶ ಮಾಡಿದವರನ್ನು ನಾನು ಕಾಣಲೇ ಇಲ್ಲ.ಪ್ರಸ್ತುತ ದೇಶ ದ ಪರಿಸ್ತಿತಿಯ೦ತೂ ತು೦ಬಾ ಘೋರ.

 5. pavankir
  ಏಪ್ರಿಲ್ 09, 2009 @ 10:18:07

  Shama avare,

  nijakku nimma matu stya…sarve guna kanchanamashrayati..idu namma duradrusta..idara sudaarane yarindalo emba tatsaara beda..nammindale arambhavaagali embha haraikeyondige..

  shubha kamanegalu

 6. shama
  ಏಪ್ರಿಲ್ 09, 2009 @ 11:20:37

  ಹೌದು ಪರಾನ್ಜಪೆಯವ್ರೆ, ನೀವು ಹೇಳೋದು ನಿಜ
  ಶುಭವಾಗಲಿ,
  ಶಮ, ನಂದಿಬೆಟ್ಟ

 7. raviraj
  ಏಪ್ರಿಲ್ 09, 2009 @ 11:42:35

  olleya vichara, uttama baravanige, we need change…

 8. minchulli
  ಏಪ್ರಿಲ್ 09, 2009 @ 14:06:27

  ಆದ್ರೆ ಅವಿ, ಸವಾಲಿಗೆ ಯಾವಾಗ ಸಿಕ್ತಾರೆ ? ಮತ ಸಿಗೋ ವರೆಗೂ ಮಾತ್ರ ತಾನೆ ಅವರು ಬರೋದು

 9. minchulli
  ಏಪ್ರಿಲ್ 09, 2009 @ 14:07:03

  ಹೌದು ವಿಜಯ್ ಈ ಬಾರಿ ನಾನು ಅದನ್ನೇ ಮಾಡಬೇಕೆಂದಿರುವೆ

 10. minchulli
  ಏಪ್ರಿಲ್ 09, 2009 @ 14:08:35

  ಅಹರ್ನಿಶಿ, “ದೇಶಸೇವೆಗಾಗಿಯೆ ರಾಜಕೀಯ ಪ್ರವೇಶ ಮಾಡಿದವರನ್ನು ನಾನು ಕಾಣಲೇ ಇಲ್ಲ.ಪ್ರಸ್ತುತ ದೇಶ ದ ಪರಿಸ್ತಿತಿಯ೦ತೂ ತು೦ಬಾ ಘೋರ.. ” ಎಂದಿರಲ್ಲ.. ಒಂದಕ್ಷರ ಸುಳ್ಳಿಲ್ಲ..

 11. minchulli
  ಏಪ್ರಿಲ್ 09, 2009 @ 14:09:34

  ನಂದೂ ಅದೇ ಆಸೆ ಪವನ್

 12. minchulli
  ಏಪ್ರಿಲ್ 09, 2009 @ 14:10:43

  ravi.. its not “we need change” we have to change …

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: