ಕೋರಿಕೆ

ಹಾಯ್,
ಪ್ರತಿ ವರ್ಷದ ಹಾಗೆ ಅಮ್ಮನ ಹುಟ್ಟು ಹಬ್ಬದ ಅಂಗವಾಗಿ ಮಾತೃ ಉತ್ಸವ ಮಾರ್ಚ್ ತಿಂಗಳ ಎರಡನೇ ಭಾನುವಾರ ಅಂದರೆ ಎಂಟನೇ ತಾರೀಖಿನಂದು ನಡೆಸಲಿದ್ದೇವೆ. ಅಂದವಾದ ಅಮ್ಮನಿಗೆ ಸಂಬಂಧಿಸಿದ ಒಳ್ಳೆಯ ಸೂಕ್ತಿಗಳು/ಕವನದ ಸಾಲುಗಳು/ Quotations ಇದ್ದರೆ ಬೇಕು. ನಿಮ್ಮಲ್ಲಿದ್ದರೆ ಫೆಬ್ರವರಿ ಎರಡನೇ ತಾರೀಖಿನೊಳಗೆ ನನಗೆ ಕಳುಹಿಸುವಿರಾ ? ಬರೆದವರ ಹೆಸರೂ ಇದ್ದರೆ ಅನುಕೂಲ.

ಅಂದ ಹಾಗೆ, ಆಹ್ವಾನ ಕಳುಹಿಸುವೆ … ತಪ್ಪದೆ ಬನ್ನಿ
ಧನ್ಯವಾದಗಳು,
ಶಮ, ನಂದಿಬೆಟ್ಟ

12 ಟಿಪ್ಪಣಿಗಳು (+add yours?)

 1. ಸುಪ್ತದೀಪ್ತಿ
  ಜನ 29, 2009 @ 18:39:12

  ಶಮಾ, ನನ್ನ ಬ್ಲಾಗಲ್ಲಿ ನಿಮ್ಮ ಕಮೆಂಟ್ ನೋಡಿ ಇಲ್ಲಿ ಬಂದೆ. ಚಂದ ಉಂಟು ನಿಮ್ಮನೆ.
  ಅಮ್ಮನ ಬಗ್ಗೆ– ನನ್ನದೇ ಎರಡು ಕವನಗಳಿವೆ; ಆಗಬಹುದಾ? ನನ್ನ ಇ-ಮೈಲ್ ನಿಮಗೆ ಗೊತ್ತಾಗುತ್ತೆ ಇಲ್ಲಿ, ಅಲ್ಲವಾ?. ಇ-ಮೈಲ್ ಮಾಡಿ. ಅಥವಾ… ನನ್ನ ಬ್ಲಾಗ್ “ಹರಿವಲಹರಿ”ಯಲ್ಲಿವೆ ಎರಡೂ ಕವನಗಳು- ಲಿಂಕ್ ಇಲ್ಲಿದೆ:

  http://harivalahari.blogspot.com/2008/05/blog-post_5608.html

 2. Avi
  ಜನ 30, 2009 @ 10:30:45

  ನನ್ನದೊಂದು ಪುಟ್ಟ ಕವನವಿದೆ. ಎರಡೇ ಅಕ್ಷರ. ಆದ್ರೆ ಅರ್ಥ ಅಪಾರ:

  ಮ್ಮ
  😉

 3. ಸುನಾಥ
  ಜನ 30, 2009 @ 13:24:20

  ಎರಡು ಪ್ರಸಿದ್ಧ ಸೂಕ್ತಿಗಳು ನಿಮಗೂ ಗೊತ್ತಿರಬಹುದು. ಆದರೂ ಇಲ್ಲಿ ರಿಪೀಟ್ ಮಾಡುತ್ತಿದ್ದೇನೆ:
  (೧) ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ(ವಾಲ್ಮೀಕಿ ರಾಮಾಯಣ)
  (೨) ಕುಪುತ್ರೊ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ (ಶಂಕರಾಚಾರ್ಯರು)
  ವಂದನೆಗಳು

 4. minchulli
  ಫೆಬ್ರ 01, 2009 @ 07:07:17

  thanks sunath…

 5. ರಂಜಿತ್
  ಫೆಬ್ರ 02, 2009 @ 10:36:35

  ******

  ನನ್ನಮ್ಮ…

  ನನ್ನಜ್ಜಿಗೆ
  ಮಗಳು,

  ಅಪ್ಪಂಗೆ
  ಹೆಂಡತಿ,

  ನನ್ನ ಹೆಂಡ್ತಿಗೆ
  ಅತ್ತೆ,

  ಅಣ್ಣಂಗೆ
  ಅಮ್ಮ,

  ನಂಗೆ ಮಾತ್ರ
  ……..

  ……..

  ಬದುಕು!

  ಇದು ನನ್ನದೊಂದು ಹಳೆಯ ಹನಿ. ಇಷ್ಟವಾದರೆ ಬಳಸಿಕೊಳ್ಳಿ..:)

 6. ಸಿಬಂತಿ ಪದ್ಮನಾಭ
  ಫೆಬ್ರ 05, 2009 @ 10:44:11

  “ದೇವರಿಗೆ ಎಲ್ಲರ ಬಳಿ ಖುದ್ದಾಗಿ ಇರುವುದು ಸಾಧ್ಯವಾಗಲಿಲ್ಲ; ಹಾಗಾಗಿ ಅಮ್ಮನನ್ನು ಸೃಷ್ಟಿಸಿದ….” (ಇದರ ಕರ್ತೃ ಯಾರು ಅಂತ ಗೊತ್ತಿಲ್ಲ. ಠಾಗೋರ್ ಇರಬಹುದು?)

 7. minchulli
  ಫೆಬ್ರ 07, 2009 @ 11:12:22

  ರಂಜಿತ್,

  ನಿಮ್ಮ ಕವನ ಅರ್ಥಪೂರ್ಣವಾಗಿಯೂ ಸುಂದರವಾಗಿಯೂ ಇದೆ. ಇಷ್ಟ ಆಯ್ತು. ಧನ್ಯವಾದಗಳು. ಆದರೆ ಬಹುಶಃ ನಮ್ಮ ಅವಶ್ಯಕತೆಗೆ ಅದು ಸರಿಹೊಂದಲಿಕ್ಕಿಲ್ಲ . ಆಮಂತ್ರಣದ ಮುಖಪುಟದಲ್ಲಿ ಬಳಸಿಕೊಳ್ಳಬಹುದಾದ ಸಾಲುಗಳು ನಂಗೆ ಬೇಕಾಗಿದ್ದು. ಮಾತೃ ಉತ್ಸವದ ಆಮಂತ್ರಣ ತಲುಪಿಸುವೆ. ಬಂದು ಹೋಗಿ ಎಂಬ ಇನ್ನೊಂದು ಕೋರಿಕೆಯೊಡನೆ ,

  ಶಮ

 8. minchulli
  ಫೆಬ್ರ 07, 2009 @ 11:16:54

  ಸುನಾಥ್,
  ಧನ್ಯವಾದಗಳು. ಆಮಂತ್ರಣದ ಮುಖಪುಟದಲ್ಲಿ ಬಳಸಿಕೊಳ್ಳಲು ಸುಲಭವಾಗಿ ಜನಸಾಮಾನ್ಯರಿಗೆ ಅರ್ಥ ಆಗಬಲ್ಲ ಸಾಲುಗಳು ನಂಗೆ ಬೇಕಾಗಿದ್ದು. ಇವು ಒಂದು ವರ್ಗದವರಿಗೆ ಮಾತ್ರ ಅರ್ಥ ಆಗಬಲ್ಲುದು. ಮಾತೃ ಉತ್ಸವದ ಆಮಂತ್ರಣ ತಲುಪಿಸುವೆ. ಬಂದು ಹೋಗಿ ಎಂಬ ಇನ್ನೊಂದು ಕೋರಿಕೆಯೊಡನೆ ,
  ಶಮ

 9. minchulli
  ಫೆಬ್ರ 07, 2009 @ 11:20:42

  ಸುಪ್ತ ದೀಪ್ತಿ
  ನಿಮ್ಮ ಕವನ ಅರ್ಥಪೂರ್ಣವಾಗಿಯೂ ಸುಂದರವಾಗಿಯೂ ಇದೆ. ಇಷ್ಟ ಆಯ್ತು. ಧನ್ಯವಾದಗಳು. ಆದರೆ ಬಹುಶಃ ನಮ್ಮ ಅವಶ್ಯಕತೆಗೆ ಅದು ಸರಿಹೊಂದಲಿಲ್ಲ. ಆಮಂತ್ರಣದ ಮುಖಪುಟದಲ್ಲಿ ಬಳಸಿಕೊಳ್ಳಬಹುದಾದ ಸಾಲುಗಳು ನಂಗೆ ಬೇಕಾಗಿದ್ದು. ನಮ್ಮಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಅಮ್ಮನಿಗೆ ಮೊದಲ ಆದ್ಯತೆ. ಯಾವತ್ತು ಬೇಕಾದರೂ ನಿಮ್ಮ ಒಪ್ಪಿಗೆಯೊಡನೆ ಬಳಸಿಕೊಳ್ಳುವೆ. ಮಾತೃ ಉತ್ಸವದ ಆಮಂತ್ರಣ ತಲುಪಿಸುವೆ. ಬಂದು ಹೋಗಿ ಎಂಬ ಇನ್ನೊಂದು ಕೋರಿಕೆಯೊಡನೆ ,

  ಶಮ

 10. minchulli
  ಫೆಬ್ರ 07, 2009 @ 11:24:59

  ಅವಿ ಸಾರ್
  ನಿಮ್ಮ ಅಪಾರ ಅರ್ಥ ಇರುವ ಕವನವೇ ನಮ್ಮ ಕಾರ್ಯಕ್ರಮದ ಜೀವಾಳ…. ಅದನ್ನು ಮತ್ತೆ ಮತ್ತೆ ಬಳಸುವುದು ಬೇಡವೆಂದು ಬೇರೆಯದನ್ನು ಆಹ್ವಾನಿಸಿದ್ದು… ಅರ್ಥ ಅಂಡಾ ಅಣ್ಣೇರೇ ?
  ಮಾತೃ ಉತ್ಸವದ ಆಮಂತ್ರಣ ತಲುಪಿಸುವೆ. ಬಂದರೆ ನಮ್ಮನೇಲಿ (ಆಸ್ಪತ್ರೇಲಿ) ಒಂದೆರಡು ದಿನ ಇದ್ದು ಹೋಗಬಹುದು…
  ಶಮ

 11. ಸುಪ್ತದೀಪ್ತಿ
  ಫೆಬ್ರ 19, 2009 @ 01:02:08

  ನಂದಿಬೆಟ್ಟದಾರೆಗ್ ತುಳುಲಾ ಬರ್ಪುಂಡಾ? ಸಂತೋಸ ಆವೊಂದುಂಡುಯೇ!

 12. minchulli
  ಫೆಬ್ರ 19, 2009 @ 06:50:38

  ಸುಪ್ತದೀಪ್ತಿ, ಯಾನ್ ತುಳುನಾಡ ಪೊಣ್ಣು. ಎನ್ನ ನಂದಿಬೆಟ್ಟ ವೇಣೂರುದ ಕೈತಲ್ ಇಪ್ಪುನ.. ಈರ್ ಒಲ್ತು ಬತ್ತಿನಿ ?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: