ನಮ್ಮಮ್ಮ

ನನಗೆ ಗೊತ್ತಿಲ್ಲ ಎಂದುಕೊಂಡೆಯಾ ಅಮ್ಮ

ತುಂಬಿದ ಮನೆಯಲ್ಲಿ ಜನಿಸಿದ್ದು

ಅಪ್ಪಯ್ಯನ ಮುದ್ದಿನ ಮಗಳಾಗಿದ್ದು

ವಯಸಿಗೂ ಮೀರಿ ಭಾರ ಹೊತ್ತಿದ್ದು

ದಿಂಬಿಗೆ ತಲೆಯಾನಿಸಿ ಅತ್ತಿದ್ದು

 

ನನಗೆ ಗೊತ್ತಿಲ್ಲ ಎಂದುಕೊಂಡೆಯಾ ಅಮ್ಮ

ಗೀತೆ ರಾಮಾಯಣ ಓದಿ ನೀ ಬಿಕ್ಕಿದ್ದು

ಕರ್ಣ ಸೀತೆಗೂ ಮಿಗಿಲಾಗಿ ಬದುಕಿದ್ದು

ಜಾತಿ ಮತ ಮೀರಿ ನೀ ಬೆಳೆದು ನಿಂತಿದ್ದು

ಜ್ಞಾನ ಧರ್ಮದ ಸೌರಭ ಹರಡಿದ್ದು

 

ನನಗೆ ಗೊತ್ತಿಲ್ಲ ಎಂದುಕೊಂಡೆಯಾ ಅಮ್ಮ

ನವಮಾಸ ನೋವನು ನಗುತಾ ಭರಿಸಿದ್ದು

ಎದೆಯ ಅಮೃತಕೆ ಪ್ರೀತಿ ಬೆರೆಸಿ ಕುಡಿಸಿದ್ದು

ದೇಶ ಭಕ್ತಿ ನ್ಯಾಯ ನೀತಿ ತ್ಯಾಗವ ಕಲಿಸಿದ್ದು

ಸಂಸ್ಕೃತಿ ಸಂಸ್ಕಾರಗಳ ಪಾಠ ನೀ ಹೇಳಿದ್ದು

 

ನನಗೆ ಗೊತ್ತಿಲ್ಲ ಎಂದುಕೊಂಡೆಯಾ ಅಮ್ಮ

ದಿನವೆಲ್ಲ ದುಡಿದು ಬರಿ ಹೊಟ್ಟೆಯಲಿ ಮಲಗಿದ್ದು

ಸೆಗಣಿ ಬೆರಣಿ ತಟ್ಟಿ ನಮ್ಮ ಹೊಟ್ಟೆ ತುಂಬಿದ್ದು

ಅಳು ನುಂಗಿ ನಕ್ಕು ಛಲದಿಂದ ನಡೆದಿದ್ದು

ನಿನ್ನೆದುರು ಬದುಕೇ ಸೋತು ಶರಣಾಗಿದ್ದು

 

ನಿನಗೆ ಗೊತ್ತೇನಮ್ಮಾ

ನೀನೇ ಕಲ್ಪವೃಕ್ಷವಾಗಿ ನೆರಳು ನೀಡಿದ್ದು

ನೆರಳಲ್ಲೇ ನಮ್ಮ ಬಾಳು ಬೆಳಗಿದ್ದು

***************************

(ಇದು ನನ್ನ ಅಮ್ಮನ ನಿಜ ಚಿತ್ರಣವೂ ಹೌದು)

(“ಅಮ್ಮ ನಿನ್ನ ಒಲುಮೆಗೆ” ಕವನ ಸಂಕಲನದಲ್ಲಿ ಪ್ರಕಟವಾಗಿದೆ.)

12 ಟಿಪ್ಪಣಿಗಳು (+add yours?)

 1. raviraj
  ಫೆಬ್ರ 22, 2009 @ 12:49:02

  saralavagide, chennagide

 2. minchulli
  ಫೆಬ್ರ 23, 2009 @ 05:08:59

  ಥಾಂಕ್ಯೂ ರವಿ.. ಬರುತ್ತಾ ಇರಿ .. ಇದು ನಾನು ಫಿಲ್ಮ್ ಫೆಸ್ಟ್ ದಿನ ಕೊಟ್ಟ ಸಿ.ಡಿ ಯಲ್ಲಿದೆ. ಕೇಳಿ ನೋಡಿ

 3. PARAANJAPE
  ಫೆಬ್ರ 24, 2009 @ 08:21:00

  ಮಿ೦ಚುಳ್ಳಿ
  ಸರಳವೂ, ಸು೦ದರವೂ ಆದ ಕವನ. ಚೆನ್ನಾಗಿದೆ.
  ನನ್ನ ಬ್ಲಾಗಿಗೆ ಭೇಟಿ ಕೊಟ್ಟು ಪ್ರೋತ್ಸಾಹಿಸುತ್ತಾ ಇರಿ.
  http://www.nirpars.blogspot.com

 4. PARAANJAPE
  ಫೆಬ್ರ 24, 2009 @ 08:21:45

  ಮಿ೦ಚುಳ್ಳಿ
  ಸರಳವೂ, ಸು೦ದರವೂ ಆದ ಕವನ. ಚೆನ್ನಾಗಿದೆ.
  ನನ್ನ ಬ್ಲಾಗಿಗೆ ಭೇಟಿ ಕೊಟ್ಟು ಪ್ರೋತ್ಸಾಹಿಸುತ್ತಾ ಇರಿ.

 5. minchulli
  ಫೆಬ್ರ 24, 2009 @ 11:12:32

  ಧನ್ಯವಾದಗಳು. ಖಂಡಿತ ನಿಮ್ಮ ಲೇಖನಗಳನ್ನೂ ಓದುವೆ.

 6. malathi S
  ಫೆಬ್ರ 26, 2009 @ 14:02:56

  aha minchulli -ಶಮ!!

  you have a ‘kavanagaLa sankalana’ to your credit? great da. way to go……

  ’ಅಮ್ಮ’ ಎಂಬ ಎರಡಕ್ಷರದಲ್ಲಿ ಬ್ರಹ್ಮಾಂಡವೇ ಅಡಗಿದೆ.

  take care

  🙂

  malathi S

 7. prakash hegde
  ಫೆಬ್ರ 27, 2009 @ 01:21:27

  ನಿಮ್ಮ ಕವನ ಓದಿ..

  ನಮ್ಮ ನೆನಪಾದಳು..

  ಚಂದದ ಕವಿತೆ..

  ಅಭಿನಂದನೆಗಳು..

 8. minchulli
  ಫೆಬ್ರ 28, 2009 @ 10:46:49

  ಧನ್ಯವಾದಗಳು ಪ್ರಕಾಶ್ .. ಅಮ್ಮನ ಹಬ್ಬ ಇದೆ ನಾಡಿದ್ದು ಬನ್ನಿ

 9. minchulli
  ಫೆಬ್ರ 28, 2009 @ 10:48:00

  ನಿಮ್ಮ ಅಭಿಮಾನಕ್ಕೆ ಋಣಿ.. maalati .. ನಾಡಿದ್ದು ಅಮ್ಮನ ಹಬ್ಬಕ್ಕೆ ಬನ್ನಿ

 10. minchulli
  ಫೆಬ್ರ 28, 2009 @ 10:49:17

  ಧನ್ಯವಾದಗಳು paraanjape jee
  .. ಅಮ್ಮನ ಹಬ್ಬ ಇದೆ ನಾಡಿದ್ದು ಬನ್ನಿ

 11. Tejaswini Hegde
  ಮಾರ್ಚ್ 02, 2009 @ 09:39:27

  ಮಿಂಚುಳ್ಳಿ ಅವರೆ,

  ಕವನದ ಭಾವಾರ್ಥ ಮನತಟ್ಟಿತು. ತುಂಬಾ ಚೆನ್ನಾಗಿದೆ.

 12. minchulli
  ಮಾರ್ಚ್ 02, 2009 @ 14:38:39

  ಧನ್ಯವಾದಗಳು ತೇಜಸ್ವಿನಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: