ಪ್ರಾರ್ಥನೆ

ಕಣ್ಣ ಕಂಬನಿ ಮುತ್ತು

ಎಂದಿಗೂ ಬೆಳಕಿಗೆ ಬಾರದ
ಸಂಬಂಧದ ಸಂಕೋಲೆ

ನನ್ನ ಕೊರಳು ಹಿಚುಕುವ
ಮೊದಲೇ ಕೊಂದುಬಿಡು

ತಂಪು ಇರುಳಿನಲಿ
ಅರಳಿದ ಸ್ವಪ್ನದ ಹೂ
ಬದುಕಿನ ಕುಲುಮೆಯಲಿ
ಬಿದ್ದು ಬಿರಿಯಲಾಗದೆ
ಬೇಯಲಾಗದೆ ನರಳಿ
ಕರಕಾಗುತಿದೆ ನೋಡು

ನಿನ್ನೆದೆ ಸವರಿ ಮತ್ತೆ ಬಳಸಿ 
ಚುಂಬಿಸಲೆಳಸುವಾಗಲೂ

 
ನಿನ್ನೆದೆಯಲ್ಲಿ ನಾನಿಲ್ಲದೆ

ಇನ್ನಾವುದೋ ಕನವರಿಕೆಯಲಿ

ನೀ ಕಳೆದು ಹೋಗಿ
ನಾ ನರಳುವ ಮುನ್ನ

ಕಳಚಿಬಿಡು

ನೀ ನನ್ನ ಜತೆಗಿರುವ ಭ್ರಮೆ
ಒಂಟಿತನದ ವಾಸ್ತವದ
ಕಮರಿಯಲಿ ಬಿದ್ದು
ಆಕ್ರಂದನಗೈಯುತಿದೆ
ವಿರಸವಾಗುವ ಮೊದಲೇ
ಅಳಿಸಿಬಿಡು….

ನೋವಿನ ಹಸಿಗಾಯಕೆ
ನಗೆಯ ಬಟ್ಟೆಯ ಸುತ್ತಿ

ಕಂಬನಿಯ ರಕ್ತ ಒಸರಿದ್ದನ್ನು
ಮುಚ್ಚಿಡುವ ಮುಖವಾಡ
ನನಗೆ ಸಾಧ್ಯವಾಗುತಿಲ್ಲ
ಸಾಯಿಸಿಬಿಡು…..

************

2 ಟಿಪ್ಪಣಿಗಳು (+add yours?)

 1. Jayalaxmi Patil
  ಏಪ್ರಿಲ್ 28, 2009 @ 10:34:27

  ನೋವು ಚೆನ್ನಾಗಿದೆ ಅಂತ ಹೇಳೊದು ಕಷ್ಟ ಅಲ್ವಾ ಶಮಾ… ಬರವಣಿಗೆ ಚೆನ್ನಾಗಿದೆ ಎನ್ನಲೆ..? ನೀವು ನನ್ನ ಬ್ಲಾಗ್‍ಗೆ ಭೇಟಿ ಕೊಟ್ಟಿದ್ದು ಕಂಡು ಸಂತೋಷವಾಯ್ತು. ಸಮಯಾವಕಾಶ ಸಿಕ್ಕಲ್ಲಿ ಖಂಡಿತ ಭೇಟಿಯಾಗುವ.. ನಿಮ್ಮಗಳ ಹಾಗೆ ಅನವರತ ಬರೆಯಲು ಬರದು ನನಗೆ.ಹೀಗಾಗಿ ನನ್ನ ಬ್ಲಾಗ್ ಅನ್ನೊ ಮನೆಯಲ್ಲಿ ಅಲ್ಲೊಂದು ಇಲ್ಲೊಂದು ಭಾವನೆ ಹೊತ್ತ ಸಾಮಾನುಗಳು,ಉಳಿದಂತೆ ಖಾಲಿ ಖಾಲಿ… 🙂
  ನಿಮ್ಮ
  ’ಮಂಗಳತ್ತೆ’ಯ ವೇಷಧಾರಿ..

 2. minchulli
  ಏಪ್ರಿಲ್ 28, 2009 @ 13:38:16

  ನಿಮಗೆ ಬೇಜಾರಿಲ್ಲ ಅಂದ್ರೆ ನೀವು ನಂಗೆ ಮಂಗಳತ್ತೆ ಆಗಿಯೇ ಇರಿ… ಅದೇ ಖುಷಿ… (ನಿನ್ನನ್ನು ಆ ಪರಿ ಕಾಡುವ ಅತ್ತೆ ನನ್ ಹತ್ರ ಹೆಂಗಿದಾರೆ ಗೊತ್ತಾ ಅಂತ ಕಲ್ಯಾಣಿ ಸಿಕ್ಕಿದಾಗ ಹೇಳಲು ಚನ್ನಾಗಿರತ್ತೆ).. ನಂಗೂ ಜಾಸ್ತಿ ಬರೆಯಲು ಸಾಧ್ಯ ಆಗಲ್ಲ.. ಸಮಯ ಕಡಿಮೆ.. ನೀವು ಎಷ್ಟು ಬರೆದಿದ್ದೀರಿ ಎಂಬುದಕ್ಕಿಂತ ಏನು ಬರೆದಿದ್ದೀರಿ ಎಂಬುದಲ್ಲವೇ ಮುಖ್ಯ… ಅಷ್ಟಕ್ಕೂ ಬ್ಲಾಗಿನ ಬರಹ ಇಂಥದ್ದೊಂದು ಸ್ನೇಹ ಬೆಸೆದರೆ ಅದು ಎಲ್ಲಕ್ಕಿಂತ ಹೆಚ್ಚಲ್ಲವಾ ? ನಿಮ್ಮ ಕಾಮೆಂಟ್ ಗೆ ಧನ್ಯವಾದ…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: