ಒಂದಷ್ಟು ಹನಿಗಳು

ನಿನ್ನ ತುಟಿ

ಸವಿಯಬೇಕೆನಿಸಿತು

ನಗುವಾಗಿ

ಅಲ್ಲಿ ನೆಲೆಯಾದೆ

*************

ಮೊನ್ನೆ ಸಂಜೆ

ಸಮುದ್ರ ದಂಡೆಯಲಿ

ನೀ ನನಗೆ ಮುತ್ತಿಟ್ಟದ್ದು

ಕಂಡ ಸೂರ್ಯ

ನಾಚಿ ಕೆಂಪಾಗಿ

ಮರೆಯಾಗಿ ಹೋದ

*************

ನನ್ನ ಕನಸುಗಳನ್ನು

ಮೋಡಗಳಾಗಿ

ಬಾನಲ್ಲಿ ತೇಲಿಬಿಟ್ಟೆ

ಅವು ಮಳೆಯಾಗಿ

ನಿನ್ನೆದೆಗೆ ಸುರಿದಾಗ

ಒಲವು ಚಿಗುರೊಡೆಯಿತು

*************

ಎಲೆ ತನ್ನ ರಕ್ತ

ಬಸಿದು ಕೊಟ್ಟಿತ್ತು

ನಾನು ಮದರಂಗಿ

ಎಂದು ಸಂಭ್ರಮಿಸಿದೆ

*************

ನನ್ನನ್ನು ಹೂವಿಗೆ

ಹೋಲಿಸಬೇಡವೋ

ಬಾಡಿದ ಮೇಲೆ

ಬದುಕಿಲ್ಲವಾಗುತ್ತದೆ

*************

ನೀ ನನ್ನ ಬಿಟ್ಟು

ಹೋಗಿದ್ದಕ್ಕೆ ಅಳುತ್ತೇನೆ

ಎಂದುಕೊಂಡೆಯಾ

ಮತ್ತೊಮ್ಮೆ ಸ್ವಾತಂತ್ರ್ಯ

ಸಿಕ್ಕಿದ ಖುಷಿಯನ್ನು

ಆಚರಿಸುತ್ತಿದ್ದೇನೆ

*************

6 ಟಿಪ್ಪಣಿಗಳು (+add yours?)

 1. ವಿಜಯರಾಜ್ ಕನ್ನಂತ
  ಜನ 12, 2009 @ 12:30:43

  3 and 4 ishTa aaytu

 2. minchulli
  ಜನ 12, 2009 @ 13:06:19

  ಧನ್ಯವಾದಗಳು ವಿಜಯರಾಜ್… ನಿಮ್ಮ ಬ್ಲಾಗ್ ಇದ್ದಲ್ಲಿ ಲಿಂಕ್ ಕಳಿಸಿ.. ನಾನು ಬ್ಲಾಗ್ ಲೋಕಕ್ಕೆ ಹೊಸಬಳು

 3. malathi S
  ಜನ 12, 2009 @ 14:41:52

  minchuLLI ma’ಹನಿ’ ಯರೇ
  your honeys are easy to read and understand otherwise poems are not my cup of tea.
  keep writing. i just clicked on shama, nandibettu in ‘Avadhi’ and landed here in your ‘kusu kusuma-nasu’
  🙂
  malathi S

 4. shama, nandibetta
  ಜನ 13, 2009 @ 08:07:57

  ಧನ್ಯವಾದ ಮಾಲತಿಯವರೇ. ನಿಮ್ಮ ಪ್ರೋತ್ಸಾಹಕ್ಕೆ ಖುಷಿಯಾಯ್ತು. ಇನ್ನು ಅರ್ಥವಾಗದಂತೆ ಕವನ ಬರೆಯುವಷ್ಟು ನಾನಿನ್ನೂ ದೊಡ್ಡವಳು ಆಗಿಲ್ಲ… ನಿಮ್ಮ ಕಾಮೆಂಟ್ ಓದಿದರೆ ನೀವೂ ಚೆಂದಗೆ ಬರೆಯುವವರಂತೆ ಕಾಣುತ್ತೆ. ಹಾಗಿದ್ದರೆ, ಬ್ಲಾಗಿದ್ದರೆ ತಿಳಿಸಿ… ನಾನೂ ಇಣುಕುವೆ….

 5. ಉಮಿ
  ಫೆಬ್ರ 27, 2009 @ 04:49:59

  ತುಂಬಾ ಚೆನ್ನಾಗಿವೆ ನಿಮ್ಮ ಹನಿಗವನಗಳು 🙂

 6. minchulli
  ಫೆಬ್ರ 28, 2009 @ 10:56:46

  thank you umi ji… plz come to mathru uthsava

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: