ಮತ್ತೆ ಬಂದಿದೆ ಅಮ್ಮನ ಹಬ್ಬ

ಬ್ಲಾಗ್ ಜಗತ್ತಿನ ಬಹುತೇಕ ಮಂದಿ ನಮ್ಮ ಸಮಾಜದ ಆಗುಹೋಗುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಬರೆದಿದ್ದು ನೋಡಿದ್ದರಿಂದ ಇಂಥ ಒಂದು ಸದುದ್ದೇಶದ ಕಾರ್ಯಕ್ರಮದಲ್ಲಿ ಭಾಗಿಗಳಾಗಬಹುದು ಎಂಬ ನಿರೀಕ್ಷೆಯೊಡನೆ ಇದೊಂದು ಆಮಂತ್ರಣ ನೀಡುತ್ತಿದ್ದೇನೆ. ಬನ್ನಿ ಅಮ್ಮನ ಹಬ್ಬಕ್ಕೆ

ಹೆತ್ತವರ ತುತ್ತಿನ ಋಣಕ್ಕೆ….

 

ಪ್ರತಿ ವರ್ಷದಂತೆ ಈ ವರ್ಷವೂ 8-03-2009  ಭಾನುವಾರ ಮಾತೃ ದೇವತೆ ಪುಟ್ಟಚನ್ನಮ್ಮರವರ ಜನ್ಮದಿನದ ಅಂಗವಾಗಿ “ಪುನಂ ಪ್ಯಾಲೇಸ್”, ನಂ. 22, ಹೆಚ್.ಐ.ಜಿ., ಕೆ.ಹೆಚ್.ಬಿ. 2 ನೇ ಸ್ಟೇಜ್, ಬಸವೇಶ್ವರ ನಗರ, ಬೆಂಗಳೂರು-79 ಇಲ್ಲಿ ನಾವು ಮಾತೃ ಉತ್ಸವ ಎಂಬ ಸಾಂಸ್ಕೃತಿಕ ಹಬ್ಬ ಮಾಡುತ್ತಿದ್ದೇವೆ. ಹಿನ್ನೆಲೆ :

 

 ಮಾತೃಶ್ರೀ  ಪುಟ್ಟಚನ್ನಮ್ಮರವರು ಹೆತ್ತ ಮಕ್ಕಳಿಗಷ್ಟೇ ತಾಯಿಯಾಗಿರಲಿಲ್ಲ. ನೊಂದವರೆಲ್ಲರ ತಾಯಾಗಿ ಸ್ಪಂದಿಸಿ ಕಂಬನಿ ತೊಡೆದರು. ಇಂದು ಪುನಂ ಸಂಸ್ಥೆಯು ನ್ಯಾಯ ಧರ್ಮಗಳ ಮಾರ್ಗದಲ್ಲಿ ಸಾಗುತ್ತಿದೆಯೆಂದರೆ ಇಲ್ಲಿ ತಾಯಿ ಹಾಕಿ ಕೊಟ್ಟ ಬುನಾದಿಯಿದೆ. ಆದ್ದರಿಂದಲೇ ಅವರಿಲ್ಲದಿದ್ದರೂ ಇಲ್ಲವೆನಿಸುತ್ತಿಲ್ಲ. ಅಂಥವರು ಜನ್ಮ ತಳೆದ ಕ್ಷಣ ನಮ್ಮ ಪಾಲಿಗೆ ಮಹತ್ವಪೂರ್ಣ. ಅದಕ್ಕಾಗಿ ಅವರ ಜನ್ಮ ದಿನವನ್ನು ಅವರು ಹಾಕಿ ಕೊಟ್ಟ ಆದರ್ಶಗಳಂತೆ ಆಚರಿಸುವ ಸಂಕಲ್ಪ ನಮ್ಮದು

ಹುಟ್ಟಿನಿಂದ ಸಾವಿನವರೆಗೂ ಸಂಘಜೀವಿಗಳಾಗಿಯೇ ಬದುಕುವ ನಾವು ನಮಗೆ ಗೊತ್ತೇ ಇಲ್ಲದಂತೆ ಸಮಾಜದಿಂದ ಬಹಳಷ್ಟು ಪಡೆದುಕೊಂಡಿರುತ್ತೇವೆ. ನಮ್ಮ ಮೇಲೆ ಸಮಾಜದ ಋಣ ಬಹಳಷ್ಟಿದೆ. ಅದನ್ನು ಕೈಲಾದ ಮಟ್ಟಿಗೆ ತೀರಿಸುವುದಕ್ಕೆ ಇದೊಂದು ಪ್ರಯತ್ನವೇ ಹೊರತು ನಾವಿದನ್ನು ಸಾಧನೆ ಅಂತಾಗಲೀ, ನಾವು ಮಾಡುತ್ತಿರೋದು ಯಾರೂ ಮಾಡದ ಮಹತ್ಕಾರ್ಯ ಅಂತಾಗಲೀ ಭಾವಿಸಿಲ್ಲ. ರಕ್ತದಾನದಂಥ ಸೇವೆಯಿಂದ ಸಿಗಬಹುದಾದ ಪುಣ್ಯಕ್ಕಿಂತ ಒಂದಷ್ಟು ಜೀವಗಳಿಗೆ ಸಹಾಯ ಮಾಡಿದ ನೆಮ್ಮದಿ ಸಿಗುತ್ತದಲ್ಲ ಅದು ಹೆಚ್ಚಿನದು

mathru-invite-21mathru-invite-12

 

ವಿಶೇಷ ಏನು

ವಿಶೇಷ ಏನೆಂದರೆ ಇದು ಪೂರ್ತಿಯಾಗಿ ಜನಜಾಗೃತಿಗಾಗಿ ಸೇವಾಮನೋಭಾವದಿಂದ ಮಾಡುವ ಹಬ್ಬ. ಇದರ ಹಿಂದೆ ಯಾವುದೇ ಸ್ವಾರ್ಥವಿಲ್ಲ. ಪ್ರಚಾರಗಳ ಅಬ್ಬರವಿಲ್ಲ. ಯಾರೋ ಒಂದಿಬ್ಬರನ್ನು ಉತ್ಸವ ಮೂರ್ತಿಗಳಾಗಿ ಮೆರೆಸಲು, ಅಥವಾ ಯಾವುದೋ ಒಂದು ಪಕ್ಷಕ್ಕೆ ಪ್ರಚಾರ ನೀಡಲು ಮಾಡುವ ಕಾರ್ಯಕ್ರಮ ಇದಲ್ಲ. ಇಲ್ಲಿ ಯಾರದೂ ಕಟೌಟ್, ಭಾವಚಿತ್ರಗಳ ಬ್ಯಾನರ್ ಇರಲ್ಲ. ವಿಶೇಷವಾಗಿ ನಿಮ್ಮ ಗಮನಕ್ಕೆ ತರಬಯಸುವುದೆಂದರೆ, ಕಾರ್ಯಕ್ರಮದ ನೆಪದಲ್ಲಿ ಚಂದಾ ವಸೂಲಿ ಮಾಡಿ ಒಂದಷ್ಟನ್ನು ಖರ್ಚು ಮಾಡಿ ಉಳಿದಿದ್ದನ್ನು ಸ್ವಂತಕ್ಕೆ ಬಳಸಿಕೊಳ್ಳುವ ಯೋಜನೆ ಇದಲ್ಲ. ಯಾರಿಂದಲೂ ಒಂದು ನಯಾ ಪೈಸೆ ಸಂಗ್ರಹಿಸುವುದಿಲ್ಲ.

 

ಯಾರ್ಯಾರು ಬರ್ತಾರೆ ?

ಧಾರ್ಮಿಕ ಗುರುಗಳು, ರಾಜಕೀಯ ಧುರೀಣರು, ನ್ಯಾಯಾಧೀಶರು, ಪತ್ರಕರ್ತರು, ಚಿತ್ರಲೋಕದ ತಾರೆಯರು, ವೈದ್ಯ ವಿಶಾರದರು, ಕೈಗಾರಿಕೋದ್ಯಮಿಗಳು, ಆರಕ್ಷಕ ಪ್ರಮುಖರು, ಶಿಕ್ಷಣ ತಜ್ಞರು, ಸಾಂಸ್ಕೃತಿಕ ಶ್ರೇಷ್ಠರು, ಸಾಮಾಜಿಕ ಸೇವಾಸಕ್ತರು, ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಬರ್ತಾರೆ. ಆಮಂತ್ರಣ ಪತ್ರಿಕೆಯಲ್ಲಿ ಯಾರದೂ ಹೆಸರಿರುವುದಿಲ್ಲ. ಹೆಸರಿನಾಸೆ ಇಲ್ಲದೆ ಸೇವೆಗಾಗಿಯೇ ಬರುವ ಮನಸ್ಸಿರುವವರು ಅವತ್ತು ಖಂಡಿತ ಬಂದು ಭಾಗವಹಿಸುತ್ತಾರೆ. ಸಾಧ್ಯವಾದರೆ ರಕ್ತದಾನವನ್ನೂ ಮಾಡುತ್ತಾರೆ. ಹಾಗಂತ ಬಂದವರೆಲ್ಲ ರಕ್ತದಾನ ಮಾಡಬೇಕೆಂಬ ಒತ್ತಾಯ ಖಂಡಿತ ಇಲ್ಲ.

ಇನ್ನು ಮೂಳೆ, ಹೃದಯ, ನೇತ್ರ ತಪಾಸಣೆ ಮತ್ತು ದಂತ ತಪಾಸಣೆ ಹಾಗೂ ಚಿಕಿತ್ಸೆಗಳಿಂದ ಒಂದಷ್ಟು ಮಂದಿಗೆ ಸಹಾಯ, ಮಾರ್ಗದರ್ಶನ ದೊರಕುತ್ತದೆ. ಆಯುರ್ವೇದೀಯ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಯಿಂದ ನಮ್ಮದೇ ಆದ ಸನಾತನ ಆರೋಗ್ಯ ವೇದದ ಪ್ರಯೋಜನಗಳು ಸಿಗುತ್ತವೆ. ಯಾವುದೇ ಔಷಧಿ ಸೇವಿಸದೆ ದೇಹದ ಸ್ವಾಸ್ಥ್ಯ ಕಾಪಾಡುವ ಯೋಗವನ್ನು ಬದುಕಿಗೆ ಅಳವಡಿಸಿಕೊಳ್ಳುವುದು ಹೇಗೆಂಬ ಜ್ಞಾನ ಇಲ್ಲಿ ಸಂಪಾದನೆಯಾಗುತ್ತದೆ.

 

ವಿನಂತಿ :

ಇಂಥದ್ದೊಂದು ಸೇವಾಕಾರ್ಯಕ್ಕೆ ನಿಮ್ಮ ಬೆಂಬಲ ಬೇಕು. ಎಲ್ಲರೂ ಬರಲು ಅನುಕೂಲವಾಗಲಿ ಅನ್ನೋ ಕಾರಣಕ್ಕೆ ಇಡೀ ದಿನ ಕಾರ್ಯಕ್ರಮ ಹಮ್ಮಿಕೊಂಡಿರೋದು. ವರ್ಷದ ಒಂದು ದಿನದ ಸ್ವಲ್ಪ ಸಮಯವನ್ನು ಸೇವೆಗಾಗಿ ಮೀಸಲಿಟ್ಟು ನಮ್ಮೊಡನೆ ಕೈ ಜೋಡಿಸಿ. ಹೆಚ್ಚು ಜನ ಬಂದಷ್ಟು ಹೆಚ್ಚು ಹುಮ್ಮಸ್ಸು ನಮಗೆ. ದಯವಿಟ್ಟು ಬನ್ನಿ. ಸಾಧ್ಯವಾದರೆ ಕುಟುಂಬದವರು ಹಾಗೂ ಸ್ನೇಹಿತರನ್ನೂ ಕರೆತನ್ನಿ. ಒಮ್ಮೆ ಬಂದರೆ ಇದು ಎಲ್ಲ ಕಾರ್ಯಕ್ರಮಗಳ ಹಾಗಲ್ಲ ಅನ್ನೋದು ನಿಮಗೇ ಗೊತ್ತಾಗತ್ತೆ.

ಜಗತ್ತಿನೆಲ್ಲೆಡೆ ಇಂದು ಹಿಂಸೆ, ಭಯೋತ್ಪಾದನೆಗಳಂಥ ಹಲವು ತಲ್ಲಣಗಳು ಅತ್ತಹಾಸಗೈಯುತ್ತ ಮೆರೆಯುತ್ತಿವೆ. ಯಾರದೋ ಅಹಂಗೆ ಯಾರೋ ಬಲಿಯಾಗುತ್ತಿದ್ದಾರೆ. ಸಂದರ್ಭಗಳಲ್ಲಿ ನಾವು ಮಾನವೀಯತೆಯ ಬೆಳಕು ಹೊತ್ತಿಸಲು ಶ್ರೀಕಾರ ಹಾಕೋಣ. ನಾಳೆ ಅದುವೇ ಜಗ ಬೆಳಗುವ ಜ್ಯೋತಿಯಾದೀತುಅಹಮಿನ ಕೋಟೆಯ ಕೆಡವಿ ಹಾಕಿ ಮನವು ತೆರೆಯಲಿ ಸ್ನೇಹಕೆ; ಜತೆಯಾಗಿ ಸಾಗಲಿ ಕೋಟಿ ಹೆಜ್ಜೆಗಳು ಬಾಳಿನೊಲುಮೆಯ ತೀರಕೆಎಂಬ ವಾಣಿ ನಿಜವಾಗಲಿ.

%%%%%%%%%%%%%%%%%

 

ನಿಮ್ಮಲ್ಲಿ ಕೆಲವರಿಗೆ ನನ್ನ ಪರಿಚಯ ಇಲ್ಲಕೆಲವರ ಪರಿಚಯ ನನಗಿಲ್ಲ.. ಏನೂ ತೊಂದರೆಯಿಲ್ಲ.. ನೀವು ಬಂದು  ನಂಗೆ ಫೋನ್ ಮಾಡಿ. ಮಾತೃ ಉತ್ಸವದ ನೆಪದಲ್ಲಿ ಸ್ನೇಹದ ಹೂ  ಅರಳಲಿ

          ಶಮ, ನಂದಿಬೆಟ್ಟ

 

 

 

 

 

 

 

 

28 ಟಿಪ್ಪಣಿಗಳು (+add yours?)

 1. ವಿಕಾಸ್ ಹೆಗಡೆ
  ಮಾರ್ಚ್ 02, 2009 @ 08:45:20

  ಅರೆ! ಇದು ನಮ್ಮನೆ ಹತ್ತಿರ. ಹಿಂದಿನ ವರ್ಷ ’ಮಾತೃ ಉತ್ಸವ’ ನೋಡಿದ್ದೇನೆ.

 2. Tejaswini Hegde
  ಮಾರ್ಚ್ 02, 2009 @ 09:42:41

  ಮಿಂಚುಳ್ಳಿ ಅವರೆ,

  ತುಂಬಾ ಉತ್ತಮ ಪ್ರಯತ್ನ. ಸಂತೋಷವಾಯಿತು ತಿಳಿದು. ಖಂಡಿತ ಬರಲು ಪ್ರಯತ್ನಿಸುವೆ. ನಿಮ್ಮ ಈ ಸದುದ್ದೇಶ ಯಾವುದೇ ಅಡ್ಡಿ, ಆತಂಕಗಳಿಲ್ಲದೇ ನೆರವೇರಲೆಂದು ಹಾರೈಸುವೆ. ಒಳಿತಾಗಲಿ.

 3. Gavisidd Hosamani
  ಮಾರ್ಚ್ 02, 2009 @ 14:30:57

  ಒಳ್ಳೆಯದಾಗಲಿ….

 4. minchulli
  ಮಾರ್ಚ್ 02, 2009 @ 14:35:13

  ಮನೆ ಹತ್ತಿರ ಅಂದ ಮೇಲೆ ನೀವು ತಪ್ಪಿಸಿಕೊಳ್ಳುವ ಹಾಗಿಲ್ಲ.. ಖಂಡಿತ ಬನ್ನಿ..

 5. minchulli
  ಮಾರ್ಚ್ 02, 2009 @ 14:36:31

  ತೇಜಸ್ವಿನಿ ನೀವು ಬಂದರೆ ತುಂಬಾ ಸಂತೋಷ ಆಗುತ್ತೆ..(ನನಗೂ ನಿಮಗೂ ) ಅದಕ್ಕಾಗಿ ಬನ್ನಿ..

 6. minchulli
  ಮಾರ್ಚ್ 02, 2009 @ 14:37:26

  ಧನ್ಯವಾದಗಳು ಹೊಸಮನಿಯವರೇ
  ಸಾಧ್ಯವಾದರೆ ಬಂದು ಹೋಗಿ

 7. nag4nagu
  ಮಾರ್ಚ್ 02, 2009 @ 18:34:07

  ಅಕ್ಕ..,
  ಪವಿತ್ರ ಪ್ಯಾರಾಡೈಸ್ ಹತ್ತಿರ ಬಂದು ಫೋನ್ ಮಾಡ್ತೇನೆ..

  ವಿಳಾಸ್ ನನಗೆ ಅರ್ಥ ಹಾಗೋ ಹಾಗೆ ಹೇಳಿದ್ರೆ ಸಾಕು..!!

 8. minchulli
  ಮಾರ್ಚ್ 03, 2009 @ 06:04:11

  nag, sure.. i will….

  welcome…

 9. minchulli
  ಮಾರ್ಚ್ 03, 2009 @ 06:48:44

  nag, 4got to tell u… am happy for u called me ‘akka’
  thanks

 10. raviraj
  ಮಾರ್ಚ್ 03, 2009 @ 07:35:08

  ammana utsavakke baruv ase, adare enu madali elections declare, agive. nimma blognalli utsavada bagge bareyiri, utsava yashasviyagali…shubhavagali.

 11. Nag
  ಮಾರ್ಚ್ 03, 2009 @ 12:48:18

  me too… very Happy…!

  Sis.. Meet u ter..

 12. Vinayak Bhat
  ಮಾರ್ಚ್ 04, 2009 @ 04:46:51

  ನಿಮಗೆ ನನ್ನ ಪರಿಚಯವಿದೆಯೋ ಇಲ್ಲವೋ ನಂಗೊತ್ತಿಲ್ಲ. ಆದರೆ ನಿಮ್ಮ ಪರಿಚಯ ನನಗಿದೆ. ನೀವು, ಸಿಬಂತಿ ವಿಜಯ ಕರ್ನಾಟಕದಲ್ಲಿ ಇಂಟರ್ನಶಿಪ್ ಮಾಡುತ್ತಿರುವಾಗ, ನಾನೂ ಅದಕ್ಕಾಗಿಯೇ ಅಲ್ಲಿದ್ದೆ. ಬಹುಶಃ ನಿಮಗೀಗ ನೆನಪಾಗಿರಬಹುದು ಅಂದುಕೊಳ್ಳುತ್ತೇನೆ.
  ನಿಮ್ಮ ಹಬ್ಬ ಸಾಂಗವಾಗಿ ನೆರವೇರಲಿ. ನಾನು ದೆಹಲಿಯಿಂದ ಅಲ್ಲಿಗೆ ಬರುವುದು ಸದ್ಯಕ್ಕೆ ಅಸಾದ್ಯ. ಮುಂದೊಂದು ದಿನ ಯಾವತ್ತಾದರೂ ಅವಕಾಶವಾದರೆ ಖಂಡಿತ ಬರುವೆ.

 13. minchulli
  ಮಾರ್ಚ್ 04, 2009 @ 06:57:37

  thank u ravi… innomme bandaaga banni

 14. minchulli
  ಮಾರ್ಚ್ 04, 2009 @ 06:57:56

  thank u vinayak. replied via mail

 15. ಸಂದೀಪ್ ಕಾಮತ್
  ಮಾರ್ಚ್ 04, 2009 @ 18:45:54

  ಇಂಥ ಒಳ್ಳೆಯ ಕಾರ್ಯಕ್ರಮಗಳೂ ಅಗುತ್ತ ಬೆಂಗಳೂರಲ್ಲಿ ಗೊತ್ತೇ ಇರ್ಲಿಲ್ಲ !

  ನನ್ನ ಮನೆ ಹತ್ತಿರ ಇಲ್ಲ ಹಾಗಾಗಿ ತಪ್ಪಿಸಿಕೊಳ್ಳಬಹುದು ನಾನು 🙂 ಅಲ್ವ ಶಮ ?

  ಖಂಡಿತ ಬರ್ತೀನಿ 🙂

 16. minchulli
  ಮಾರ್ಚ್ 05, 2009 @ 05:15:22

  ಸಂದೀಪ್, ಇಲ್ಲಲ್ಲ…ಎಲ್ಲಿದ್ದರೂ ಬನ್ನಿ… ನಮ್ಮ ಸಮಾಜ ಸುಧಾರಿಸುವುದು ನಮ್ಮಂಥ ಯುವ ಮನಸುಗಳು ಗುರಿಯೆಡೆಗೆ ಕಾರ್ಯಶೀಲರಾಗಿ ದುಡಿದಾಗ್ಲೆ ಹೊರತು ಬುಧ್ಧಿಜೀವಿಗಳ ಭಾಷಣಗಳಿಂದ ಖಂಡಿತ ಅಲ್ಲ.. ಬನ್ನಿ.. ಸ್ವಾಗತ ನಿಮಗೆ …. ಮನೆ ಹತ್ತಿರ ಇಲ್ಲದಿದ್ದರೂ ತಪ್ಪಿಸಿಕೊಳ್ಳುವ ಹಾಗಿಲ್ಲ ಎಂಬ ಬೆದರಿಕೆಯೊಡನೆ
  shama.

 17. vinayaka kodsra
  ಮಾರ್ಚ್ 06, 2009 @ 11:24:57

  ammana habba chendavaagi aagaali. saadyavaadre baralu praytnisuve…
  vinayaka kodsara

 18. ಬಿ.ಸುರೇಶ
  ಮಾರ್ಚ್ 07, 2009 @ 07:39:18

  ಪ್ರಿಯರೇ,
  ನೀವು ಕಳಿಸಿದ ಅಮ್ಮನ ಹಬ್ಬದ ಆಹ್ವಾನ ತಲುಪಿತು.
  ಮಾರ್‍ಚಿ ಎಂಟರಂದು ಮಹಿಳಾ ದಿನಾಚರಣೆಗಾಗಿಯೇ ಸಿಂಧನೂರಿಗೆ ಹೊರಟಿದ್ದೇನೆ. ಹೀಗಾಘಿ ನಿಮ್ಮಲ್ಲಿಗೆ ಬರಲಾಗದು.
  ನಿಮ್ಮ ಕಾರ್‍ಯಕ್ರಮ ಯಶಸ್ವಿಯಾಗಲಿ.
  ತಾಯಿಯ ಹೆಸರಲ್ಲಿ ನಡೆವ ಎಲ್ಲಾ ಕೆಲಸಗಳಿಂದ ಮಕ್ಕಳಿಗೆ ಮಾತ್ರವಲ್ಲ, ತಾಯಿಗೂ ನೆಮ್ಮದಿ ಸಿಗಲಿ.
  ನಿಮ್ಮವ
  ಬಿ.ಸುರೇಶ

 19. Nag
  ಮಾರ್ಚ್ 08, 2009 @ 10:53:20

  Akka.. Thanks..

  thumba chanda ittu Ammana Habba..
  ella acchukaTTagi vyavste maaDidri..

  tumba santosha aytu nimma mattu nimma kuTumbdavara bETi..

  nimma ee kaarya hege saaguttale irali..

 20. shivu.k
  ಮಾರ್ಚ್ 08, 2009 @ 14:52:48

  ಶಮ ಮೇಡಮ್,

  ನನಗೆ ಬರಲು ತುಂಬಾ ಇಷ್ಟವಿತ್ತು….ನಾನು ಹೋಗುತ್ತೇನೆಂದರೆ ಚಿತ್ರ ಕರ್ಕೇರ ಕೂಡ ಬರುತ್ತೇನೆಂದು ಹೇಳಿದಳೂ….ಅದರೆ ಕೊನೆಗಳಿಗೆಯಲ್ಲಿ ನನ್ನ ಶ್ರೀಮತಿಯ ಊರಾದ ಅರಸಿಕೆರೆಗೆ ಹೋಗಬೇಕಾದ ತುರ್ತು ಬಂತು……ಭಾನುವಾರ ಬೆಳಿಗ್ಗೆ ಹೋಗಿ ರಾತ್ರಿ ಬಂದೆ….ಬರಲಾಗಲಿಲ್ಲ…ಕ್ಷಮಿಸಿ…
  ಮತ್ತೆ……

  ನಿಮಗೆ ” women’s day” ಶುಭಾಶಯಗಳು…..

  ಈ ದಿನ ನಿಮ್ಮದಾಗಲಿ ಅಂತ ನನಗೆ ಆರೈಸಲು ಇಷ್ಟವಾಗುವುದಿಲ್ಲ….ಏಕೆಂದರೆ ಇದೊಂದೇ ದಿನ ನಿಮ್ಮದಲ್ಲ…..ಪ್ರತಿಕ್ಷಣ, ನಿಮಿಷ, ಗಂಟೆ, ದಿನ, ತಿಂಗಳು, ವರ್ಷಗಳು…ಎಲ್ಲಾ ನಿಮ್ಮವೇ….ನಿಮಗಿಷ್ಟ ಪಟ್ಟಂತೆ ಇರಲು ಇವೆ.. ಪ್ರತಿಕ್ಷಣ ಪ್ರೀತಿಯಿಂದ ಇರಿ…. ಅದರ ನೆಪದಲ್ಲಿ ಪ್ರೀತಿಸಿ…..ಪ್ರೀತಿ ಹಂಚಿ…ನಿಮ್ಮನ್ನು ಪ್ರೀತಿಸಿಕೊಳ್ಳಿ……[ಇದರಲ್ಲಿ ನಮ್ಮ ಸ್ವಾರ್ಥವಿದೆ. ನೀವು ಚೆನ್ನಾಗಿದ್ದರೆ ನಮ್ಮನ್ನೆಲ್ಲಾ ಚೆನ್ನಾಗಿ ನೋಡಿಕೊಳ್ಳುತ್ತೀರಿ…..ತಾಯಿ, ಅಕ್ಕ-ತಂಗಿ, ಪುಟ್ಟ ಮಗುವಿನ ಹಾಗೆ ನಮನ್ನೂ ಪ್ರೀತಿಸುತ್ತೀರಿ…] ನಿಮ್ಮ ಪತಿ-ಮಕ್ಕಳನ್ನು… ಭಂದು ಭಾಂದವರವನ್ನು ಪ್ರೀತಿಸಿ…ಗೆಳೆಯರನ್ನು ಪ್ರೀತಿಸಿ…ಸಮಯವಿದ್ದರೆ ನಮ್ಮೆಡೆಗೂ ಒಂದಿಡಿ ಪ್ರೀತಿ…ತೋರಿಸಿ…..

  ಮತ್ತೊಮ್ಮೆ ಅಭಿನಂದನೆಗಳು…..

  ಪ್ರತಿಕ್ಷಣದಲ್ಲೂ ಪ್ರೀತಿಯಿಂದ….

  ಶಿವು…..

 21. minchulli
  ಮಾರ್ಚ್ 09, 2009 @ 13:23:01

  ಶಿವೂ, ನಿಮ್ಮ ಪ್ರೀತಿಗೆ ನಮನ. ನಮ್ಮ ಮನೆಗೆ ಆಫೀಸಿಗೆ ಬರಲು ಅಮ್ಮನ ಹಬ್ಬವೇ ಆಗಬೇಕು ಎಂದೇನಿಲ್ಲ.. ಅದೊಂದು ನೆಪ ಅಷ್ಟೇ… ಯಾವಾಗಾದ್ರೂ ಬನ್ನಿ. ನೀವು ಬಂದರದೇ ಹಬ್ಬ..

  ನಾನು ಹೆಣ್ಣು ಎಂಬ ಬಗ್ಗೆ ನಂಗೆ ಹೆಮ್ಮೆಯಿದೆ. ಹೆಣ್ಣಿನ ಬಗ್ಗೆ ನಿಮಗಿರುವ ಮಮತೆ, ವಾತ್ಸಲ್ಯ, ಗೌರವಕ್ಕೆ ವಂದೇ. ಚಿತ್ರಾ ನೀವು ನಿಮ್ಮಾಕೆ ಎಲ್ಲರೂ ಬನ್ನಿ.. ತೆರೆದಿದೆ ಮನೆ.. ಮನ…

  ಮೇಡಮ್ ಎಂಬ ಸಂಭೋದನೆ ಬೇಡ. ”ಮೇಡಮ್” ಗಿಂತ ನನ್ ಹೆಸರೇ ಚಂದ ಇದೆ ಅಲ್ವಾ ?!!! ಹಾಗೆ ಕರೆದರೆ ತೀರಾ ಫಾರ್ಮಲ್ ಅನ್ಸುತ್ತೆ.. i dont feel comfortable
  – shama

 22. minchulli
  ಮಾರ್ಚ್ 09, 2009 @ 13:25:43

  ನಾಗರಾಜ್, ನೀನು ನಿನ್ನ ಗೆಳೆಯ ಬಂದಿದ್ದು ಅಲ್ಲದೆ ರಕ್ತದಾನ ಕೂಡ ಮಾಡಿ ಹೋದಿರಿ.. ತುಂಬಾ ಸಂತೋಷ ಆಯ್ತು.. ಈ ಬಾಂಧವ್ಯ ನಿರಂತರ ಹೀಗೆ ಇರಲಿ..

 23. minchulli
  ಮಾರ್ಚ್ 09, 2009 @ 13:28:10

  ಸಂದೀಪ್ ಬರುತ್ತೇನೆ ಅಂದು ಕೈ ಕೊಟ್ಟಿದ್ದು ಯಾಕೆ ?

  ವಿನಾಯಕ್ & ಸುರೇಶ್ ಧನ್ಯವಾದಗಳು.. ಮುಂದಿನ ಹಬ್ಬಕ್ಕೆ ಬನ್ನಿ..

 24. Nag
  ಮಾರ್ಚ್ 10, 2009 @ 11:01:29

  ಖಂಡಿತ ಅಕ್ಕ..

 25. ಸಂದೀಪ್ ಕಾಮತ್
  ಮಾರ್ಚ್ 10, 2009 @ 11:55:32

  ಕ್ಷಮಿಸಿ ಶಮಾ,

  ನಾನು ಬರಬೇಕೆಂದಿದ್ದೆ ಆದ್ರೆ ನನ್ನ ನೆಚ್ಚಿನ ದೇವದಾಸ್ ಕಾಪಿಕಾಡ್ ತಂಡ ಬೆಂಗಳೂರಿಗೆ ಬಂದಿತ್ತು ಹಾಗಾಗಿ ನಾಟಕಕ್ಕೆ ಹೋಗಿ ಬಿಟ್ಟೆ ! ’ಈರ್ ಉಂಡರ ’ ಅಂತ….. ಗುರುಕಿರಣ್,ರಮೇಶ್ ಬಂದಿದ್ರು.
  ಮಂಗಳೂರಿನಲ್ಲಂತೂ ಅವರ ನಾಟಕಕ್ಕೆ ಹೋಗಲು ನನ್ನಿಂದಾಗಿರಲಿಲ್ಲ ಅದಿಕ್ಕೆ ಹೋದೆ.

  ಸತ್ಯ ಹೇಳಿದೆ ಸಿಟ್ಟು ಮಾಡ್ಕೋಬೇಡಿ… ಇನ್ನೊಂದು ಸಲ ಬರ್ತೀನಿ ಪುನಂ ಪ್ಯಾಲೇಸ್ ಗೆ ’ಹಾಗೆ ಸುಮ್ಮನೆ’….

 26. minchulli
  ಮಾರ್ಚ್ 12, 2009 @ 11:39:46

  ರೀ ಸಂದೀಪ್, ನೀವು ನಮ್ಮಲ್ಲಿಗೆ ಬಂದಿದ್ರೆ ನಾವು “ಈರ್ ಉಂಡರ” ಕೇಳೋದು ಮಾತ್ರವಲ್ಲ… ಒಳ್ಳೆಯ ಒಣಸ್ ಕೂಡ ಬಡಿಸುತ್ತಿದ್ದೆವಲ್ಲಾ .. ಮಿಸ್ ಮಾಡಿಕೊಂಡ್ರಿ.. ಇನ್ನೊಮ್ಮೆ ಸುಮ್ಮನೆ ಅಲ್ಲ ನಿಜವಾಗ್ಲೂ ಬನ್ನಿ …

 27. Sadanand
  ಮಾರ್ಚ್ 13, 2009 @ 01:35:45

  I listen to CD you distributed at Kuppalli . Nanage goottila andu ………….
  chennagede

 28. minchulli
  ಮಾರ್ಚ್ 13, 2009 @ 06:01:49

  thank u sadanand ji.. keep in touch..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: