ಸಂಕ್ರಾಂತಿ ಹಾರೈಕೆ

 

 

ಸಂಕ್ರಾಂತಿಯ ಬೆಳಕು

ಸಂಕ್ರಾಂತಿಯ ಬೆಳಕು

 

ಮನುಜನ ಎದೆಯಲಿ ಇಂದೇ ಬೆಳಗಲಿ

ಶಾಂತಿಯ ನಂದಾದೀಪ

ಉಗ್ರನ ಹೃದಯಕೂ ಒಲಿಯಲಿ ಪ್ರೀತಿ

ಅಳಿಯಲಿ ಭುವನದ ತಾಪ

ಬಂದೂಕು ಹಿಡಿದ ಕೈಯಲು ಕಾಣಲಿ

ಶ್ವೇತ ವರ್ಣದ ಜಾಜಿ

ರಕ್ತದ ಓಕುಳಿ ಹರಿವೆಡೆಯಲ್ಲಿ

ಚಿಮ್ಮಲಿ ಪ್ರೀತಿಯ ಕಾರಂಜಿ

ಸುಡು ಸೂರ್ಯನ ಹೊತ್ತಿಹ ಗಗನವೆ

ಈಯಲಿ ತಂಪಿನ ಮಳೆ

ಗುಂಡಿನ ಕರ್ಕಶ ಶಬ್ದವ ಅಳಿಸಿ

ಕುಹೂ ಎನ್ನಲಿ ಕೋಗಿಲೆ

ಅಹಮಿನ ಕೋಟೆಯ ಕೆಡವಿ ಹಾಕಿ

ಮನವು ತೆರೆಯಲಿ ಸ್ನೇಹಕೆ

ಜತೆಯಾಗಿ ಸಾಗಲಿ ಕೋಟಿ ಹೆಜ್ಜೆಗಳು

ಬಾಳಿನೊಲುಮೆಯ ತೀರಕೆ

$$$$$$$$$$$$$$

6 ಟಿಪ್ಪಣಿಗಳು (+add yours?)

 1. malathi S
  ಜನ 16, 2009 @ 13:39:02

  ನಮಸ್ತೆ ಶಮಾ / ಮಿಂಚುಳ್ಳಿ
  🙂
  ನಿಮ್ಮ ಕವನಗಳು ಎಷ್ಟು ಸೊಗಸಾಗಿವೆಯಂದ್ರೆ ಪದೇ ಪದೇ ಓದಲು ನಿಮ್ಮ blog ಗೆ ಬರ್ತಾ ಇದ್ದೇನೆ.comment ಹಾಕ್ತಾ ಇದ್ದೇನೆ.ಸಂಕ್ರಾಂತಿ ಕವನ ಚೆನ್ನಾಗಿದೆ.
  ಹೀಗೆ ಬರೀತಾ ಇರಿ. ನಾನು ಸಮಯ ಸಿಕ್ಕಾಗೆಲ್ಲ್ಲ ಇಣುಕಿ ಹೋಗ್ತೇನೆ.
  ಬರ್ಲಾ
  ಬೈ ಬೈ
  ಮಾಲತಿ ಎಸ್.

 2. minchulli
  ಜನ 16, 2009 @ 14:23:52

  ಧನ್ಯವಾದ ಮಾಲತಿಯವರೇ … ನಿಮ್ಮ ಅಭಿಮಾನಕ್ಕೆ ಋಣಿ .. ಸಾಧ್ಯವಾದಷ್ಟು ಚೆನ್ನಾಗಿ ಬರೆಯುವ ಪ್ರಯತ್ನ ಮಾಡುವ ಭರವಸೆ ನನ್ನದು…

  ಪ್ರೀತಿಯಿಂದ,
  -ಶಮ, ನಂದಿಬೆಟ್ಟ

 3. ಸುಪ್ತದೀಪ್ತಿ
  ಜನ 29, 2009 @ 18:23:51

  ಶಮಾ, ನಿಮ್ಮ ಕವನದ ಆಶಯ, ಅದನ್ನು ಹೆಣೆದ ರೀತಿ ಸೊಗಸಾಗಿದೆ.
  ಚಿತ್ರವಂತೂ ತುಂಬಾನೇ ಸುಂದರವಾಗಿದೆ. ಎಲ್ಲಿಯದ್ದು? ಯಾರು ತೆಗೆದಿದ್ದು? ಹಲವಾರು ಕ್ಷಣ ನೋಡ್ತಾ ಕೂತಿದ್ದೆ.

 4. minchulli
  ಜನ 30, 2009 @ 05:51:38

  ನಿಮಗೆ ಧನ್ಯವಾದಗಳು. ಚಿತ್ರ ಕವಿಶೈಲದ ಸೂರ್ಯಾಸ್ತ. ನಾನೇ ತೆಗೆದದ್ದು. ಕ್ಯಾಮರಾ ನನ್ನ ನೆಚ್ಚಿನ ಕಾಮ್ರೇಡ್.

  ನನ್ನ ಕವನದ ಆಶಯದಂತೆ ಈ ವರ್ಷ ಸಾಗಲಿ ಎಂಬ ಆಸೆ. ಜಗದೆಲ್ಲೆಡೆ ನೋವು ನಿಟ್ಟುಸಿರು ಸಾಕಾಗಿದೆ.
  ನಾವೆಲ್ಲ ನೆಮ್ಮದಿಯಿಂದ ಬದುಕುವಂತಾದ್ರೆ ಎಷ್ಟು ಚೆಂದ ಅಲ್ವಾ

  ಅಂದ ಹಾಗೆ, ನಿಮ್ಮ ಬ್ಲಾಗು ಚೆಂದ ಇದೆ…

 5. Gavisidd Hosamani
  ಫೆಬ್ರ 23, 2009 @ 06:36:02

  ಸಂಕ್ರಾಂತಿ ಕವನ ತುಂಬಾನೇ ಚೆನ್ನಾಗಿದೆ. ಭರವಸೆಯ ಕವನ
  -Gavisidd Hosamani
  gavisidd_hosamani@yahoo.com

 6. minchulli
  ಫೆಬ್ರ 23, 2009 @ 06:49:44

  ಧನ್ಯವಾದ ಹೊಸಮನಿಯವ್ರೆ … ನಿಮ್ಮ ಇಂಥ ಬೆಂಬಲಗಳು ನನಗೆ ಭರವಸೆ..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: