ಇವತ್ತು ನನಗನಿಸಿದ್ದು

ಪ್ರವಾಹದ ವಿರುಧ್ಧ ಈಜುವುದು ಕಷ್ಟಪ್ರಭಾವದ ವಿರುಧ್ಧ ಈಜುವುದು ಇನ್ನೂ ಕಷ್ಟ !!!!

ನಿಮ್ಗೇನನ್ಸುತ್ತೆ ??

 

 

 

18 ಟಿಪ್ಪಣಿಗಳು (+add yours?)

 1. nagtalwar
  ಜನ 17, 2009 @ 10:20:26

  ನಿಜ್ಜ, ನಿಜ ಅನ್ಸುತ್ತೆ…!
  ನಾಗು,ತಳವರ್.

 2. mounesh vishwakarma
  ಜನ 19, 2009 @ 17:30:17

  alli nave prabhava tumbidavaragalu prayatnisabeku… illavadalli neev helidde saty aagtade. adu aagbaradu

 3. kallare
  ಜನ 20, 2009 @ 07:12:59

  ನಿಜ್ಜ….

 4. minchulli
  ಜನ 21, 2009 @ 09:39:49

  naag, mounesh & mahesh….

  thank u all……

  regards,
  shama

 5. ಸುಪ್ತದೀಪ್ತಿ
  ಜನ 29, 2009 @ 18:26:49

  ಹೌದು, ಪ್ರಭಾವದ ಪ್ರವಾಹವೇ ಜಾಸ್ತಿ, ಅದರ ಸೆಳೆತ ಹೆಚ್ಚು. ಆದ್ದರಿಂದ ಪ್ರಭಾವದ ವಿರುದ್ಧ ಈಜು ತುಂಬಾನೇ ಕಷ್ಟ. ನಿಜವಾದ ಮಾತು.

 6. ಸಿಬಂತಿ ಪದ್ಮನಾಭ
  ಫೆಬ್ರ 05, 2009 @ 10:50:22

  ಪ್ರವಾಹದ ವಿರುದ್ಧ ಈಜುತ್ತಿದ್ದವನಿಗೆ ಹುಲ್ಲುಕಡ್ಡಿ ಸಹಾಯಕ್ಕೆ ಬಂತಂತೆ; ಪ್ರಭಾವದ ವಿರುದ್ಧ ಈಜುತ್ತಿದ್ದವನಿಗೆ politician ಎದುರಾದನಂತೆ…

 7. minchulli
  ಫೆಬ್ರ 06, 2009 @ 06:31:03

  ಪದ್ಮನಾಭ, ಸುಪ್ತದೀಪ್ತಿ
  ಹೌದು ನೀವುಗಳು ಹೇಳಿದ್ದು ಅಕ್ಷರಶಃ ಸತ್ಯ….
  ಇದು ನಿರಂತರ ನಮ್ಮಂಥವರನ್ನು ಕಾಡುತ್ತಿರುವ ಭೂತವೂ ಹೌದು
  – ಶಮ, ನಂದಿಬೆಟ್ಟ

 8. M G Harish
  ಫೆಬ್ರ 17, 2009 @ 11:43:36

  ನನಗೂ ನಿಜ ಅನ್ಸುತ್ತೆ!

 9. minchulli
  ಫೆಬ್ರ 18, 2009 @ 06:55:18

  ಧನ್ಯವಾಗಳು ಹರೀಶ್ … ಬೇಟಿ ಕೊಡುತ್ತಾ ಇರಿ ..

 10. nagathihalliramesh
  ಮಾರ್ಚ್ 30, 2009 @ 18:52:24

  ಇಲ್ಲಿ ಅಲೆ ಚಂಡಮಾರುತ ಸುನಾಮಿ ಯಾವುದೂ ಚಿರಸ್ಥಾಹಿಯಾಗಿ ಉಳಿದಿಲ್ಲ !-ನಾಗತಿಹಳ್ಳಿರಮೇಶ

 11. nagathihalliramesh
  ಮಾರ್ಚ್ 30, 2009 @ 19:02:58

  ಇದು ಬಾಳು;- ಸಹಜ ಭಾವ ಭಾವನೆ ತೊರೆದು ಆ ಊರಿಗೆ ದೊಡ್ಡದಾದ ಆಸ್ತಿಪಂಜರವು ಮಾಯಾ ಮಂತ್ರ ತಂತ್ರವ ಕಾಲನಾಗಿಸಿಕೊಂಡು ಅದರದೇ ವೇಷ ,ಸೇಡು ಕೇಡುಗಳನ್ನೇ ಮನುಕುಲ ಬೆಳಗುವ ಬೆಳಕೆಂದು ಜಗಕೆ ಸಾರುತ್ತಾ ಬಾಳುತಿದೆ . ಈ ತಬ್ಬಲಿ ಹಸಿವಿನ ಜೇಡ ಬದುಕ ಗೂಡ ಹೆಣೆಯಲು ಅದು ಜಾಗ ಕೊಡುವುದೇ ?-ನಾಗತಿಹಳ್ಳಿರಮೇಶ

 12. nagathihalliramesh
  ಮಾರ್ಚ್ 30, 2009 @ 19:04:16

  ಭಂಡ ಬಾಳು ]-
  ಆ ಪೀಠ ಭಂಡಾರದೊಳಗಿನ ಪದಾರ್ಥವ ಕಂಡು
  ಭಂಗಿ ಭಂಗುರ ಪ್ರಸಾದವ ನೆನೆವನು.
  ಬಹುಪರಾಕ್ ಭಜಕರು ಭಜನೆ ಮಾಡುತ್ತಾ ಆ ಮೂರ್ತಿಯಾ ಪೂಜಿಸುವರು
  ಅಲ್ಲಿ ನೊಂದು ಬೆಂದವರ ಬಾಳು ಭಣಗುಡುವುದು
  ಇಲ್ಲಿ ಭತ್ಯ,ಭದ್ರ .ಭಯಾನಕ ಸಾಹಿತ್ಯ ಸೃಷ್ಟಿ .
  ಜನಪ್ರಿಯತೆಗೆ ಜೋತು ಬೀಳುವ ಭಗಂಧರ ಬ್ರಾತ ಜಮಾಯಿಸಿದೆ
  ಮೂರ್ತಿಗೆ ಬ್ರಹ್ಮಜ್ನ ,ಬ್ರಹ್ಮರ್ಷಿ ಬಿರುದುಗಳ ಭಾಗ್ಯ .
  ಭುಕ್ತನ ತಲೆಯಲ್ಲಿನ ಭರ್ಜಿಗೂ ಭಲೇ ಭಲೇ ಜೈಕಾರ
  ಆ ಜೈಕಾರದ ಸದ್ದಿಗೆ ಭವ್ಯತೆ ಗಿಟ್ಟಿಸಿಕೊಳ್ಳೋ ಅವಕಾಶ !
  ಈ ಭ್ರಾಂತು ಸಾಹಿತ್ಯ ,ಭ್ರಾಜಿತ ಪೀಠ ,ಭ್ರಾಮಕ ನಡಾವಳಿ ಕಂಡ
  ಭ್ರುಕುಟಿ ಬಿಕಾರಿ ನಸುನಕ್ಕು ಭಿಕ್ಷೆ ತಿನ್ನುವನು ,ಬಡ ಜೋಗಿ ಕಾಲನ ಮಾಯೆಯಹಾಡು ಹಾಡುವನು
  -ನಾಗತಿಹಳ್ಳಿರಮೇಶ

 13. nagathihalliramesh
  ಮಾರ್ಚ್ 30, 2009 @ 19:05:11

  ಕಲೆಯ ಬೆಳಗು ]-
  ಚಿತ್ರ ,ಶಿಲ್ಪ,ಸಂಗೀತ
  ಮಗುನಗುವ ಕಾಲಾತೀತ ಕಾಲವಾಗಿ ಅರಳಿವೆ .
  ಮಿತಿಯ ಸಾಹಿತ್ಯ
  ಆ ಸಾಹಿತಿಯ ಒಡಲನ್ನೇ ತುಂಬಿಸಿ ಅಲ್ಲೇ ಗಿರಕಿ ಹೊಡೆದು ಬತ್ತಿದ ಕೆರೆಯಾಗಿದೆ .
  ಹಸಿದ ಒಡಲಿನ್ನೂ ಹಸಿಯುತ್ತಲೇ ಇದೆ .-ನಾಗತಿಹಳ್ಳಿರಮೇಶ

 14. nagathihalliramesh
  ಮಾರ್ಚ್ 30, 2009 @ 19:05:45

  ಕಣ್ಣ ಮುಚ್ಚಿ
  ಕವಿತೆಯ ಅರ್ಥವಾಗದ ಭಾಷೆಯಲ್ಲಿ ಓದಿದೆ .
  ಕವಿತೆ ಮಿನುಮಿನುಗಿ ಕುಣಿದೆದ್ದು ನಕ್ಕು ನಲಿದಾಡಿತು .
  ಯೋಚನೆ ಜಾಗ ಸಿಗದೇ ಮಲಗಿತು .
  ಕಣ್ಣ ಬಿಟ್ಟರೆ
  ಗಿಡ ಮರಗಳು ಬಾಗಿ ಫಲದ ನೆರಳ ಚಾಚಿವೆ .
  – ನಾಗತಿಹಳ್ಳಿ ರಮೇಶ

 15. nagathihalliramesh
  ಮಾರ್ಚ್ 30, 2009 @ 19:06:38

  ಹಾರಾಡುವ ರಣಹದ್ದ ನೆರಳ ನೋಡಿ ಕಾಯಕದೊಳಗಿನ ಎರೆಹುಳುವ ಹೆಕ್ಕಿ ತೆಗೆದು ಕುಕ್ಕಿ ಕುಟುಕಿ ಕಟು ವಿಮರ್ಶಕರಾದರು -ನಾಗತಿಹಳ್ಳಿ ರಮೇಶ

 16. nagathihalliramesh
  ಮಾರ್ಚ್ 30, 2009 @ 19:07:14

  ಕಾಣ್ಕೆ ]-ಈ ಕಾಲದಿ ಆ ಕವಿಯ ಕವಿತೆಯು ಅತ್ಯದ್ಭುತವಾದ ಕೋಗಿಲೆಯ ನಾದ ಹೊಮ್ಮಿಸಿದೆಯಾದರೂ ಬಾಳಿ ಬಾಳಿಸಲುಕೂಗಿ ಕರೆವ ಕಾಗೆಯ ಜೀವಸ್ವರ ಕಳೆದುಹೋಗಿದೆ .-ನಾಗತಿಹಳ್ಳಿರಮೇಶ

 17. nagathihalliramesh
  ಮಾರ್ಚ್ 30, 2009 @ 19:07:48

  ಮುಖ ; ಈ ಜನರ ಕಲಾ ಶೇಷ್ಠ ಪವಿತ್ರತೆಯ ಕಠಿಣ ಫಲವೆಲ್ಲವೂ ಆಗಸದತ್ತ .ಆ ಗಿಡ ಮರದ ಮೆದು ಸಹಜ ಘನಸಾರ ಫಲವೆಲ್ಲವೂ ನೆಲದತ್ತ -ನಾಗತಿಹಳ್ಳಿರಮೇಶ

 18. nagathihalliramesh
  ಮಾರ್ಚ್ 30, 2009 @ 19:14:25

  ಅವರು ತೊಟ್ಟಿಲಲ್ಲಿ ಹಿಮದ ಕತ್ತಿಯ ಅಡಗಿಸಿ , ಬಂದ ಜನರೆದುರು ಮಗುವ ಮಲಗಿಸಿ ಲಾಲಿ ಹಾಡುವರು ಆ ಜನರು ತೊಟ್ಟಿಲ್ಲಿಂದ ತೊಟ್ಟಿಕ್ಕುವ ನೀರ ನೋಡಿ ಉಚ್ಚೆಯ ಸಂಭ್ರಮದ ಹರಿದಾಟವೆಂದು ನಕ್ಕು ನಲಿದಾಡಿದರು
  ಮಗು ಮಿಸುಕಾಡುತಿದೆ ಉಸಿರ ತೋರೆಂದರೆ ಹೇಗೆ ತೋರುವುವುದೋ ಕಾಣೆ -ನಾಗತಿಹಳ್ಳಿ ರಮೇಶ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: